ಮನೋರಂಜನೆ

ಬಾಲಿವುಡ್ ನಟಿ ಐಶ್ವರ್ಯಾ ರೈಗೆ ಅಮೆರಿಕದ ಕೊರಿಯೋಗ್ರಫರ್ ಸ್ಟೆಪ್ಸ್

Pinterest LinkedIn Tumblr


ಈ ವರ್ಷದ ಬಹುನಿರೀಕ್ಷಿತ ಬಾಲಿವುಡ್ ಚಿತ್ರ ’ಫನ್ನಿ ಖಾನ್’. ಈ ಚಿತ್ರದ ಮೂಲಕ ನಟಿ ಐಶ್ವರ್ಯಾ ರೈ ಬಚ್ಚನ್ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 2016ರಲ್ಲಿ ’ಏ ದಿಲ್ ಹೈ ಮುಷ್ಕಿಲ’ ಚಿತ್ರದ ಬಳಿಕ ಬಣ್ಣ ಹಚ್ಚುತ್ತಿರುವ ಸಿನಿಮಾ ಇದು. ಹಾಗಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ನಿರೀಕ್ಷೆಗಳಿವೆ.

ವಿಶೇಷ ಎಂದರೆ ಈ ಸಿನಿಮಾದ ಹಾಡೊಂಡಕ್ಕೆ ಫ್ರಾಂಕ್ ಗಾಟ್‍ಸನ್ ಜ್ಯೂನಿಯರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಇವರು ಹಾಲಿವು‌ನ ಖ್ಯಾತನಾಮರಾದ ರಿಹಾನಾ, ಜೆನ್ನಿಫರ್ ಲೋಫೆಜ್ ಅವರಂತಹ ಪಾಪ್ ತಾರೆಗಳಿಗೆ ಕೊರಿಯೋಗ್ರಫಿ ಮಾಡಿರುವಂತವರು.

ಹಾಲಿವುಡ್‌ನ ಮ್ಯೂಸಿಕ್ ಐಕಾನ್ ಬಿಯೋನ್ಸ್ ಜತೆಗೆ 15 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಸಿಂಗಲ್ ಲೇಡೀಸ್, ರನ್ ದ ವರ್ಲ್ಡ್ ಮತ್ತು ಕ್ರೇಜಿ ಇನ್ ಲವ್‌ನಂತಹ ಆಲ್ಬಂಗಳಿಗೆ ಕೆಲಸ ಮಾಡಿದ್ದಾರೆ. ಮೈಕೇಲ್ ಜಾಕ್ಸನ್ ಅವರ ’ಸ್ಮೂತ್ ಕ್ರಿಮಿನಲ್’ ಮ್ಯೂಸಿಕ್ ಆಲ್ಬಂಗೆ 1986ರಲ್ಲಿ ಬ್ಯಾಕಪ್ ಡಾನ್ಸರ್ ಆಗಿಯೂ ಕೆಲಸ ಮಾಡಿದ ಅನುಭವ ಇವರದು.

ಇಷ್ಟೆಲ್ಲಾ ದಿಗ್ಗಜರ ಜತೆಗೆ ಕೆಲಸ ಮಾಡಿರುವ ಫ್ರಾಂಕ್ ಇದೀಗ ಐಶ್ವರ್ಯಾ ರೈ ಕೈಲಿ ಸ್ಟೆಪ್ಸ್ ಹಾಕಿಸಿದ್ದಾರೆ. ಈ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಐಶ್ವರ್ಯಾ ರೈ ಅವರನ್ನು ಹೇಗೆಂದರೆ ಹಾಗೆ ಕುಣಿಸಲು ಅವರೇನು 19 ವರ್ಷದ ಯುವತಿಯಲ್ಲ. ಅವರೊಬ್ಬ ಮಹಿಳೆ ಮತ್ತು ತಾಯಿ. ಆದರೆ ನೋಡುಗರಿಗೆ ನಿರಾಸೆಯಾಗದಂತೆ ಕೊರಿಯೋಗ್ರಫಿ ಮಾಡಿದ್ದೇನೆ ಎಂದಿದ್ದಾರೆ. ಐಶ್ವರ್ಯಾ ರೈ ಅವರಂತಹ ತಾರೆಯರಿಗೆ ಕೊರಿಯೋಗ್ರಫಿ ಮಾಡುವುದು ಒಂದು ರೀತಿ ಸವಾಲಿನ ಕೆಲಸವಾದರೂ ತಮಗೆ ಖುಷಿ ಕೊಟ್ಟಿದೆ ಎಂದಿದ್ದಾರೆ.

ಈ ಸ್ಟೆಪ್ಸ್‌ಗಾಗಿ ಐಶ್ವರ್ಯಾ ರೈ ರಾತ್ರಿಯಲ್ಲಾ ರಿಹರ್ಸಲ್ ಮಾಡುತ್ತಿದ್ದರು. ಮುಂಜಾನೆ 3 ಗಂಟೆಯಲ್ಲಿ ಇನ್ನೊಂದು ಟೇಕ್ ತೆಗೆದುಕೊಳ್ಳೋಣ ಎಂದರು. ಆ ಸನ್ನಿವೇಶ ಸೊಗಸಾಗಿ ಮೂಡಿಬಂದಿದ್ದು ನೋಡಿ ತುಂಬ ಖುಷಿಯಾದರು. ಕೂಡಲೆ ನನ್ನನ್ನು ತಬ್ಬಿ ಬಳಿಕ ಅವರ ಕುಟುಂಬಕ್ಕೆ ನನ್ನನ್ನು ಪರಿಚಯಿಸಿದರು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ಫ್ರಾಂಕ್. ರಿಹರ್ಸಲ್ಸ್ ಮಾಡಿದರೆ ಯಾವುದೂ ಕಷ್ಟವಲ್ಲ. ಅದಕ್ಕೆ ವಯಸ್ಸೂ ಅಡ್ಡಿಯಾಗಲ್ಲ. ಆದರೆ ಈ ದೊಡ್ಡ ತಾರೆಗಳ ದೊಡ್ಡ ಸಮಸ್ಯೆ ಎಂದರೆ ಅವರು ಸತ್ಯ ಹೇಳಲ್ಲ. ಆಗ ನಮಗೆ ಇವರ ಕೈಲಿ ಹೇಗೆ ಸೆಪ್ಸ್ ಹಾಕಿಸಿವುದು ಎಂದು ಗೊತ್ತಾಗಲ್ಲ ಎಂದಿದ್ದಾರೆ ಫ್ರಾಂಕ್.

ಅತುಲ್ ಮಂಜ್ರೇಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಓಂಪ್ರಕಾಶ್ ಮೆಹ್ರಾ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ಪಾತ್ರವರ್ಗದಲ್ಲಿ ಅನಿಲ್ ಕಪೂರ್, ರಾಜ್‍ಕುಮಾರ್ ರಾವ್, ದಿವ್ಯಾ ದತ್ ಸೇರಿದಂತೆ ಹಲವು ತಾರೆಗಳಿದ್ದಾರೆ. ಆಗಸ್ಟ್ 3 ರಂದು ಸಿನಿಮಾ ತೆರೆಕಾಣುತ್ತಿದೆ.

Comments are closed.