Uncategorized

ಜಿಮ್ ತರಬೇತಿಗೆ ಬಂದವಳನ್ನ ಗರ್ಭಿಣಿ ಮಾಡಿ, ಮತ್ತೊಬ್ಬಳನ್ನ ಮದುವೆಯಾದ

Pinterest LinkedIn Tumblr


ಚಿಕ್ಕಬಳ್ಳಾಪುರ: ಜಿಮ್‍ಗೆ ಬರುತ್ತಿದ್ದ ಯುವತಿಯನ್ನು ಪ್ರೀತಿಸಿ, ಮೋಸ ಮಾಡಿ ಜೈಲು ಸೇರಿದ್ದ ಜಿಮ್ ಟ್ರೈನರ್ ಕಂ ಮಾಲೀಕನ ಕೃತ್ಯಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಅವನ ಮೋಸಕ್ಕೆ ಓರ್ವ ಯುವತಿ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬುಲೆಟ್ ಜಿಮ್ ಮಾಲೀಕ ಗೌತಮ್ ಜೈಲು ಸೇರಿದ ಆರೋಪಿ. ದೈಹಿಕ ಫಿಟ್‍ನೆಸ್‍ಗಾಗಿ ಜಿಮ್‍ಗೆ ಬರುತ್ತಿದ್ದ ಶ್ರೀಮಂತ ಮನೆತನದ ಚೆಂದದ ಯುವತಿಯರನ್ನು ಗೌತಮ್ ಟಾರ್ಗೆಟ್ ಮಾಡುತ್ತಿದ್ದ. ಪ್ರೀತಿ, ಪ್ರೇಮ ಅಂತ ಅವರೊಂದಿಗೆ ಜೊತೆ ಚಕ್ಕಂದವಾಡುತ್ತಿದ್ದ. ಜಿಮ್ ಟ್ರೈನರ್ ಕೃತ್ಯಕ್ಕೆ ಒಬ್ಬರಲ್ಲ, ಇಬ್ಬರಲ್ಲ ಮೂವರು ಹುಡುಗಿಯರ ಬಾಳು ಈಗ ಹಾಳಾಗಿದೆ.

ಜಿಮ್‍ಗೆ ಬರುತ್ತಿದ್ದ ಯುವತಿಯನ್ನೇ ಪ್ರೀತಿ ಪ್ರೇಮ ಅಂತ ನಾಟಕವಾಡಿ, ಆವರ ಜೊತೆ ಕಾಮದಾಟ ನಡೆಸಿದ್ದಾನೆ. ಇದರಿಂದ ಜಿಮ್ ತರಬೇತಿಗೆ ಬರುತ್ತಿದ್ದ ಯುವತಿಯೊರ್ವಳು ಗರ್ಭಿಣಿ ಆಗಿದ್ದು, ಗೌತಮ್ ವಿರುದ್ಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ಕಳೆದ ವಾರವಷ್ಟೇ ದೂರು ನೀಡಿದ್ದಾಳೆ.

ಗೌತಮ್ ನನ್ನನ್ನು ಪ್ರೀತಿಸುವುದಾಗಿ ಹೇಳಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿ ಮಾಡಿದ್ದಾನೆ. ಆದರೆ ಈಗ ಜಿಮ್‍ಗೆ ಬರುತ್ತಿದ್ದ ಮತ್ತೋರ್ವ ಯುವತಿ ಜೊತೆ ಮದುವೆ ಆಗುತ್ತಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.

ಯುವತಿ ದೂರು ದಾಖಲಿಸಿಕೊಂಡ ಪೊಲೀಸರು ಗೌತಮ್‍ನನ್ನು ಬಂಧಿಸಿ ಜೈಲುಗಟ್ಟಿ ಹಾಕಿದ್ದಾರೆ. ಆದರೆ ಅದಕ್ಕೂ ಮುನ್ನವೇ ಗೌತಮ್ ಆಕೆಯನ್ನ ಕದ್ದು ಮುಚ್ಚಿ ಮದುವೆಯಾಗಿಬಿಟ್ಟಿದ್ದ ಎನ್ನುವ ವಿಷಯ ಈಗ ಬೆಳಕಿಗೆ ಬಂದಿದೆ. ಗೌತಮ್ ಜೈಲುಪಾಲದ ನಂತರ ಮತ್ತೋರ್ವ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡುವುದಕ್ಕೂ ಮುನ್ನ ಗೌತಮ್ ಹಾಗೂ ಆತನ ಮತ್ತೋರ್ವ ಪ್ರಿಯತಮೆ ಕಾನ್ಫರೆನ್ಸ್ ಕಾಲ್ ಮಾಡಿದ್ದರು. ಈ ವೇಳೆ ಅವಾಚ್ಯ ಪದಗಳಿಂದ ಮನಬಂದಂತೆ ನಿಂದಿಸಿದ್ದಾರೆ. ಈ ಆಡಿಯೋ ಗೌತಮ್ ಜೈಲುಪಾಲಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದೆ.

ಇದರಿಂದಾಗಿ ತನ್ನ ಮಾರ್ಯದೆ ಹೋಯಿತು, ಮನೆಯಲ್ಲಿ ವಿಷಯ ಗೊತ್ತಾಯಿತು ಅಂತ ಯುವತಿ ಮನನೊಂಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಮೂಲಕ ಜಿಮ್ ಟ್ರೈನರ್ ಕೃತ್ಯಕ್ಕೆ ಓರ್ವ ಯುವತಿ ಗರ್ಭಿಣಿಯಾಗಿದ್ದಾಳೆ. ಮತ್ತೊಬ್ಬಳು ಕದ್ದು ಮುಚ್ಚಿ ಮದುವೆಯಾಗಿ ಮೋಸ ಹೋಗಿದ್ದಾಳೆ. ಗೌತಮ್ ಜೈಲುಪಾಲಾದ ನಂತರ ಮೂರನೇಯ ಯುವತಿ ಆತ್ಮಹತ್ಯೆ ಶರಣಾಗಿದ್ದಾಳೆ.

Comments are closed.