ಕರ್ನಾಟಕ

ಚುನಾವಣೆ ದೂರುಗಳಿಗೆ”ಸಮಾಧಾನ್‌’ ಆ್ಯಪ್‌

Pinterest LinkedIn Tumblr


ಬೆಂಗಳೂರು: ಎಲೆಕ್ಷನ್‌ ಬಂದಾಗ ಓಟು ಹಾಕುವುದಷ್ಟೇ ಒಬ್ಬ ಮತದಾರನ ಕೆಲಸ ಅಲ್ಲ. ಒಬ್ಬ ಪ್ರಜೆಯಾಗಿ ಇಡೀ ಚುನಾವಣಾ ಪ್ರಕ್ರಿಯೆಯಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ.

ಚುನಾವಣೆ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ನಡೆಯಬೇಕಾದರೆ ಚುನಾವಣಾ ಆಡಳಿತ ಯಂತ್ರದ ಜೊತೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಅನ್ನುವುದು ಚುನಾವಣಾ ಆಯೋಗ ಸಧೀಚ್ಛೆ. ಅದಕ್ಕಾಗಿ 2018ರ ರಾಜ್ಯ ವಿಧಾನಸಭಾ ಚುನಾವಣೆಗೆ “ಸಮಾಧಾನ್‌’ ಎಂಬ ಹೆಸರಲ್ಲಿ ಸಾರ್ವಜನಿಕ ದೂರು ಸಲ್ಲಿಕೆ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಆಯೋಗ ರೂಪಿಸಿದೆ.

“ಸಮಾಧಾನ್‌’ ಎಂಬ ಮಾಹಿತಿ ತಂತ್ರಜ್ಞಾನದ ಈ ಅಪ್ಲಿಕೇಷನ್‌ ಬಳಸಿಕೊಂಡು ಸಾಮಾನ್ಯ ಜನರು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರು ಅಥವಾ ಸಲಹೆಗಳನ್ನು ಆಯೋಗಕ್ಕೆ ನೀಡಬಹುದು. ದೂರು ನೀಡಲು ಇಲ್ಲಿ ಬಹುವಿಧದ ವ್ಯವಸ್ಥೆ ಇದೆ. ವೆಬ್‌ಸೈಟ್‌, ಈ-ಮೇಲ್‌, ಇ-ಲೆಟರ್‌, ಫ್ಯಾಕ್ಸ್‌, ಎಸ್‌ಎಂಎಸ್‌, 1950 ಕಾಲ್‌ ಸೆಂಟರ್‌ ಮೂಲಕ ದೂರು ಸಲ್ಲಿಸಬಹುದು ಅಥವಾ ಸಲಹೆಗಳನ್ನು ನೀಡಬಹುದು. ಜೊತೆಗೆ ಸಮಧಾನ ಹೆಸರಲ್ಲಿ ಆ್ಯಪ್‌ ಸಹ ಸಿದ್ಧಪಡಿಸಲಾಗಿದ್ದು, ಅದನ್ನು ಸಹ ಗೋಗಲ್‌ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಈ ಮೂಲಕ ಫೋಟೋ, ವಿಡಿಯೋ ಸಹಿತ ದೂರುಗಳನ್ನು ಕೊಡಬಹುದು.

-ಉದಯವಾಣಿ

Comments are closed.