ಕರ್ನಾಟಕ

ಶ್ರೀರಾಮುಲು ಸೋಲಿಸೋದೇ ನನ್ನ ಗುರಿ: ಶಾಸಕ ತಿಪ್ಪೇಸ್ವಾಮಿ

Pinterest LinkedIn Tumblr


ನಾಯಕನಹಟ್ಟಿ: ಬಿಜೆಪಿ ಟಿಕೆಟ್‌ ವಂಚಿತ ಮೊಳಕಾಲ್ಮೂರು ಹಾಲಿ ಶಾಸಕ ಎಸ್‌.ತಿಪ್ಪೇಸ್ವಾಮಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಶ್ರೀರಾಮುಲು ಅವರಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.

ಚಳ್ಳಕೆರೆ ತಾಲೂಕಿನ ನೇರಲಗುಂಟೆ ಗ್ರಾಮದ ತಮ್ಮ ನಿವಾಸದಲ್ಲಿ ಶನಿವಾರ ಬೆಂಬಲಿಗರ ಸಭೆ ನಡೆಸಿದ ಬಳಿಕ ಅವರು ಈ ತೀರ್ಮಾನ ಘೋಷಿಸಿದರು. ಇದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿದ ತಿಪ್ಪೇಸ್ವಾಮಿ, “ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ರಾಷ್ಟ್ರೀಯ ಪಕ್ಷ ಅಥವಾ ಪಕ್ಷೇತರನಾಗಿ ಸ್ಪರ್ಧಿಸಿ ಶ್ರೀರಾಮುಲು ಅವರಿಗೆ ಸೋಲುಣಿಸುತ್ತೇನೆ. ನನಗೆ ಟಿಕೆಟ್‌ ಕೈ ತಪ್ಪಲು ಶ್ರೀರಾಮುಲು ಅವರೇ ಕಾರಣ. ಅವರನ್ನು ಸೋಲಿಸುವುದೇ ನನ್ನ ಗುರಿಯಾಗಿದ್ದು, ಇದಕ್ಕಾಗಿ ರಾಷ್ಟ್ರೀಯ ಪಕ್ಷದ ಜತೆಗೆ ಹೋಗಲೂ ಸಿದ್ಧ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಸುಳಿವು ನೀಡಿದರು.

ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ನಡೆದ ಲಾಠಿ ಪ್ರಹಾರಕ್ಕೆ ಶ್ರೀರಾಮುಲು ಅವರೇ ಕಾರಣ. ಅಮಾಯಕ ಹೆಣ್ಣುಮಕ್ಕಳು ಹಾಗೂ ವೃದ್ಧರ ಮೇಲೆ ದೌರ್ಜನ್ಯ ಎಸಗಲಾಗಿದೆ. ಪವಿತ್ರವಾದ ದೇವಾಲಯದ ಮುಂದೆ ಕ್ರೌರ್ಯದಿಂದ ವರ್ತಿಸಲಾಗಿದೆ.
– ಎಸ್‌. ತಿಪ್ಪೇಸ್ವಾಮಿ, ಮೊಳಕಾಲ್ಮೂರು ಶಾಸಕ.

-ಉದಯವಾಣಿ

Comments are closed.