ಕನ್ನಡ ವಾರ್ತೆಗಳು

ವಿಧಾನ ಪರಿಷತ್‌ಗೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಆಯ್ಕೆ ಖಚಿತ

Pinterest LinkedIn Tumblr

ಉಡುಪಿ: ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳ ಒಲವು ಭಾರತೀಯ ಜನತಾ ಪಾರ್ಟಿಯ ಕಡೆಗಿದ್ದು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರ ಆಯ್ಕೆ ಖಚಿತವೆಂದು ಕ್ಷೇತ್ರ ಸಮಿತಿ ಅಧ್ಯಕ್ಷ ರಾಜೇಶ್ ಕಾವೇರಿ ತಿಳಿಸಿರುತ್ತಾರೆ.

Kota_Shrinivas_Poojary

ಪರಿಷತ್‌ನಲ್ಲಿ ಅತೀ ಹೆಚ್ಚಿನ ಕಲಾಪಗಳಲ್ಲಿ ಭಾಗವಹಿಸಿದ್ದಲ್ಲದೆ ಅಗತ್ಯ ವಿಷಯಗಳ ಬಗ್ಗೆ ಚರ್ಚಿಸಿ ಸಾಮಾನ್ಯ ಜನರ ಬಗ್ಗೆ ಕಾಳಜಿ ಹೊಂದಿರುವ ಕೋಟ ಶ್ರಿನಿವಾಸ ಪೂಜಾರಿಯವರು ಈ ಹಿಂದಿನ ತಮ್ಮ ಅವಧಿಯಲ್ಲಿ ಪರಿಷತ್ ಸದಸ್ಯನಾಗಿ ಮತ್ತು ಮಂತ್ರಿಯಾಗಿ ಹಲವಾರು ಜನೋಪಯೋಗಿ ಕಾರ್ಯಕ್ರಮವನ್ನು ಮಾಡಿರುವುದು ಎಲ್ಲರಿಗೂ ತಿಳಿದಿರುವ ಸತ್ಯ ಮುಂದೆಯೂ ಕೂಡ ಅವರ ಜನಪರ ಕಾಳಜಿಯನ್ನು ಬೆಂಬಲಿಸಲು ಬಿಜೆಪಿಯಿಂದ ಆಯ್ಕೆಯಾದ ಮತ್ತು ಇತರೆ ಸ್ಥಳೀಯಾಡಳಿತ ಪ್ರತಿನಿಧಿಗಳು ಮಾನಸಿಕವಾಗಿ ಸಿದ್ದತೆ ಮಾಡಿಕೊಂಡಿರುತ್ತಾರೆ.

ಆದ್ದರಿಂದ ಈ ಬಾರಿ ದಾಖಲೆ ಮತದ ಅಂತರದಿಂದ ಶ್ರೀನಿವಾಸ ಪೂಜಾರಿಯವರು ಗೆಲ್ಲುವುದು ಖಚಿತ ಎಂದು ಮೀನುಗಾರಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ. ಕಿಶೋರ್ ಕುಮಾರ್ ಮತ್ತು ಕ್ಷೇತ್ರ ಅಧ್ಯಕ್ಷ ರಾಜೇಶ್ ಕಾವೇರಿ ತಮ್ಮ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

Write A Comment