ಕರ್ನಾಟಕ

ಕಾಂಗ್ರೆಸ್ ಸಹವಾಸ ಬೇಡ ಅಂತ ಕೇಳಿಕೊಂಡಿದ್ವಿ… : ಜೆಡಿಎಸ್ ಮಾಜಿ ಶಾಸಕ ಗೌಡ

Pinterest LinkedIn Tumblr

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಹವಾಸ ಬೇಡ ಅಂತ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಕೈಮುಗಿದು ಕೇಳಿಕೊಂಡಿದ್ವಿ. ಆದರೆ ನಮ್ಮ ಮಾತು ಕೇಳಲಿಲ್ಲ. ಚುನಾವಣೆ ಮುಗಿದ ಮೇಲೆ ನಾಟಕ ಮಾಡುತ್ತಾರೆ ಅಂತ ಇಡೀ ದೇಶಕ್ಕೆ ಗೊತ್ತಿತ್ತು..ಇದು ಮಾಲೂರು ಜೆಡಿಎಸ್ ಮಾಜಿ ಶಾಸಕ ಮಂಜುನಾಥ ಗೌಡ ಅವರ ಹೇಳಿಕೆ.

ಮೈತ್ರಿ ಸರ್ಕಾರದಲ್ಲಿನ ಜಟಾಪಟಿ ಕುರಿತು ಸೋಮವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಒಳ್ಳೆಯ ಬಜೆಟ್ ಕೊಟ್ಟಿದ್ದಾರೆ. ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಆದರೆ ಇದೀಗ ಕಾಂಗ್ರೆಸ್ ತೀಟೆ ತೀರಿಸಿಕೊಂಡು ಸಿಎಂ ಅವರನ್ನು ಹೊರದಬ್ಬಲು ಪ್ಲ್ಯಾನ್ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಹಳೇ ಮೈಸೂರು ಭಾಗದಲ್ಲಿ ನಮಗೆ ಕಾಂಗ್ರೆಸ್ ಪಕ್ಷವೇ ಎದುರಾಳಿ. ನಮ್ಮ ಪಕ್ಷದ ಕಾರ್ಯಕರ್ತರು ನೋವು ಅನುಭವಿಸುತ್ತಿದ್ದಾರೆ. ಮೈತ್ರಿಯಿಂದ ನಮಗೆ ಲಾಭ ಇಲ್ಲ ಅಂತ ಮೊದಲೇ ಹೇಳಿದ್ದೇವು ಎಂದು ಮಂಜುನಾಥ ಗೌಡ ತಿಳಿಸಿದರು.

Comments are closed.