ಬೆಂಗಳೂರು: 34ವರ್ಷದ ಬೆಂಗಳೂರಿನ ಉದ್ಯಮಿಯೊಬ್ಬರು ಡೇಟಿಂಗ್ ವೆಬ್‌ಸೈಟ್‌ನಲ್ಲಿ ಡೇಟಿಂಗ್ ಮಾಡಿ ಸುಮಾರು 60 ಲಕ್ಷ ರುಪಾಯಿ ನಾಮ ಹಾಕಿಸಿಕೊಂಡಿದ್ದಾರೆ.
ಸೈಬರ್ ಕ್ರೈಮ್ ಪೊಲೀಸರಿಗೆ ಸಲ್ಲಿಸಿದ ದೂರಿನಂತೆ, ಮೋಸ ಹೊದ ಉದ್ಯಮಿ ಸತೀಶ್ ( ಹೆಸರು ಬದಲಿಸಲಾಗಿದೆ), ಡೇಟಿಂಗ್ ವೆಬ್‌ಸೈಟ್‌ನಲ್ಲಿ 2017 ಜುಲೈ 18 ರಂದು ಖಾತೆ ತೆರೆದಿದ್ದರು. ಬಳಿಕ ಟಞ76 ಹೆಸರಿನ ಖಾತೆಯ ಮೂಲಕ ಕೋಲ್ಕತಾ ಮೂಲದ ಹುಡಿಯೊಬ್ಬರ ಪರಿಚಯವಾಗಿತ್ತು. ತನ್ನನ್ನು ಅರ್ಪಿತಾ ಎಂದು ಪರಿಚಯಿಸಿಕೊಂಡು ವಾಟ್ಸಪ್ ನಂಬರ್ ವಿನಿಮಯ ಮಡಿಕೊಂಡಿದ್ದರು. ಬಳಿಕ ವಾಟ್ಸಪ್‌ನಲ್ಲಿ ಚಾಟಿಂಗ್ ಮಾಡುತ್ತಿದ್ದರು. ಪೋಟೊ ಕೂಡ ವಿನಿಮಯ ಮಾಡಿಕೊಂಡಿದ್ದರು.
ಕೆಲ ದಿನಗಳ ಬಳಿಕ ಅರ್ಪಿತಾ ತಂದೆಯನ್ನು ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ಸೇರಿಸಲಾಗಿದೆ ಅದ್ದರಿಂದ ಮೂವತ್ತು ಸಾವಿರ ರುಪಾಯಿ ಬೇಕು ಎಂದು ಕೇಳಿದ್ದಳು. ಸುರೇಶ್ ಅವಳ ಖಾತೆಗೆ 30 ಸಾವಿರ ಕಳುಹಿಸಿದ್ದರು. ಕೆಲ ದಿನಗಲ ಬಳಿಕ ತಂದೆಯ ಬಿಗಡಾಯಿಸಿದ್ದು, ಕೋಲ್ಕತಾದ ಬಿ.ಎಮ ಬಿರ್ಲಾ ಹಾರ್ಟ್ ರಿಸರ್ಚ್ ಸೆಂಟರ್‌ಗೆ ದಾಖಲಿಸಕಲಾಗಿದೆ ಎಂದು 2017 ಡಿಸೆಂಬರ್ 15 ರಿಂದ 2018 ಜನವರಿ 23ರ ನಡುವೆ ಹಲವು ಬಾರಿ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾಳೆ.
ಸತೀಶ್ ರೂಪಾಲಿ ಮಂಜೂದಾರ್ ಎಂಬವರ ಖಾತೆಗೆ 19 ಲಕ್ಷ ಹಾಗೂ ಕುಶಾನ್ ಮಂಜೂದಾರ್ ಎಂಬವರ ಖಾತೆಗೆ 40.7 ಲಕ್ಷ ರುಪಾಯಿ ಜಮೆ ಮಾಡಿದ್ದಾರೆ. ಇದಾದ ಬಳಿಕ ಅರ್ಪಿತಾ,ಸುರೇಶ್ ಮೆಸೇಜ್ ಹಗೂ ಕರೆಗೆ ಉತ್ತರ ನಿಡುತ್ತಿಲ್ಲ. ತಾನು ಮೋಸ ಎಂದು ತಿಳಿದ ಬಳಿಕ ಸೈಬರ್ ಕ್ರೈಮ್ ಪೊಲೀಸರಿಗೆ ದುರು ನೀಡಿದ್ದಾರೆ.
Comments are closed.