Uncategorized

ಅಪರಿಚಿತ ಮೇಲ್​ಗೆ ಮರುಳಾಗದಿರಿ ಆರ್​ಬಿಐ ಗವರ್ನರ್ ಎಚ್ಚರಿಕೆ

Pinterest LinkedIn Tumblr

raghuramrajan-RBI-Governourಮುಂಬೈ: ರಾಷ್ಟ್ರೀಕೃತ ಬ್ಯಾಂಕ್​ಗಳ ಹೆಸರಿನಲ್ಲಿ, ಉನ್ನತ ಅಧಿಕಾರಿಗಳ ಹೆಸರು ಹೇಳಿ ಬರುವ ಅಪರಿಚಿತರ ದೂರವಾಣಿ ಕರೆಗೆಪ್ರತಿಕ್ರಿಯಿಸಬಾರದು ಎಂದು ಗ್ರಾಹಕರಿಗೆ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ ರಾಜನ್ ಎಚ್ಚರಿಕೆ ನೀಡಿದ್ದಾರೆ.

ಏಕೀಕೃತ ಹಣ ಪಾವತಿ ಸೌಲಭ್ಯಕ್ಕೆ (ಯುಪಿಐ) ಚಾಲನೆ ನೀಡಿದ ನಂತರ ಅವರು ಮಾತನಾಡಿದ ಅವರು, ರಿಸರ್ವ್ ಬ್ಯಾಂಕ್ ಯಾವುದೇ ಗ್ರಾಹಕರಿಗೆ ಹಣದ ಬೇಡಿಕೆ ಇಟ್ಟು ಈ ಮೇಲ್ ಕಳಿಸುವುದಿಲ್ಲ. ಈ ಮಾರ್ಗದಲ್ಲಿ ಧನ ಸಂಗ್ರಹಿಸುವ ಪ್ರಮೇಯವೂ ಆರ್​ಬಿಐ ಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜಗತ್ತಿನಲ್ಲೇ ಅತ್ಯಂತ ತ್ವರಿತ ಮತ್ತು ಸುವ್ಯವಸ್ಥಿತ ಆರ್ಥಿಕ ವಹಿವಾಟು ವಿಧಾನಗಳನ್ನು ಅಳವಡಿಸಿಕೊಂಡಿರುವ ರಿಸರ್ವ್ ಬ್ಯಾಂಕ್360 ಬಿಲಿಯನ್ ಮೌಲ್ಯದ ವಿದೇಶಿ ವಿನಿಮಯ ಹೊಂದಿದೆ. 8 ಲಕ್ಷ ಕೋಟಿ ಸರ್ಕಾರಿ ಬಾಂಡ್​ಗಳನ್ನು ಇರಿಸಿಕೊಂಡಿದೆ. ಹೀಗಿರುವಾಗ ಸಾರ್ವಜನಿಕರಿಂದ ನಿಧಿ ಸಂಗ್ರಹಿಸುವ, ಅಧಿಕ ಮೊತ್ತದ ಲಾಭಾಂಶ ದೊರಕಿಸಿಕೊಡುವ ಲಾಟರಿ ಯೋಜನೆ ಮಾಡುವ ಉದ್ದೇಶ ಸರ್ವಥಾ ಇಲ್ಲ. ಈ ನಿಟ್ಟಿನಲ್ಲಿ ಯಾರೂ ಮೋಸಹೋಗಬೇಡಿ ಎಂದು ಮನವಿ ಮಾಡಿದರು.

Write A Comment