ರಾಷ್ಟ್ರೀಯ

ಭಾರತದಲ್ಲಿ ಬಿಕಿನಿ ತೊಡಬೇಡಿ, ಇದು ಅಲ್ಫೋನ್ಸ್‌ ಫರ್ಮಾನು

Pinterest LinkedIn Tumblr


ಕೇಂದ್ರ ಪ್ರವಾಸೋದ್ಯಮ ಸಚಿವ ಕೆ.ಜೆ ಅಲ್ಫೋನ್ಸ್ ಅವರು ಪ್ರವಾಸಿಗರಿಗೆ ಎಲ್ಲಿ, ಯಾವ ಉಡುಪು ಧರಿಸಬೇಕು ಎಂಬ ಪಾಠ ಹೇಳಿಕೊಟ್ಟಿದ್ದಾರೆ. ಅವರ ಪ್ರಕಾರ ಭಾರತದಲ್ಲಿ ತುಂಡುಡುಗೆಯನ್ನು ಜನ ಸ್ವೀಕರಿಸುವುದಿಲ್ಲವಂತೆ. ಹಾಗಾಗಿ ಬಿಕಿನಿ ಮುಂತಾದ ಮೈಕಾಣೋ ಬಟ್ಟೆಗಳನ್ನು ತೊಟ್ಟು ತಿರುಗಬಾರದಂತೆ ಹಾಗೂ ಇಲ್ಲಿನ ಸಂಸ್ಕೃತಿಗೆ ತಕ್ಕಂತೆ ಉಡುಪು ಧರಿಸಬೇಕಂತೆ.

ವಿದೇಶಗಳಲ್ಲಿ ಜನರು ಬಿಕಿನಿ ಧರಿಸಿ ರಸ್ತೆಗಳಲ್ಲಿ ಅಡ್ಡಾಡುತ್ತಾರೆ. ಅವರು ಭಾರತಕ್ಕೆ ಬಂದಾಗ ಬಿಕಿನಿ ಧರಿಸಿಕೊಂಡೇ ಓಡಾಡುವುದನ್ನು ನೀವು ನಿರೀಕ್ಷಿಸುವುದಿಲ್ಲ. ಒಂದು ದೇಶಕ್ಕೆ ಹೋದಾಗ ಯಾವ ಸ್ಥಳದಲ್ಲಿ ಏನು ಉಡುಗೆ ತೊಡಬೇಕು ಎಂಬುದನ್ನು ಅರಿತು ವರ್ತಿಸಬೇಕು.

ಎಲ್ಲ ಪ್ರವಾಸಿಗರು ಸ್ಥಳೀಯ ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು. ಲ್ಯಾಟಿನ್ ಅಮೆರಿಕದ ನಗರಗಳಲ್ಲಿ ಜನರು ಬಿಕಿನಿ ಧರಿಸಿ ತಿರುಗಾಡುತ್ತಾರೆ. ಅಲ್ಲಿ ಅದು ಸ್ವೀಕಾರಾರ್ಹ. ಅದರ ಬಗ್ಗೆ ನನಗೂ ಅಭ್ಯಂತರವಿಲ್ಲ. ಆದರೆ ಇಲ್ಲಿಗೆ ಬಂದಾಗ ಇಲ್ಲಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಗೌರವಿಸಬೇಕು. ಭಾರತಕ್ಕೆ ಬಂದಾಗ ಸೀರೆ ಉಟ್ಟುಕೊಳ್ಳಿ ಎಂದು ನಾನು ಹೇಳುತ್ತಿಲ್ಲ. ಆದರೆ ಅಲ್ಲಿಗೆ ಹೊಂದುವಂತಹ ಉಡುಗೆಗಳನ್ನೇ ಧರಿಸಿ ಎಂದು ಅವರು ಹೇಳಿದ್ದಾರೆ.

Comments are closed.