ರಾಷ್ಟ್ರೀಯ

ಪೊಲೀಸ್ ಠಾಣೆಯ 500 ಮೀಟರ್‌ ದೂರದಲ್ಲಿ ಅಪ್ರಾಪ್ತೆಯ ಗ್ಯಾಂಗ್‌ ರೇಪ್‌!

Pinterest LinkedIn Tumblr


ಪಾಟ್ನಾ: ನಗರದ ಮಿಧಾಪುರ್‌ ಸಬ್ಜಿ ಮಂಡಿ ಪ್ರದೇಶದಲ್ಲಿ ಪೊಲೀಸ್‌ ಠಾಣೆಯ 500 ಮೀಟರ್‌ ದೂರದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳ ಮೇಲೆ ನಾಲ್ವರು ಕಾಮಾಂಧರು ಗ್ಯಾಂಗ್‌ರೇಪ್‌ ಎಸಗಿದ್ದಾರೆ.

ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಹೆಣ್ಣಿನ ಆರ್ತನಾದ ಕೇಳಿ ಸ್ಥಳಕ್ಕೆ ದೌಡಾಯಿಸಿ ನೋಡಿದಾಗ ನಾಲ್ವರು ಹೇಯ ಕೃತ್ಯ ಎಸಗುತ್ತಿದ್ದರು. ಇಬ್ಬರು ಕಾಮುಕರನ್ನು ಸ್ಥಳದಲ್ಲೇ ಪೊಲೀಸರು ಹಿಡಿದಿದ್ದು ಇನ್ನಿಬ್ಬರು ಪರಾರಿಯಾಗಿದ್ದಾರೆ. ಅವರಿಗಾಗಿ ಶೋಧ ಮುಂದುವರಿದಿದೆ.

ಪೊಲೀಸ್‌ ಠಾಣೆಯ 500 ಮೀಟರ್‌ ದೂರದಲ್ಲೇ ಈ ಘಟನೆ ನಡೆದಿದೆ.

ರೈಲು ನಿಲ್ದಾಣಕ್ಕೆ ತೆರಳುತ್ತಿದ್ದ ಬಾಲಕಿಯನ್ನು ನಾಲ್ವರು ಕಾಮುಕರು ಎಳೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದು ಬಂಧಿತ ಇಬ್ಬರು ಆರೋಪಿಗಳು ಪಾಟ್ನಾ ನಿವಾಸಿಗಳು ಎಂದು ಸ್ಪಷ್ಟಪಡಿಸಿದ್ದಾರೆ.

-ಉದಯವಾಣಿ

Comments are closed.