ಮಂಡ್ಯ: ಬೆಂಗಳೂರು -ಮೈಸೂರು ರೈಲ್ವೆ ಜೋಡಿ ಹಳಿ ನಿರ್ಮಾಣ ಕಾರ್ಯಕ್ಕೆ ಪ್ರಮುಖ ಅಡ್ಡಿಯಾಗಿದ್ದ ಶ್ರೀರಂಗಪಟ್ಟಣದ ಟಿಪ್ಪು ಶಸ್ತ್ರಾಸ್ತ್ರ ಸಂಗ್ರಹಾಗಾರ (ಮದ್ದಿನ ಮನೆ)
ಸ್ಥಳಾಂತರ ಆರಂಭವಾಗಿದೆ.
ಹದಿನೆಂಟನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್‌ನಿಂದ ನಿರ್ಮಾಣಗೊಂಡಿದ್ದ ಸುಮಾರು 900 ಟನ್ ತೂಕದ ಈ ಶಸ್ತ್ರಾಸ್ತ್ರ ಸಂಗ್ರಹಾಗಾರ ಶ್ರೀರಂಗಪಟ್ಟಣ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಿದ್ದು, ಇದು ಬೆಂಗಳೂರು-ಮೈಸೂರು ರೈಲ್ವೆ ಜೋಡಿ ಹಳಿ ನಿರ್ಮಾಣ ಯೋಜನೆಗೆ 2008ರಿಂದಲೂ ಅಡ್ಡಿಯಾಗಿತ್ತು. ಮೊದಲು ಶಸ್ತ್ರಾಗಾರವನ್ನು ತೆರವು ಮಾಡಿ ಕಾಮಗಾರಿ ನಡೆಸಲು ಇಲಾಖೆ ಮುಂದಾಗಿದ್ದರೂ ಪುರಾತತ್ವ ಇಲಾಖೆ ಹಾಗೂ
ಇತಿಹಾಸ ತಜ್ಞರ ವಿರೋಧದಿಂದಾಗಿ ಶಸ್ತ್ರಾಗಾರವನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು.
ಮದ್ದಿನ ಮನೆ ಸ್ಥಳಾಂತರಿಸಲು ಅಮೆರಿಕಾದ “ವೂಲ್ಫ್ ಪ್ರ„ ಲಿ., ಸಂಸ್ಥೆಯು 13.66 ಕೋಟಿ
ರೂ.ಗೆ ಟೆಂಡರ್ ಪಡೆದಿತ್ತು. ಅಮೆರಿಕಾದ ಸಂಸ್ಥೆಯು ನವದೆಹಲಿಯ ಪಿಎಸ್‌ಎಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಸ್ಥಳಾಂತರದ ಪೂರ್ವಭಾವಿ ಕೆಲಸಗಳನ್ನು ಆರಂಭಿಸಿದೆ.
ಅಮೆರಿಕಾ ಹಾಗೂ ನವದೆಹಲಿಯ ಸಂಸ್ಥೆಗಳ ಪರಿಣಿತರು ಮತ್ತು ತಾಂತ್ರಿಕ ಸಿಬ್ಬಂದಿ ಮುಂದಿನ ವಾರ ಶ್ರೀರಂಗಪಟ್ಟಣಕ್ಕೆ ಬರಲಿದ್ದು, ನಂತರ ಅವರ ನೇತೃತ್ವದಲ್ಲಿ ಸ್ಮಾರಕವನ್ನು ಈಗ ಇರುವ ಸ್ಥಳದಿಂದ 100 ಮೀ. ದೂರಕ್ಕೆ ಸ್ಮಾರಕವನ್ನು ಸ್ಥಳಾಂತರಿಸಲಾಗುವುದು ಎಂದು ಪಿಎಸ್‌ಎಲ್ ಮೂಲಗಳು ತಿಳಿಸಿವೆ.
-ಉದಯವಾಣಿ
