ರಾಷ್ಟ್ರೀಯ

ಭವಿಷ್ಯದ ಚುನಾವಣೆಗಳಲ್ಲಿ ಇವಿಎಂ ಬದಲು ಮತಪತ್ರ: ಪರಿಗಣನೆಗೆ ಸಿದ್ಧ ಎಂದ ಬಿಜೆಪಿ

Pinterest LinkedIn Tumblr
Officials examining

ಹೊಸದಿಲ್ಲಿ: ಭವಿಷ್ಯದ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲು ಹಳೆಯ ಪೇಪರ್‌ ಬ್ಯಾಲೆಟ್‌ ಪದ್ಧತಿಯನ್ನೇ ಜಾರಿಗೆ ತರುವ ನಿಟ್ಟಿನಲ್ಲಿ ರಾಜಕೀಯ ಒಮ್ಮತ ಮೂಡಿದರೆ, ಈ ಬಗ್ಗೆ ಚರ್ಚಿಸಲು ತಾನು ಮುಕ್ತ ಮನಸ್ಸು ಹೊಂದಿರುವುದಾಗಿ ಬಿಜೆಪಿ ಹೇಳಿದೆ.

ಪ್ರಮುಖ ಎದುರಾಳಿ ಕಾಂಗ್ರೆಸ್‌ ಪಕ್ಷ ಭವಿಷ್ಯದ ಚುನಾವಣೆಗಳಲ್ಲಿ ಮತಪತ್ರಗಳ ಪದ್ಧತಿಯನ್ನೇ ಅಳವಡಿಸುವಂತೆ ಚುನಾವಣೆ ಆಯೋಗಕ್ಕೆ ಆಗ್ರಹಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ನಿಲುವು ಬದಲಿಸಿದೆ.

‘ಮತಪತ್ರಗಳ ವ್ಯವಸ್ಥೆಯಿಂದ ಮತಯಂತ್ರಗಳ ವ್ಯವಸ್ಥೆಗೆ ಬದಲಾಗಿದ್ದು ರಾಜಕೀಯ ಒಮ್ಮತದ ಮೂಲಕ ಎಂಬುದನ್ನು ನಾನು ಕಾಂಗ್ರೆಸ್‌ಗೆ ನೆನಪಿಸಬಯಸುತ್ತೇನೆ. ಇದೀಗ ಪ್ರತಿಯೊಂದು ಪಕ್ಷವೂ ಪೇಪರ್‌ ಬ್ಯಾಲೆಟ್‌ ವ್ಯವಸ್ಥೆಗೆ ಮರಳಬೇಕೆಂದು ಬಯಸುವುದಾದರೆ , ಸಾಕಷ್ಟು ಚರ್ಚಿಸಿದ ಬಳಿಕ ನಾವೂ ಅದನ್ನು ಪರಿಗಣಿಸಬಹುದು’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್‌ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದರು.

ಚುನಾವಣೆಗೆ ಮೊದಲೇ ಇವಿಎಂಗಳನ್ನು ತಿದ್ದಲಾಗುತ್ತಿದೆ ಎಂದು ಹಲವು ಪಕ್ಷಗಳು ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಮತಪತ್ರಗಳ ಚರ್ಚೆ ಮುನ್ನೆಲೆಗೆ ಬಂದಿದೆ.

ಶನಿವಾರ ನಡೆದ ಕಾಂಗ್ರೆಸ್‌ನ 84ನೇ ಮಹಾಧಿವೇಶನದಲ್ಲಿ ಪೇಪರ್‌ ಬ್ಯಾಲೆಟ್‌ ಪುನರಾರಂಭಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಇತರ ಪ್ರಮುಖ ಪ್ರಜಾತಂತ್ರ ರಾಷ್ಟ್ರಗಳು ಪೇಪರ್‌ ಬ್ಯಾಲೆಟ್‌ ವ್ಯವಸ್ಥೆಗೆ ಮರಳಿವೆ ಎಂಬುದನ್ನು ಅದು ಉಲ್ಲೇಖಿಸಿದೆ.

Comments are closed.