ಕರ್ನಾಟಕ

ಉಮೇಶ್ ಜಾಧವ್ ಮಾಡಿದ್ದು ಆಪರೇಷನ್ ಅಲ್ಲ, ಅಬಾರ್ಷನ್: ಪ್ರಿಯಾಂಕ್ ಖರ್ಗೆ

Pinterest LinkedIn Tumblr


ಕಲಬುರ್ಗಿ: ಉಮೇಶ್ ಜಾಧವ್ ಅವರನ್ನು ಕಾಂಗ್ರೆಸ್​ಗೆ ಕರೆತಂದು ತಪ್ಪು ಮಾಡಿದೆವು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪಶ್ಚಾತಾಪ ವ್ಯಕ್ತಪಡಿಸಿದರು. ಉಮೇಶ್ ಜಾಧವ್ ಒಳ್ಳೆಯ ಕೆಲಸ ಮಾಡುತ್ತಾನೆ ಎಂದು ಕರೆದುಕೊಂಡು ಬಂದೆವು. ಆದರೆ, ಅವರು ಆಪರೇಷನ್ ಮಾಡುವ ಬದಲು ಅಬಾರ್ಷನ್ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ನಿಖಿಲ್ ಕುಮಾರಸ್ವಾಮಿ ಎಲ್ಲಿದ್ದಿಯಪ್ಪಾ ಎಂದು ಜನ ಟ್ರೋಲ್ ಮಾಡಿದ್ರು. ಅದರ ಬದಲು ಉಮೇಶ್ ಜಾಧವ್ ಎಲ್ಲಿದ್ದೀಯಪ್ಪ ಅಂತಾ ಟ್ರೋಲ್ ಮಾಡಬೇಕಾಗಿತ್ತು ಎಂದೂ ಖರ್ಗೆ ವ್ಯಂಗ್ಯವಾಡಿದರು.

ಮೀಸಲಾತಿ ತೆಗೆಯಲು ಸಾಧ್ಯವಿಲ್ಲ

ಶಾಸಕರಾಗಿದ್ದಾಗ ಉಮೇಶ್ ಜಾಧವ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಹೇಳ್ತಾರೆ. ಅವರ ಬ್ಯಾಂಕ್ ಅಕೌಂಟ್​ನಿಂದ ಹಣ ತಂದು ಅಭಿವೃದ್ಧಿ ಕೆಲಸ ಮಾಡಿದ್ರಾ ಹೇಗೆ? ಅದು ಸರ್ಕಾರದಿಂದ ಆದ ಅಭಿವೃದ್ಧಿ ಕೆಲಸ. ಜಾಧವ್ ಕ್ಷೇತ್ರದ ಮತದಾರರನ್ನ ಮಾರಾಟ ಮಾಡಿದ್ದಾರೆ. ಲಂಬಾಣಿಯ ಎಸ್ಸಿ ಮಿಸಲಾತಿಯನ್ನು ತೆಗೆಯುತ್ತಾರೆ ಅಂತಾ ಅಪಪ್ರಚಾರ ಮಾಡುತ್ತಿದ್ದಾರೆ. ಉಮೇಶ್ ಜಾಧವ ಅಲ್ಲ ಯಾರೇ ಬರಲಿ ಅದನ್ನು ತೆಗೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಸ್ಪಷ್ಟಪಡಿಸಿದರು.

ಮಾಜಿ ಶಾಸಕರಾದ ಮಾಲಿಕಯ್ಯ ಗುತ್ತೇದಾರ ಮತ್ತು ಬಾಬುರಾವ್ ಚಿಂಚನಸೂರ ಜೋಡೆತ್ತು ಅಂತಾ ಹೇಳ್ಕೊತಾರೆ. ಇಲ್ಲಿ ತೊಡೆ ತಟ್ಟುವ ಬದಲು ಗುರಮಿಠಕಲ್​ನಲ್ಲಿ ಬಾಬುರಾವ್ ಚಿಂಚನಸೂರ್ ತೊಡೆ ತಟ್ಟಿದಿದ್ರೆ ಶಾಸಕನಾದರೂ ಆಗುತ್ತಿದ್ದರು.

ನೋಟ್ ಬ್ಯಾನ್ ಪರಿಣಾಮ 50 ದಿನದಲ್ಲಿ ಸರಿಯಾಗದಿದ್ರೆ ನಡು ರಸ್ತೆಯಲ್ಲಿ ನೇಣು ಹಾಕಿ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ರು. ಆದರೆ ಈಗಲೂ ಜನರ ಪರದಾಟ ತಪ್ಪಿಲ್ಲ.

ನಾವು ರಸ್ತೆ ರೆಡಿ ಮಾಡಿಕೊಡಲು ಸಿದ್ದರಿದ್ದೇವೆ. ಆದರೆ ಪ್ರಧಾನಿಯವರು ಬರ್ತಾರಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.

ಸಂಸದ ಮಲ್ಲಿಕಾರ್ಜುನ್ ಖರ್ಗೆ ಕ್ಷಮೆಗೆ ಆಗ್ರಹಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿ ನಾಯಕರು ಕ್ಷಮೆ ಕೇಳಲಿ ಎಂದ ಸಚಿವರು, ಸೋನಿಯಾಗಾಂಧಿ, ರಾಹುಲ್ ಗಾಂಧಿ ಬಗ್ಗೆ ನಿತ್ಯ ಕೀಳಾಗಿ ನಿಂದಿಸುವವರು ಯಾರು? ಖರ್ಗೆ ಅವರ ಮೇಲೆ ಕೇಸ್ ಹಾಕ್ತಿರೋದಾದ್ರೆ ದಯವಿಟ್ಟು ಪ್ರಧಾನಿ ವಿರುದ್ಧ ಮೊದಲು ಹಾಕಿ ಎಂದು ಸವಾಲು ಹಾಕಿದರು.

Comments are closed.