ಮನೋರಂಜನೆ

ಕೆಜಿಎಫ್-2 – ಶೂಟಿಂಗ್ ಅಖಾಡಕ್ಕೆ ಯಶ್ ಎಂಟ್ರಿ..!

Pinterest LinkedIn Tumblr


ಕೆಜಿಎಫ್ ರಾಕಿ ಭಾಯ್ ಬಾಕ್ಸಾಫೀಸ್ನಲ್ಲಿ ಬರೆದ ದಾಖಲೆಗಳು ಕಣ್ಣಮುಂದಿವೆ. ಆ ದಾಖಲೆಗಳನ್ನು ಅಳಿಸಿ ಹೊಸ ದಾಖಲೆ ಬರೆಯೋಕೆ ಮತ್ತೆ ರಾಕಿ ಭಾಯ್ ಆಗಮನವಾಗ್ತಿದೆ. ಕಾರಣಾಂತರಗಳಿಂದ ಕೊಂಚ ತಡವಾಗಿದ್ದ ಕೆಜಿಎಫ್ ಚಾಪ್ಟರ್ 2 ಶೂಟಿಂಗ್, ಇದೀಗ ಶುರುವಾಗಿದೆ. ನೈಸ್ ರೋಡ್ನಲ್ಲಿ ಪ್ರಶಾಂತ್ ನೀಲ್ ಅಂಡ್ ಟೀಂ ಚಿತ್ರದ ಒಂದಷ್ಟು ಹೈವೋಲ್ಟೇಜ್ ಸೀಕ್ವೆನ್ಸ್ನ ಶೂಟ್ ಮಾಡ್ತಿದೆ ಚಿತ್ರತಂಡ.

ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ತೆರೆಗಪ್ಪಳಿಸಿದ ಕೆಜಿಎಫ್ ಫಸ್ಟ್ ಚಾಪ್ಟರ್ ಮಾಡಿದ ಸದ್ದುಗದ್ದಲ ಗೊತ್ತೇಯಿದೆ. ಎಲ್ಲಾ ಡಿಪಾರ್ಟ್ಮೆಂಟ್ನಲ್ಲೂ ದಿ ಬೆಸ್ಟ್ ಅನ್ನಿಸಿಕೊಂಡ ಕೆಜಿಎಫ್​​ಗೆ ಪರಭಾಷಕರು ಫಿದಾ ಆಗೋಗಿದ್ರು. ಫಸ್ಟ್ ಚಾಪ್ಟರ್ನಲ್ಲೇ ಚಾಪ್ಟರ್ ಟೂನ ಎರಡು ಸೀನ್ ತೋರಿಸಿ, ಕುತೂಹಲ ಹೆಚ್ಚಿಸಿರೋ ಚಿತ್ರತಂಡ ಬಹಳ ದೊಡ್ಡ ಚಿತ್ರಕ್ಕೆ ಪ್ಲಾನ್ ಮಾಡಿದೆ. ಸ್ವತ: ಚಿತ್ರತಂಡ ಹೇಳಿರುವಂತೆ ಚಾಪ್ಟರ್ 2 ಎದಿರು ಚಾಪ್ಟರ್ 1 ಜಸ್ಟ್ ಟ್ರೈಲರ್ ರೀತಿ ಇರುತಂತೆ.. ಅಂದರೆ ಕೆಜಿಎಫ್ 2 ಯಾವ ರೇಂಜ್ನಲ್ಲಿ ಮೂಡಿ ಬರಬಹುದು ಊಹಿಸಿ.

ಹಾಗ್ ನೋಡಿದರೆ, ಪ್ರೀಕ್ವೆಲ್ನಲ್ಲಿ ಚಿತ್ರಕ್ಕೆ ಪೀಠಿಕೆಯನ್ನಷ್ಟೆ ಹಾಕಿದೆ ಚಿತ್ರತಂಡ.. ಅಸಲಿ ಕಥೆ ಸೀಕ್ವೆಲ್ನಲ್ಲಿ ಇರಲಿದೆ. ಅದೇ ಕಾರಣಕ್ಕೆ ಕೆಜಿಎಫ್-2 ನಿರೀಕ್ಷೆ ಮೌಂಟ್ ಎವರೆಸ್ಟ್ ಎತ್ತರಕ್ಕಿದೆ. ಪರಭಾಷಿಕರು ಕೂಡ ಮಾನ್ಸ್ಟರ್ ರಾಕಿ ಭಾಯ್ ಆರ್ಭಟ ನೋಡೋಕೆ ಚಾತಕ ಪಕ್ಷಿಗಳಂತೆ ಕಾಯ್ತಿದ್ದಾರೆ. ಕೆಲ ದಿನಗಳ ಹಿಂದೆ ಮುಹೂರ್ತ ನೆರವೇರಿಸಿದ್ದ ಚಿತ್ರತಂಡ, ಫೈನಲಿ ಕೆಜಿಎಫ್-2 ಚಿತ್ರೀಕರಣ ಶುರು ಮಾಡಿದೆ.

ಸದ್ಯ ಕೆಜಿಎಫ್- 2 ಶೂಟಿಂಗ್ ಶುರುವಾದರು, ರಾಕಿ ಭಾಯ್ ಯಶ್ ಅಖಾಡಕ್ಕೆ ಇಳಿದಿಲ್ಲ. ಒಂದಷ್ಟು ಸಹ ಕಲಾವಿದರನ್ನು ಬಳಸಿಕೊಂಡು ಒಂದಷ್ಟು ಬಿಲ್ಡಬ್ ದೃಶ್ಯಗಳನ್ನು ನೈಸ್ ರೋಡ್ ಸುತ್ತಾ ಮುತ್ತಾ ಸೆರೆಹಿಡಿತಿದೆ ಚಿತ್ರತಂಡ.

15 ದಿನಗಳ ನಂತರ ಯಶ್ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಸೆಟ್ ನಿರ್ಮಾಣ ತಡವಾಗ್ತಿರೋದ್ರಿಂದ ಶೂಟಿಂಗ್ ತಡವಾಗ್ತಿದೆ ಅನ್ನೋ ಸುದ್ದಿ ಇತ್ತೀಚೆಗೆ ಕೇಳಿಬಂದಿತ್ತು. ಫೈನಲಿ ಶೂಟಿಂಗ್ ಶುರುವಾಗಿದ್ದು, ಮುಂದಿನ ವರ್ಷಾಂತ್ಯಕ್ಕೆ ತೆರೆಮೇಲೆ ರಾಕಿ ಭಾಯ್ ಅಬ್ಬರ ಶುರುವಾಗಲಿದೆ.

Comments are closed.