ಮುಂಬೈ, ಅ.2: ಕ್ರಿಕೆಟಿಗ ಹರ್ಭಜನ್ ಸಿಂಗ್ ಮದುವೆ ಖುಷಿಯಲ್ಲಿದ್ದಾರೆ. ಬಹುದಿನಗಳ ಸ್ನೇಹಿತೆ ಗೀತಾ ಬಸ್ರಾ ಭಜ್ಜಿ ಬಾಳಸಂಗಾತಿಯಾಗಿ ವರಿಸುತ್ತಿದ್ದಾರೆ. ಇದೀಗ ಅವರ ಮದುವೆಯ ಆಮಂತ್ರಣ ಪತ್ರಿಕೆ ಬಾರಿ ಸುದ್ದಿ ಮಾಡುತ್ತಿದೆ.
ಅಕ್ಟೋಬರ್ 27 ರಿಂದ 30ರವರೆಗೂ ದೆಹಲಿಯಲ್ಲಿ ಇವರ ಮದುವೆ ನಡೆಯಲಿದೆ. ಐದು ದಿನಗಳ ಕಾಲ ವಿಶೇಷ ರೀತಿಯಲ್ಲಿ ಇವರಿಬ್ಬರ ಮದುವೆ ಕಾರ್ಯಕ್ರಮ ನಡೆಯಲಿದ್ದು ನವೆಂಬರ್ 1 ರಂದು ಅದ್ದೂರಿಯಾಗಿ ಅರತಕ್ಷತೆ ನಡೆಯಲಿದೆ. ಇನ್ನು, ಮದುವೆ ಆಮಂತ್ರಣ ಪತ್ರಿಕೆ ಕೂಡಾ ತುಂಬಾ ಗ್ರ್ಯಾಂಡ್ ಆಗಿಯೇ ಇದೆ. ಕೆಂಪು ಬಣ್ಣದೊಂದಿದೆ ಬಂಗಾರದ ವರ್ಣದ ರಿಬ್ಬನ್ನಲ್ಲಿ ಕಟ್ಟಿದ ಈ ಆಮಂತ್ರಣ ಎಲ್ಲರ ಗಮನ ಸೆಳೆಯುವಂತಿದೆ. ಈ ವಿಶೇಷ ಆಮಂತ್ರಣ ಪತ್ರಕೆಯನ್ನು ಎ.ಡಿ. ಸಿಂಗ್ ವಿನ್ಯಾಸ ಮಾಡಿದ್ದಾರೆ.
ಪಂಜಾಬಿ ಸಾಂಪ್ರದಾಯದಂತೆ ಹಸೆಮಣೆ ಏರಲಿರುವ ಈ ಜೋಡಿಯನ್ನು ಆಶೀರ್ವದಿಸಲು ಬಿಸಿಸಿಐ ಅಧಿಕಾರಿಗಳು ಹಾಗೂ ದಕ್ಷಿಣ ಆಫ್ರಿಕಾ ತಂಡದ ಕ್ರಿಕೆಟ್ ಆಟಗಾರರು ಭಾಗವಹಿಸುವ ಸಾಧ್ಯತೆಯಿದೆ.
