ಮಂಡ್ಯ,ಜು.15- ಸಚಿವ ಅಂಬರೀಶ್ ಮುನಿಸಿನಿಂದ ಮಂಡ್ಯ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದೆ. ಕಳೆದ ಶುಕ್ರವಾರ ಮುಖ್ಯಮಂತ್ರಿಗೆ ಪತ್ರ ಬರೆದು ಬೆಳಗಾವಿಯಿಂದ ಬೆಂಗ ಳೂರಿಗೆ ಬಂದು ರಾಜೀನಾಮೆ ಹಿಂಗಿತ ವ್ಯಕ್ತ ಪಡಿಸಿದ್ದ ಸಚಿವ ಬರೀಶ್ ಸ್ವತಃ ಸಿದ್ದ ರಾಮಯ್ಯನವರೇ
ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಶಾಂತರಾಗಿದ್ದರು. ಆದರೆ ನಿನ್ನೆ ಸದನದಲ್ಲಿ ಸಿಎಂ ಬಜೆಟ್ ಅನುಷ್ಠಾನದಲ್ಲಿ ಇಲಾಖಾ ವಾರು ವೆಚ್ಚದಲ್ಲಿ ವಸತಿ ಇಲಾಖೆ ನಯಾ ಪೈಸವನ್ನೂ ಬಳಸಿಕೊಂಡಿಲ್ಲ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಮತ್ತೆ ಕೆಂಡಾಮಂಡ ಲವಾಗಿದ್ದಾರೆ. ಇದರಿಂದ ಮತ್ತೆ ಬೇಸರಗೊಂಡಿರುವ ಅಂಬರೀಶ್ ತಮ್ಮ ಆಪ್ತವಲಯ ಜತೆ ಸಮಾಲೋಚನೆಯಲ್ಲಿ ತೊಡಗಿದ್ದು ಮುಂದಿನ ನಿರ್ಧಾರ ಏನೆಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದರ ನಡುವೆ ಡಿಸಿಸಿ ಅಧ್ಯಕ್ಷ ಹರೀಶ್ , ಈಗ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ನೇಮಕಗೊಂಡಿರುವ ಜೋಗಿಗೌಡ ಅವರಿಂದ ರಾಜೀನಾಮೆ ಕೊಡಿಸಿ ಅವರ ಸ್ಥಾನಕ್ಕೆ ಅಮರಾವತಿ ಶ್ರೀನಿವಾಸ್ರವರ ಸೋದರ ಅಶ್ವಥ್ ಅವರನ್ನು ತರುವ ಪ್ರಶ್ನೆ ಸದ್ಯಕ್ಕಿಲ್ಲ ಎಂದು ಹೇಳಿದ್ದಾರೆ. ಆಯ್ಕೆ ವಿಷಯದಲ್ಲಿ ಮೊದಲ ತೀರ್ಮಾನವೇ ಅಂತಿಮ ಎಂದು ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಹೇಳುತ್ತಿದ್ದು,
ಈ ನಡುವೆ ಅಂಬಿ ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೆ ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ ಎನ್ನಲಾಗಿದೆ. ಇದರ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದ್ಯ ಎದ್ದಿರುವ ಬಿಕ್ಕಟ್ಟನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದು ಜೋಗಿಗೌಡ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಮತ್ತು ಇದರ ಹೊಣೆಗಾರಿಕೆಯನ್ನು ನರೇಂದ್ರಸ್ವಾಮಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಜೋಗಿಗೌಡ ರಾಜೀನಾಮೆ ನೀಡಿದರೆ ಜಿಲ್ಲಾ ಕಾಂಗ್ರೆಸ್ನ ಎಲ್ಲ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದಲ್ಲದೆ ಹೈಕಮಾಂಡ್ಗೂ ಅಂಬಿ ಮತ್ತು ಅವರ ಬೆಂಬಲಿಗರ ವಿರುದ್ದ ದೂರು ನೀಡಲು ಕೂಡ ನಿರ್ಧರಿಸಿದ್ದಾರೆ. ಒಟ್ಟಾರೆ ಮಂಡ್ಯ ಜಿಲ್ಲಾ ಕಾಂಗ್ರೆಸ್ನಲ್ಲಿ ಮತ್ತೆ ಅಸಮಾಧಾನದ ದಳ್ಳುರಿ ಯಾವ ಹಂತ ತಲುಪುತ್ತದೆ ಎಂಬುದನ್ನು ಕಾದುನೋಡಬೇಕಿದೆ.