Uncategorized

ದೇಶದ ಜನಸಂಖ್ಯೆ ಹೆಚ್ಚಳಕ್ಕೆ ಮುಸ್ಲಿಂರನ್ನು ದೂಷಿಸಿದ ಸಾಕ್ಷಿ ಮಹಾರಾಜ್‌

Pinterest LinkedIn Tumblr


ಮೀರತ್‌: ನಾಲ್ವರು ಹೆಂಡತಿಯರು ಮತ್ತು 40 ಮಕ್ಕಳನ್ನು ಹೊಂದಿರುವವರೇ ರಾಷ್ಟ್ರದಲ್ಲಿ ಜನಸಂಖ್ಯೆ ಹೆಚ್ಚಲು ಕಾರಣ. ಜನಸಂಖ್ಯೆ ಹೆಚ್ಚಳಕ್ಕೆ ಹಿಂದುಗಳು ಕಾರಣರಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಮುಸ್ಲಿಂರನ್ನು ಆರೋಪಿಸಿ ಬಿಜೆಪಿ ಮುಖಂಡ ಸಾಕ್ಷಿ ಮಹಾರಾಜ್‌ ವಿವಾದಾತ್ಮ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಂತ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಸಂಸದ ಸಾಕ್ಷಿ ಮಹಾರಾಜ್‌, ದೇಶದಲ್ಲಿ ನಿಜಕ್ಕೂ ಜನಸಂಖ್ಯಾ ನಿಯಂತ್ರಣವಾಗಬೇಕಾದರೆ ಕಠಿಣ ಕಾನೂನು ಅಗತ್ಯ. ರಾಷ್ಟ್ರಕ್ಕಾಗಿ ಪಕ್ಷಗಳು ರಾಜಕೀಯದ ಹೊರತಾಗಿ ನಿರ್ಧರ ಕೈಗೊಳ್ಳಬೇಕು ಎಂದು ಶುಕ್ರವಾರ ಹೇಳಿದ್ದರು.

ಧರ್ಮ, ಜಾತಿ ಹಾಗೂ ಭಾಷೆಯ ಆಧಾರದ ಮೇಲೆ ಮತಯಾಚನೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದ ಸೂಚನೆಗಳು ತಿಳಿಸಿವೆ. ಇದೀಗ ಬಿಜೆಪಿ ಪಕ್ಷದ ಸಂಸದರು ಸಮಾಜದ ಒಂದು ವರ್ಗದವರ ವಿರುದ್ಧ ಆರೋಪಿಸಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಈ ಸಂಬಂಧ ಚುನಾವಣಾ ಆಯೋಗ ಸಾಕ್ಷಿ ಮಹಾರಾಜ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜೆಡಿ–ಯು ಮುಖಂಡ ಕೆ.ಸಿ.ತ್ಯಾಗಿ ಒತ್ತಾಯಿಸಿದ್ದಾರೆ.

ನಾನು ಸಂತ ಸಮ್ಮೇಳನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಅದು ಯಾವುದೇ ಪಕ್ಷದ ಕಾರ್ಯಕ್ರಮವಾಗಿರಲಿಲ್ಲ. ನಾವು ಮಹಿಳೆಯರನ್ನು ಗೌರವಿಸಬೇಕು, ಆಕೆ ಯಂತ್ರವಲ್ಲ. ಹಾಗಾಗಿ, ನಾಲ್ವರು ಹೆಂಡತಿಯರು, 40 ಮಕ್ಕಳು ಹಾಗೂ ತ್ರಿವಳಿ ತಲಾಕ್‌ ಪದ್ಧತಿ ಸಹಿಸಲು ಅಸಾಧ್ಯ ಎಂದು ಸಾಕ್ಷಿ ಮಹಾರಾಜ್‌ ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿದ್ದಾರೆ.

Comments are closed.