ರಾಷ್ಟ್ರೀಯ

ಮರ ಹತ್ತಿರುವ ಕಾರಣಕ್ಕೆ ರಾಯಲ್‌ ಬೆಂಗಾಲ್‌ ಹುಲಿಗೆ ಜೈಲು ಶಿಕ್ಷೆ: ಆರೋಗ್ಯದಲ್ಲಿ ಏರುಪೇರು

Pinterest LinkedIn Tumblr


ಹೊಸದಿಲ್ಲಿ: ಮರ ಹತ್ತಿರುವ ಕಾರಣಕ್ಕೆ ಚಂಡೀಗಡದ ಮೃಗಾಲಯದ ರಾಯಲ್‌ ಬೆಂಗಾಲ್‌ ಹುಲಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು.

ವಿಚಿತ್ರ ಎಂದೆನಿಸದರೂ, ಇದು ಸತ್ಯ ಸಂಗತಿ. ಹುಲಿ ಮರ ಹತ್ತುತ್ತದೆ ಎಂದು ಮೃಗಾಲಯದ ನಿರ್ವಹಣೆಗಾರ ಅದನ್ನು ಕಳೆದ 3 ತಿಂಗಳಿನಿಂದ ಬೋನಿನಲ್ಲಿಟ್ಟಿದ್ದಾನೆ. ಇದರಿಂದ ಹುಲಿ ಆರೋಗ್ಯದಲ್ಲಿ ಏರುಪೇರಾಗಿ ಜೀರ್ಣಕ್ರಿಯೆ ವ್ಯತ್ಯಾಸವಾಗಿದೆ.

ಹುಲಿ ಅಸ್ವಸ್ತವಾಗಿರುವ ಕುರಿತು ಮೃಗಾಲಯದ ನಿರ್ದೇಶಕ ಗಮನಕ್ಕೆ ಬಂದಿದ್ದು, ನಿರ್ವಹಣೆ ಮಾಡುವವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಹುಲಿ ಮರ ಹತ್ತುತ್ತಿತ್ತು. ಹೀಗೆ ಬಿಟ್ಟರೆ, ಮರ ಹತ್ತಿ, ಸಾರ್ವಜನಿಕರ ಮೇಲೆ ಎರಗಬಹುದು ಎಂಬ ಆತಂಕ ಎದುರಾಯಿತು. ಇದಕ್ಕಾಗಿ ಹುಲಿಯನ್ನು ಬೋನಿಗೆ ಹಾಕಿರುವುದಾಗಿ ತಿಳಿಸಿದ್ದಾನೆ.

ನಿರ್ವಾಹಕನ ಕೆಲಸವನ್ನು ಕಟುವಾಗಿ ಟೀಕಿಸಿದ ನಿರ್ದೇಶಕ, ಹುಲಿಗೆ ಸೂಕ್ತ ಚಿಕಿತ್ಸೆ ನೀಡಿ, ಬೋನಿನಿಂದ ಹೊರ ಬಿಡುವಂತೆ ಸೂಚನೆ ನೀಡಿದ್ದಾರೆ. ಕಳೆದ 3 ತಿಂಗಳಿನಿಂದ ಹುಲಿ ನೋಡಲು ಬಂದವರಿಗೆ ನಿರಾಸೆಯುಂಟಾಗುತ್ತಿತ್ತು. ಇದೀಗ ಸಮಸ್ಯೆ ಬಗೆ ಹರಿದಿದ್ದು, ಹುಲಿ ನೋಡಲು ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Comments are closed.