ರಾಷ್ಟ್ರೀಯ

ನಿರ್ಭಯಾ ಪ್ರಕರಣ: ಬಾಲಾಪರಾಧಿ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

Pinterest LinkedIn Tumblr

Delhi-gangrape

ನಿರಾಸೆಯ ಮಡುವಿನಲ್ಲಿ ಪೋಷಕರು

ನವದೆಹಲಿ, ಡಿ.21: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ಬಿಡುಗಡೆಗೆ ತಡೆ ನೀಡಲು ಇಂದು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸುಪ್ರೀಂಕೋರ್ಟ್‌ನ ಇಂದಿನ ನಿರಾಕರಣೆ ಆದೇಶದ ಮೂಲಕ ಈ ಪ್ರಕರಣದ ಬಾಲಾಪರಾಧಿ ಬಿಡುಗಡೆಯನ್ನು ದೇಶದ ಈಗಿನ ಯಾವುದೇ ಕಾನೂನಿಗೂ ಸಾಧ್ಯವಾಗಲಿಲ್ಲ ಎಂಬ ಜ್ವಲಂತ ಸತ್ಯಕ್ಕೂ ಇಂದು ದೇಶ ಸಾಕ್ಷಿಯಾಗಿದೆ.

ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದ, ಲಕ್ಷಾಂತರ ಜನ ಮಮ್ಮಲ ಮರುಗುವಂತೆ ಮಾಡಿದ್ದ ಡಿಸೆಂಬರ್ 16, 2012 ರಂದು ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಾಲಾಪರಾಧಿಯ ಬಿಡುಗಡೆ ತಡೆಯ ಮನವಿಯನ್ನು ಇಂದು ತಿರಸ್ಕರಿಸಿರುವ ಸುಪ್ರೀಂಕೋರ್ಟ್ ನ್ಯಾಯಪೀಠ `ತೀರ್ಮಾನಿಸಬೇಕಾದರೆ ಸದ್ಯದ ಕಾನೂನಿನ ಅ‌ಡಿಯಲ್ಲೇ ತೀರ್ಮಾನ ಕೈಗೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟಿದೆ.

`ಬಿಡುಗಡೆಗೆ ತಡೆ ಕೋರಿ ಸಲ್ಲಿಸಿರುವ ಮನವಿಯನ್ನು ಬೆಂಬಲಿಸುವ ಕಾನೂನನ್ನು ನೀವು ರಚಿಸಬೇಕಿದೆ’ ಎಂದು ಅರ್ಜಿದಾರರಾದ ದೆಹಲಿ ಮಹಿಳಾ ಆಯೋಗ ಅಧ್ಯಕ್ಷೆ ಮಲಿವಾಲ್ ಅವರಿಗೆ ರಜಾಕಾಲೀನ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಎ.ಕೆ. ಗೋಯಲ್ ಮತ್ತು ಯು.ಯೂ. ಲಲಿತ್ ಸೂಚಿಸಿದ್ದಾರೆ.

ನಿರಾಸೆ ಮಡುವಿನ ತಾಯಿ

ಬಾಲಾಪರಾಧಿ ಬಿಡುಗಡೆಗೆ ನಿರಾಕರಿಸಿದ ಸುಪ್ರೀಂಕೋರ್ಟಿನ ಆದೇಶ ಹೊರಬೀಳುತ್ತಿದ್ದ ಹಾಗೆ ಅತ್ಯಾಚಾರ ಸಂತ್ರಸ್ಥೆ ಪೋಷಕರು ನಿರಾಸೆಯ ಮಡುವಿನಲ್ಲಿ ಮುಳುಗಿದ್ದಾರೆ.

`ನಮಗೆ ಸುಪ್ರೀಂಕೋರ್ಟಿನ ಮೇಲೂ ನಂಬಿಕೆ ಇರಲಿಲ್ಲ. ನನಗೆ ನ್ಯಾಯ ಸಿಗುವುದಿಲ್ಲ ಎಂದು ಮೊದಲಿನಿಂದಲೂ ತಿಳಿದಿತ್ತು ಎಂದು ಆಶಾದೇವಿ ತೀವ್ರ ಅಸಮಾಧಾನ’ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ `ನ್ಯಾಯಕ್ಕಾಗಿ ಕೊನೆಯವರೆಗೂ ಹೋರಾಟ ನಡೆಸುತ್ತೇನೆ’ ಎಂದೂ ಹೇಳಿದ್ದಾರೆ.

ಬಾಲಾಪರಾಧಿ ಬಿಡುಗಡೆಗೆ ತಡೆ ಕೋರಿ ಕೊನೆಯ ಗಳಿಗೆಯಲ್ಲಿ ದೆಹಲಿ ಮಹಿಳಾ ಆಯೋಗ ಸುಪ್ರೀಂಕೋರ್ಟ್ ಕದತಟ್ಟಿತ್ತು. ಶನಿವಾರ ತಡರಾತ್ರಿ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ರಜಾಕಾಲೀನ ಪೀಠಕ್ಕೆ ಸಲ್ಲಿಸಲಾಗಿತ್ತು.

`ತುರ್ತು ವಿಚಾರಣೆ ನಡೆಸಲು ನಿರಾಕರಿಸಿದ್ದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಇಂದಿಗೆ’ ಮುಂದೂಡಿತ್ತು.

ಆರೋಪಿ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಮನವಿಯನ್ನು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು.

ಈಗಿನ ದೇಶದ ಕಾನೂನು ಪ್ರಕರಣ ಬಾಲಾಪರಾಧಿಗೆ ಕನಿಷ್ಠ ಮೂರು ವರ್ಷದವರೆಗೆ ಶಿಕ್ಷೆ ವಿಧಿಸಬಹುದಾಗಿದೆ. ಅದರಂತೆ ಮೂರು ವರ್ಷ ಶಿಕ್ಷೆ ಅನುಭವಿಸಿರುವ ಆರೋಪಿಯನ್ನು ಇನ್ನಷ್ಟು ದಿನ ಬಾಲ ಮಂದಿರದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಒಟ್ಟಾರೆ ನ್ಯಾಯಾಲಯದ ಅಭಿಪ್ರಾಯವಾಗಿದೆ.

ಇಂದಿನ ಸುಪ್ರೀಂಕೋರ್ಟ್ ತೀರ್ಪು ಈ ಸಂಬಂಧಿತ ಕಠಿಣ ಕಾನೂನು ರಚನೆಗೆ ಪ್ರೇರಣೆಯಾದರೆ ಅದೇ ಒಂದು ರೀತಿಯಲ್ಲಿ ನಿರ್ಭಯಾ ಪೋಷಕರಿಗೆ ಸಿಗುವ ನ್ಯಾಯ.

Write A Comment