ದೆಹಲಿ: ಕಳೆದ ತಿಂಗಳು ರಾಜ್ಯಸಭೆಗೆ ಮರು ಆಯ್ಕೆಯಾಗಿದ್ದ ಕೇಂದ್ರ ಸಚಿವ ಅರುಣ್ ಜೇಟ್ಲಿ ಹೊಸ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜ್ಯ ಸಭಾ ಚೇರ್ಮನ್ ಕೂಡ ಆದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರ ಕಚೇರಿಯಲ್ಲಿ ಜೇಟ್ಲಿ ವಚನ ಸ್ವೀಕರಿಸಿದ್ದಾರೆ.
ಈ ಸಂದರ್ಭ ಮತ್ತೊಬ್ಬ ಕೇಂದ್ರ ಸಚಿವ ಅನಂತ್ ಕುಮಾರ್ ಹಾಗು ರಾಜ್ಯಸಭೆಯ ವಿಪಕ್ಷದ ನಾಯಕ ಗುಲಾಂ ನಬಿ ಆಝಾದ್ ಸೇರಿದಂತೆ ಅನೇಕ ಹಿರಿಯ ನಾಯಕರು ಉಪಸ್ಥಿತರಿದ್ದರು.
ಏಪ್ರಿಲ್ 2ರಂದು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಮೇಲ್ಮನೆಯ ನಾಯಕ ಅರುಣ್ ಜೇಟ್ಲಿ, ಅನಾರೋಗ್ಯದ ಕಾರಣ ಪ್ರಮಾಣ ವಚನ ಸ್ವೀಕರಿಸಲು ಆಗಿರಲಿಲ್ಲ.
ಕಿಡ್ನಿ ಸಂಬಂಧಿ ಸಮಸ್ಯೆಗಳಿಂದ ನರಳುತ್ತಿರುವ ಜೇಟ್ಲಿಯನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲು ಮಡಲಾಗಿತ್ತು. ಕಿಡ್ನಿ ಕಸಿಗೆ ಒಳಗಾಗಬೇಕಿದ್ದ ಜೇಟ್ಲಿಗೆ ಹೊಂದುವ ಕಿಡ್ನಿ ದೊರಕದ ಕಾರಣ ಮೂರು ದಿನಗಳ ಕಾಲ ಡಯಾಲಿಸಿಸ್ ಮಾಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
Comments are closed.