ರಾಷ್ಟ್ರೀಯ

ಪ. ಬಂಗಾಳದಲ್ಲಿ ನೆಹರೂ ಪ್ರತಿಮೆಗೆ ಮಸಿ

Pinterest LinkedIn Tumblr


ಬರ್ದ್ವಾನ್‌ (ಪಶ್ಚಿಮ ಬಂಗಾಳ): ಇಲ್ಲಿಗೆ ಸಮೀಪದ ಕತ್ವಾ ಪಟ್ಟಣದಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಪ್ರತಿಮೆಗೆ ಶನಿವಾರ ದುಷ್ಕರ್ಮಿಗಳು ಕಪ್ಪುಬಣ್ಣ ಎರಚಿ ವಿರೂಪಗೊಳಿಸಿದ್ದಾರೆ.

ಕುಕೃತ್ಯಕ್ಕೆ ಕಾಂಗ್ರೆಸ್‌ ಪಕ್ಷ ವು ಬಿಜೆಪಿಯನ್ನು ದೂಷಿಸಿದರೆ, ಈ ಆರೋಪವನ್ನು ಕೇಸರಿ ಪಕ್ಷ ಸಾರಾಸಗಟಾಗಿ ತಳ್ಳಿಹಾಕಿದೆ. ಪೂರ್ವ ಬದ್ರ್ವಾನ್‌ ಜಿಲ್ಲೆಯ ಕತ್ವಾ ಪಟ್ಟಣದ ಟೆಲಿಫೋನ್‌ ಮೈದಾನದಲ್ಲಿರುವ ಪ್ರತಿಮೆಯ ಮುಖ ಕಪ್ಪು ಬಣ್ಣಕ್ಕೆ ತಿರುಗಿದ್ದುದನ್ನು ಶನಿವಾರ ಬೆಳಗ್ಗೆ ಸ್ಥಳೀಯರು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ, ಕುಕೃತ್ಯಕ್ಕೆ ಕಾರಣರಾದವರನ್ನು ತಕ್ಷಣವೇ ಬಂಸುವಂತೆ ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪೊಲೀಸ್‌ ಠಾಣೆ ಮುಂಭಾಗ ಧರಣಿ ನಡೆಸಿದರು.

Comments are closed.