ಲಖ್ನೌಜು.15-ಹೆಚ್ಚುತ್ತಿರುವ ಅಪಘಾತಗಳು, ಸಾವುನೋವುಗಳಿಗೆ ಬೇಕಾಬಿಟ್ಟಿಯಾಗಿ ಅಲ್ಲಲ್ಲಿ ಹಚ್ಚುವ ಸಿನಿಮಾ ಪೋಸ್ಟರ್‌ಗಳೇ ಕಾರಣ ಎಂದು ಮನಗಂಡಿರುವ ಉತ್ತರ ಪ್ರದೇಶ ಸರ್ಕಾರ, ಸಿನಿಮಾ ಪೋಸ್ಟರ್‌ಗಳನ್ನು ಕಟ್ಟುವುದು, ಅಂಟಿಸುವುದನ್ನು ನಿಷೇಧಿಸುವಂತೆ ರಾಜ್ಯದ ಎಲ್ಲ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಹಾಗೂ ಜಿಲ್ಲಾ ರಸ್ತೆ ಸುರಕ್ಷಿತಾ ಸಮಿತಿಗಳಿಗೆ ಆದೇಶ ನೀಡಿದೆ.
ಸಿನಿಮಾ ದೃಶ್ಯಗಳು ಹಾಗೂ ಟಿವಿ ದೃಶ್ಯಗಳನ್ನೊಳಗೊಂಡ ಪುರುಷರು, ಮಹಿಳೆಯರ ಫೋಸ್‌ಗಳು ಜನರ ಗಮನ ಸೆಳೆಯುತ್ತವೆ, ವಿಶೇಷವಾಗಿ ಯುವಜನರ ಗಮನ ಸೆಳೆಯುವುದಲ್ಲದೆ ಅಪಘಾತಗಳಿಗೆ ಪ್ರಮುಖ ಕಾರಣವಾಗುತ್ತದೆ. ಅಲ್ಲದೆ ಯುವಜನತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದು ಉತ್ತರ ಪ್ರದೇಶ ಸಾರಿಗೆ ಇಲಾಖೆ ಆಯುಕ್ತ ಕೆ.ರವೀಂದ್ರ ನಾಯಕ್ ಹೇಳಿದ್ದಾರೆ.