Uncategorized

ಸಾಕು ನಾಯಿಗಳ ಜೊತೆ ದೇಶ ಸುತ್ತಿ ಬಂದ ಮಹಿಳೆ

Pinterest LinkedIn Tumblr


ಬೈಕ್‌ನಲ್ಲಿ, ಕಾರಿನಲ್ಲಿ ಮಹಿಳೆಯರು ವಿಶ್ವ ಪರ್ಯಟನೆ ಮಾಡಿ ಸಾಧನೆ ಮಾಡುತ್ತಾರೆ. ಆದರೆ, ತನ್ನೆರಡು ನಾಯಿಗಳನ್ನು ಕರೆದುಕೊಂಡು ದೇಶವನ್ನು ಸುತ್ತಿಬಂದ ಮಹಿಳೆಯ ಕಥೆ ಇಲ್ಲಿದೆ. ಅವರು ನಾಯಿಗಳನ್ನು ಕರೆದುಕೊಂಡು ಸ್ವಂತ ವಾಹನದಲ್ಲಿ ಪ್ರಯಾಣ ಮಾಡಲಿಲ್ಲ ಬದಲಾಗಿ ರೈಲು, ಬಸ್ಸು, ಟ್ಯಾಕ್ಸಿಗಳಲ್ಲಿ ಸಂಚರಿಸಿ ಬಂದಿದ್ದಾರೆ.

ಈ ಸಾಧನೆ ಮಾಡಿದ ಮಹಿಳೆ ದೆಹಲಿ ನಿವಾಸಿಯಾದ ದಿವ್ಯಾ ದುಗಾರ್‌. ಇಡೀ ದೇಶದಲ್ಲಿ ಸಾಕು ಪ್ರಾಣಿಗಳ ಕುರಿತು ಸಹಿಷ್ಣುತಾ ವಾತಾವರಣವಿರುವುದು ಗೋವಾದಲ್ಲಿ ಮಾತ್ರ, ಉಳಿದೆಡೆ ನಾಯಿಗಳನ್ನು ಕಂಡರೇ ಮಾರು ದೂರ ಓಡುತ್ತಾರೆ ಎಂಬುದು ಇವರ ಅನುಭವ. ಅಂದಹಾಗೆ ಇವರ ಬಳಿಯಿರುವ ಎರಡೂ ನಾಯಿಗಳೂ ಇವರೇ ರಕ್ಷಿಸಿದ ಬೀದಿ ಬದಿ ನಾಯಿಗಳು.

-ಉದಯವಾಣಿ

Comments are closed.