ಮಂಗಳೂರು : ಜಿಲ್ಲೆಯ ನೀರಿನ ಮೂಲ ರಕ್ಷಣೆಯಾಗದಿದ್ದಲ್ಲಿ ಅಣೆಕಟ್ಟುಗಳ ನೀರಿನ ಮೂಲ ಬರಿದಾಗಲಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಲಸಂವರ್ಧನಾ ಪ್ರಾಧಿಕಾರ ರಚನೆಯಾಗ ಬೇಕಾಗಿದ್ದು, ಈ ಯೋಜನೆಗೆ ಅಗತ್ಯವಾದ ಅನುದಾನವನ್ನು ಸರ್ಕಾರವೇ ಒದಗಿಸ ಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ .ವಿ.ವಿ. ಭಟ್ ಹೇಳಿದ್ದಾರೆ.
ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ನಮ್ಮ ಊರಿನ ಹಿತರಕ್ಷಣೆ ನಮ್ಮ ಜವಾಬ್ದಾರಿಯಾಗಿದ್ದು ನಾವು ದೂರಗಾಮಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕರಾವಳಿ ಜಲಸಂವರ್ಧನಾ ಪ್ರಾಧಿಕಾರ ರಚನೆ ಅಗತ್ಯ ಎಂದು ತಿಳಿಸಿದ್ದಾರೆ. ಜಿಲ್ಲೆಯ ನೀರಿನ ಮೂಲ ಬರಿದಾಗ ಬಾರದೆಂದರೆ ನೇತ್ರಾವತಿ ನದಿಯ ಉಪನದಿಗಳ ಅಣೆಕಟ್ಟು ಸ್ಥಾಪನೆಯನ್ನು ನಿಷೇಧಿಸಬೆಕು ಎಂದು ವಿ.ವಿ. ಭಟ್ ಹೇಳಿದ್ದಾರೆ.
ಎತ್ತಿನಹೊಳೆ ಯೋಜನೆ ಡಿಪಿರ್ ಕಸದ ಬುಟ್ಟಿಗೆ ಹಾಕಬಹುದಾದ ಯೋಜನೆಯಾಗಿದ್ದು, ನಾನ್ ಸೆನ್ಸ ಡಿಪಿಆರ್ ಆಗಿದ್ದು, ಜನರನ್ನು ದಾರಿ ತಪ್ಪುಸಲಾಗುತ್ತಿದ್ದು, ಈ ಯೋಜನೆ ದುರಾಲೋಚನೆಯಿಂದ ಕೂಡಿದೆ. ಎತ್ತಿನಹೊಳೆ ಯೋಜನೆ ಕುಡಿಯುವ ನೀರಿನ ಯೋಜನೆ ಮಾತ್ರವಲ್ಲ, ಬೇರೆ ಉದ್ದೇಶಗಳನ್ನೊಳಗೊಂಡ ನೀರಾವರಿಯ ಯೋಜನೆಯಾಗಿದೆ ಎಂಬುದು ಈಗ ಸಾಬೀತಾಗುತ್ತಿದೆ. ಎತ್ತಿನಹೊಳೆ ಯೋಜನೆಯಿಂದ ನೀರು ಸಿಗುವುದಿಲ್ಲವೆನ್ನುದು ಸ್ಪಷ್ಟವಾಗಿದ್ದು, ಇದೀಗ ಸರಕಾರ ಶರಾವತಿ ಹಾಗೂ ಮತ್ತಿತರ ನದಿ ಮೂಲಗಳಿಂದಲೂ ನೀರನ್ನು ತರಲು ಪ್ರಯತ್ನಿಸುತ್ತಿದೆ ಎಂದು ನಿವೃತ್ತ ಪ್ರೊ.ಎಸ್.ಜಿ.ಮಯ್ಯ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮೇಯರ್ ಪುರುಷೋತ್ತಮ್, ವಿವಿಧ ಸಂಘಟನೆಗಳ ಪ್ರಮುಖರಾದ ಎಂ.ಜಿ. ಹೆಗ್ಡೆ, ಚಿತ್ರಾಪುರ, ಶಶಿರಾಜ್ ಕೊಳಂಬೆ, ರಾಮಚಂದ್ರ ಬೈಕಂಪಾಡಿ ಮುಂತಾದವರು ಉಪಸ್ಥಿತರಿದ್ದರು.