ಕರ್ನಾಟಕ

ಬೆಂಗಳೂರು ವಿವಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ

Pinterest LinkedIn Tumblr


ಬೆಂಗಳೂರು: ಚಾರ್ಟರ್ಡ್ ಅಕೌಂಟೆಂಟ್ ಮತ್ತು ಕಂಪನಿ ಸೆಕ್ರೆಟರಿ ಪರೀಕ್ಷೆಗಳು ಇರುವ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ 6ನೇ ಸೆಮಿಸ್ಟರ್​ನ ಕೆಲ ಪರೀಕ್ಷೆಗಳನ್ನ ಮುಂದೂಡಲಾಗಿದೆ. ಮೇ 27ರಿಂದ ಜೂನ್ 8ರವರೆಗೆ ನಿಗದಿಯಾಗಿದ್ದ ಬಿಕಾಂ, ಬಿಬಿಎ ಮತ್ತು ಬಿಬಿಎಂ ಕೋರ್ಸ್​ನ ಆರನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಈ ಪರೀಕ್ಷೆಗಳು ಜೂನ್ 13ರಿಂದ 21ರವರೆಗೆ ನಡೆಯಲಿದೆ. ಆದರೆ, ಜೂನ್ 10ರಂದು ನಡೆಯಬೇಕಿದ್ದ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಸಿಎ ಮತ್ತು ಸಿಎಸ್ ಪರೀಕ್ಷೆಗಳು ಮೇ 27ರಿಂದ ಜೂನ್ 12ರವರೆಗೆ ನಡೆಯುತ್ತಿವೆ. ಅಂತಿಮ ಸೆಮಿಸ್ಟರ್​ನ ಬಿಕಾಂ, ಬಿಬಿಎ ಮತ್ತು ಬಿಬಿಎಂ ವಿದ್ಯಾರ್ಥಿಗಳು ಸಿಎ ಮತ್ತು ಸಿಎಸ್ ಪರೀಕ್ಷೆ ಬರೆಯುವ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಬಳ್ಳಾರಿ ವಿಎಸ್ ಕೆ ವಿವಿಯಲ್ಲಿ ಹೈಡ್ರಾಮಾ; ನೇಮಕಾತಿ ವಿಚಾರದಲ್ಲಿ ಮುಗಿಯದ ಗೊಂದಲ

ಸಿಎ ಮತ್ತು ಸಿಎಸ್ ಪರೀಕ್ಷೆ ಬರೆಯುವ ಕೆಲ ವಿದ್ಯಾರ್ಥಿಗಳು ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ ಪದವಿ ಪರೀಕ್ಷೆಗಳನ್ನು ಮುಂದೂಡುವಂತೆ ಮಾಡಿಕೊಂಡ ಮನವಿಯನ್ನು ವಿವಿ ಪರಿಗಣಿಸಿತು. ಬೆಂಗಳೂರು ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ| ಸಿ. ಶಿವರಾಜು ಅವರು ಸೋಮವಾರ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿದರು.

6ನೇ ಸೆಮಿಸ್ಟರ್ ಬಿಕಾಂ/ಬಿಬಿಎ/ಬಿಬಿಎಂ ಪರೀಕ್ಷೆಗಳ ನೂತನ ವೇಳಾಪಟ್ಟಿ:

ಕ್ರ.ಸಂ. ಈಗಿರುವ ದಿನಾಂಕ ಪರಿಷ್ಕೃತ ದಿನಾಂಕ
1) ಮೇ 27 ಜೂನ್ 13
2) ಮೇ 29 ಜೂನ್ 15
3) ಮೇ 31 ಜೂನ್ 17
4) ಜೂನ್ 3 ಜೂನ್ 18
5) ಜೂನ್ 6 ಜೂನ್ 20
6) ಜೂನ್ 8 ಜೂನ್ 21
7) ಜೂನ್ 10 ಜೂನ್ 10

Comments are closed.