ಕನ್ನಡ ವಾರ್ತೆಗಳು

ಪೊಲೀಸ್ ಭದ್ರತೆಯೊಂದಿಗೆ ಸುರತ್ಕಲ್ ಟೋಲ್‌ಗೇಟ್ ಶುಲ್ಕ ಸಂಗ್ರಹ ಪ್ರಾರಂಭ .

Pinterest LinkedIn Tumblr

Tollgate_Surathkal_2

ಮಂಗಳೂರು ,ಡಿ.21 : ಸುರತ್ಕಲ್ ಎನ್ಐಟಿಕೆ ಬಳಿಯ ಇರುವ ಟೋಲ್‌ಗೇಟ್‌ ರವಿವಾರ ಮಧ್ಯರಾತ್ರಿಯಿಂದ ಶುಲ್ಕ ಸಂಗ್ರಹಿಸುವ ಕಾರ್ಯವು ಪ್ರಾಂಭವಾಗಿದೆ ಎಂಬ ,ಮಾಹಿತಿಯು ಲಭ್ಯವಾಗಿದೆ.

ಆಗಸ್ಟ್7 ರಂದು ಸುರತ್ಕಲ್ ನಾಗರಿಕ ಸಮಿತಿಯು ಟೋಲ್ ಗೇಟ್ ಸ್ಥಾಪನೆ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್, ಸ್ಥಳದಲ್ಲಿ ಪೊಲೀಸ್ ಭದ್ರತೆ ಒದಗಿಸುವಂತೆ ಆದೇಶಿಸಿತ್ತು. ಇದೀಗ ರಾತ್ರಿಯಿಂದ ಪೊಲೀಸ್ ಭದ್ರತೆಯೊಂದಿಗೆ ಶುಲ್ಕ ಸಂಗ್ರಹವಾಗುವ ಕಾರ್ಯವು ಪ್ರಾರಂಭವಾಗಿದೆ.

ಕೆಲ ಸಮಯದ ಹಿಂದೆಯೇ ಟೋಲ್ ಸಂಗ್ರಹಿಸಲು ಉದ್ದೇಶಿಸಲಾಗಿದ್ದರೂ ಜನಪ್ರತಿನಿಧಿಗಳು ಮತ್ತು ನಾಗರಿಕರ ಪ್ರತಿಭಟನೆಯಿಂದ ಸಾಧ್ಯವಾಗಿರಲಿಲ್ಲ. ಸೆ.20ರಂದು ಶಾಸಕ ಮೊಯಿದೀನ್ ಬಾವಾ, ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮುಂತಾದವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಗರಿಕರು ಸ್ಥಳದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ಮೊದಲೇ ಶುಲ್ಕ ಸಂಗ್ರಹಿಸುವುದು ಸರಿಯಲ್ಲ ಎಂದು ಪ್ರತಿಭಟಿಸಿದ್ದರು. ಈ ಟೋಲ್ ಗೇಟ್ ರಚನೆಯೂ ಅವೈಜ್ನಾನಿಕವಾಗಿದೆ ಎನ್ನಲಾಗಿತ್ತು.

ನ.6ರಂದು ಸರಕು ಲಾರಿಯೊಂದು ಟೋಲ್ ಗೇಟ್ ಮೂಲಕ ಹಾದುಹೋಗುವಾಗ ಟೋಲ್‌ಗೇಟ್ ಮಾಡನ್ನು ಜಖಂಗೊಳಿಸಿತ್ತಲ್ಲದೇ ಹೆದ್ದಾರಿಯಲ್ಲಿ ಗಂಟೆಗಳ ಕಾಲ ಸಂಚಾರ ವ್ಯವಸ್ಥೆ ವ್ಯತ್ಯಯಗೊಂಡಿದ್ದನ್ನು ಸ್ಮರಿಸಬಹುದಾಗಿದೆ.

Write A Comment