ಮನೋರಂಜನೆ

ಪೇಟಾ ವಿಚಾರದಲ್ಲಿ ಕಾಮಿಡಿ ನೈಟ್ಸ್ ವಿತ್ ಕಪಿಲ್ ತಂಡ

Pinterest LinkedIn Tumblr

Comedyb-with-kapil ಬೆಂಗಳೂರು,ಜು.15- ಕಾಮಿಡಿ ನೈಟ್ಸ್ ವಿತ್ ಕಪಿಲ್‌ನ ನಟ-ನಟಿ ಯರು ಕಪಿಲ್ ಶರ್ಮರಿಂದ ರಕ್ಷಿಸಲ್ಪಟ್ಟ ಮುದ್ದಿನ ನಾಯಿ ಜಂಜೀರ್‌ನೊಂದಿಗೆ ಸುಪ್ರಸಿದ್ಧ ಫೋಟೋಗ್ರಾಫರ್ ಗೌರವ್ ಸಾವ್ನ್ ಅವರಿಂದ ಚಿತ್ರೀಕರಿಸಲಾಗಿರುವ ಪೀಪಲ್ ಫಾರ್ ದಿ  ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಇಂಡಿಯಾದ ಹೊಚ್ಚ ಹೊಸ ಪ್ರಚಾರದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಜಾಹಿರಾತು ಸೆಟ್‌ನಲ್ಲಿ ನಾಯಿಯ ಆಶೀರ್ವಾದವು ನಿಮಗಿರಲಿ! ನಾಯಿಯನ್ನು ಆಶ್ರಯ ತಾಣದಿಂದ ಅಥವಾ ರಸ್ತೆ ಬದಿಗಳಿಂದ ತಂದು ಸಾಕಿರಿ-ಎಂದೂ ಖರೀದಿಸಬೇಡಿ ಎಂಬ ಪದಗಳೊಂದಿಗೆ ನಟನಟಿಯರು ಕಾಣಿಸಿಕೊಂಡಿದ್ದಾರೆ.
ಪೇಟಾದೊಂದಿಗಿನ ವಿಶೇಷ ಸಂದರ್ಶನದಲ್ಲಿ ಕಪಿಲ್ ಶರ್ಮ, ಸುಮೋನ ಚಕ್ರವರ್ತಿ, ಅಲಿ ಅಸ್‌ಗರ್, ಸುನಿಲ್ ಗ್ರೋವರ್ ಮತ್ತು ಕಿಕೂ ಶಾರ್ದಾ ಇವರನ್ನೊಳಗೊಂಡ ತಾರೆಯರು ಪ್ರತಿದಿನ ಶರ್ಮರೊಂದಿಗೆ ಸೆಟ್‌ನ ಮೇಲೆ ಬರುತ್ತಿರುವ ಗೌರವ ಪಾತ್ರಧಾರಿ ಜಂಜೀರ್ ತಮ್ಮ ಕಾರ್ಯನಿರತ ಜೀವನವನ್ನು ಹೇಗೆ ಬದಲಾಯಿಸಿದೆ ಎಂಬ ಸಂಗತಿಯನ್ನು ಹಂಚಿ ಕೊಂಡಿದ್ದಾರೆ.  ಈಗ ಅದು ನಮ್ಮ ಕುಟುಂಬದ ಒಂದು ಭಾಗವಾಗಿದೆ ಎನ್ನುವ ಶರ್ಮ, ನಿವೃತ್ತ ಪೊಲೀಸು ನಾಯಿಯಾಗಿರುವ ಜಂಜೀರ್ ತನ್ನ ತಂಡದ ಇಬ್ಬರು  ಸದಸ್ಯರ ನಡುವಿನ ಜಗಳ ನಿಲ್ಲಿಸುವ ಮೂಲಕ ಹೇಗೆ ತನ್ನ ಪ್ರೀತಿಯ ನಟನಟಿಯರನ್ನು ಸಂರಕ್ಷಿಸಿದೆ ಎಂಬ ಘಟನೆಯನ್ನು ಮೆಲುಕು
ಹಾಕುತ್ತಾರೆ.

Write A Comment