ಕರ್ನಾಟಕ

ವಸತಿ ನಿಲಯಗಳಲ್ಲಿ ದಾಖಲಾಗುವ ಮಕ್ಕಳ ತೂಕದ ಆಧಾರದ ಮೇಲೆ ಗ್ರಾಂ ಲೆಕ್ಕದಲ್ಲಿ ಆಹಾರ

Pinterest LinkedIn Tumblr


ಕಲಬುರಗಿ: ವಸತಿ ನಿಲಯಗಳಲ್ಲಿ ದಾಖಲಾಗುವ ಮಕ್ಕಳ ತೂಕದ ಆಧಾರದ ಮೇಲೆ ಅವರಿಗೆ ಸಮರ್ಪಕವಾದ ಆಹಾರ ಸಾಮಗ್ರಿಗಳನ್ನು ಗ್ರಾಂ ಲೆಕ್ಕದಲ್ಲಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಚಿತ್ತಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ವರ್ಷದಿಂದ ಬೆಂಗಳೂರು ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಎರಡು ವಸತಿ ನಿಲಯದ ಮಕ್ಕಳಿಗೆ ಗ್ರಾಂ ಲೆಕ್ಕದಲ್ಲಿ ಆಹಾರ ಸಾಮಗ್ರಿ ನೀಡಲಾಗುತ್ತಿದೆ. ಇದರ ಪರಿಣಾಮವನ್ನಾಧರಿಸಿ ಈ ವ್ಯವಸ್ಥೆಯನ್ನು ರಾಜ್ಯದ ಎಲ್ಲ ವಸತಿ ನಿಲಯಗಳಿಗೆ ವಿಸ್ತರಿಸುವ ಯೋಜನೆಯಿದೆ ಎಂದರು.

ವಸತಿ ನಿಲಯದ ಮಕ್ಕಳ ಸಂಖ್ಯೆಗನುಗುಣವಾಗಿ ಹಾಗೂ ಲಭ್ಯವಿರುವ ಅನುದಾನಕ್ಕನುಗುಣವಾಗಿ ಆಹಾರ ಸಾಮಗ್ರಿ ನೀಡಲಾಗುತ್ತಿತ್ತು. ಇತ್ತೀಚೆಗೆ ರಾಜ್ಯದಲ್ಲಿರುವ ವಸತಿ ನಿಲಯದಲ್ಲಿ ಶಿಕ್ಷಕರು ಮತ್ತು ಮೇಲ್ವಿಚಾರಕರೊಂದಿಗೆ ಸಮಾಲೋಚಿಸಿದಾಗ ಮಕ್ಕಳ ತೂಕದ ಆಧಾರ ಆಹಾರ ಸಾಮಗ್ರಿ ನೀಡುವುದು ಸೂಕ್ತ ಎನ್ನುವ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಮಕ್ಕಳ ಹಾಜರಾತಿಯನ್ನು ಬಯೋಮೆಟ್ರಿಕ್‌ನಲ್ಲಿ ದಾಖಲಿಸಲಾಗುತ್ತಿದ್ದು, ಹಾಜರಾತಿಗೆ ಅನುಗುಣವಾಗಿ ಆಹಾರ ನೀಡಲಾಗುವುದು ಎಂದರು.

Comments are closed.