Uncategorized

ವ್ಯಕ್ತಿಯೊಬ್ಬ ಪಕ್ಕದ ಮನೆಯವರು ಬೈದಿದ್ದಕ್ಕೆ ಜರ್ಮನ್ ಶೆಪರ್ಡ್‌ ನಾಯಿ ಛೂ ಬಿಟ್ಟ!

Pinterest LinkedIn Tumblr


ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಜರ್ಮನ್ ಶೆಪರ್ಡ್‌ ನಾಯಿಯನ್ನು ಪಕ್ಕದ ಮನೆಯವರಿಗೆ ಛೂ ಬಿಡಲಾಗಿದೆ. ಆರೋಪಿ ಮನೆಯಲ್ಲಿರುವ ಸಾಕು ಪ್ರಾಣಿಗಳು ತನ್ನ ಮನೆಯ ಮುಂದೆ ಗಲೀಜು ಮಾಡುತ್ತಿದ್ದವು ಎಂದು ಪಕ್ಕದ ಮನೆಯವರು ಆಕ್ಷೇಪಿಸಿದ್ದಕ್ಕೆ ನಾಯಿ ಛೂ ಬಿಟ್ಟಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂ ಬಳಿ ನಡೆದಿದೆ.

ಜೊನಾಥನ್ ಫರ್ನಾಂಡಿಸ್ ( 22 ) ಹಾಗೂ ಅವನ ತಾಯಿ ವಿಜಯಾ ಫ್ರಾನ್ಸಿಸ್ ( 40 ) ಮೇಲೆ ಜರ್ಮನ್ ಶೆಪರ್ಡ್‌ ಏಕಾಏಕಿ ದಾಳಿ ಮಾಡಿದ್ದು, ಅವರನ್ನು ನೆಲದ ಮೇಲೆ ಬೀಳಿಸಿ ಬಟ್ಟೆಯನ್ನು ಹರಿದು ಹಾಕಿದೆ. ಇನ್ನು, ಜೊನಾಥನ್ ಕೈಗೆ ನಾಯಿ ಕಚ್ಚಿದ್ದು, ನೆರೆಹೊರೆಯವರು ಆತನನ್ನು ರಕ್ಷಿಸಲು ನೆರವಾದರೂ ಸಹ ಸಾಧ್ಯವಾಗಲಿಲ್ಲ. ಬಳಿಕ, ಕೋಲಿನಿಂದ ನಾಯಿಯನ್ನು ಅಟ್ಟಿಸಿಕೊಂಡು ಹೋಗಿ ಕಾಪಾಡಲಾಗಿದೆ.

ಆರೋಪಿ ಆ್ಯಲನ್ ಬಳಿ ನಾಲ್ಕು ಸಾಕು ಪ್ರಾಣಿಗಳಿದ್ದು, ಅವುಗಳು ತಮ್ಮ ಮನೆ ಬಳಿಯಲ್ಲೇ ಮಲ ವಿಸರ್ಜನೆ ಮಾಡುತ್ತಿದ್ದವು ಎಂದು ಜೊನಾಥನ್ ತಾಯಿ ವಿಜಯಾ ಆರೋಪಿಸಿದ್ದರು. ಈ ಹಿನ್ನೆಲೆ ಜರ್ಮನ್ ಶೆಪರ್ಡ್ ಅನ್ನು ತನ್ನ ಮನೆ ಬಳಿ ಕರೆದೊಯ್ಯುತ್ತಿದ್ದ ಆ್ಯಲನ್ಗೆ ಹೀಗೆ ಮಾಡಬೇಡಿ ಎಂದು ಕೆ.ಆರ್‌.ಪುರಂ ಬಳಿಯ ನಾರಾಯಣಪುರದ ತಮ್ಮ ನಿವಾಸದ ಬಳಿ ಕಳೆದ ಶನಿವಾರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಸಿಟ್ಟಾದ ಆತ, ನೀವು ನಾಯಿ ಗಲೀಜು ಮಾಡಿರುವುದನ್ನು ನೋಡಿದ್ದೀರಾ ಎಂದು ಕೇಳಿದ್ದ. ತಾನು ನೋಡಿದ್ದೇನೆ ಎಂದು ಜೊನಾಥನ್ ಹೇಳಿದ್ದಕ್ಕೆ ಆ್ಯಲನ್, ನಾಯಿಯನ್ನು ನನ್ನ ಮೇಲೆ ಹಾಗೂ ನನ್ನ ಮಗನ ಮೇಲೆ ಛೂ ಬಿಟ್ಟಿದ್ದ. ಅದು ತನ್ನ ಮಗನನ್ನು ಕಚ್ಚಿದೆ ಎಂದು ಜೊನಾಥನ್ ತಾಯಿ ಹೇಳಿದ್ದಾರೆ. ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಮಾಡಿರುವ ಜೊನಾಥನ್ ಸದ್ಯ ಆಸ್ಪತ್ರೆಯಲ್ಲಿದ್ದಾನೆ.

ಅಲ್ಲದೆ, ಆ್ಯಲನ್ನ ಅಜ್ಜಿ ರಾಣಿಯನ್ನು ವಿಜಯಾ ಫ್ರಾನ್ಸಿಸ್ ಭೇಟಿ ಮಾಡಿ, ಅವನಿಗೆ ತಿಳುವಳಿಕೆ ಹೇಳಲು ಮನವಿ ಮಾಡಿದ್ದಕ್ಕೆ ಅವರು ಕೂಡ ತಮ್ಮ ಮೇಲೆ ಬಾಯಿಗೆ ಬಂದಂತೆ ಬೈದಿದ್ದಾರೆ. ಹೀಗಾಗಿ, ಆ್ಯಲನ್ ಹಾಗೂ ರಾಣಿಯ ವಿರುದ್ಧ ನಾನು ದೂರು ನೀಡಿದ್ದೇನೆ ಎಂದು ತಾಯಿ ಮಾಹಿತಿ ನೀಡಿದ್ದಾರೆ. ಇನ್ನು, ಆ್ಯಲನ್ನನ್ನು ಪೊಲೀಸರು ಬಂಧಿಸಿ ಜೈಲಿನಿಂದ ಬಿಡುಗಡೆಗೊಳಿಸಿದ್ದು, ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Comments are closed.