Uncategorized

ಕಿರುಕುಳಕ್ಕೊಳಗಾದ ಹಿಂದೂಗಳಿಗೆ ಭಾರತಕ್ಕೆ ಬರುವ ಹಕ್ಕಿದೆ: ಅಸ್ಸಾಂ ರಾಜ್ಯಪಾಲ

Pinterest LinkedIn Tumblr

12assamಗುವಾಹಾಟಿ: ಜಗತ್ತಿನ ಯಾವುದೇ ಭಾಗದಲ್ಲಿ ಹಿಂಸೆಗೊಳಗಾದ ಹಿಂದೂಗಳಿಗೆ ಭಾರತಕ್ಕೆ ಬರುವ ಹಕ್ಕಿದ್ದು, ಹಿಂಸೆಗೊಳಗಾದ ಹಿಂದುಗಳನ್ನು ಸ್ವಾಗತಿಸುವುದು ಭಾರತೀಯರ ಕರ್ತವ್ಯ ಎಂದು ಅಸ್ಸಾಂ ರಾಜ್ಯಪಾಲ ಪಿಬಿ ಆಚಾರ್ಯ ಹೇಳಿದ್ದಾರೆ.

ವಿದೇಶಗಳಲ್ಲಿ ಕಿರುಕುಳಕ್ಕೊಳಗಾದ ಹಿಂದೂಗಳನ್ನು ಭಾರತ ಸ್ವಾಗತಿಸದೇ ಇದ್ದಲ್ಲಿ ಅವರು ಮತ್ತೆಲ್ಲಿಗೆ ಹೋಗಬೇಕು ಎಂದು ಆಚಾರ್ಯ ಪ್ರಶ್ನಿಸಿದ್ದಾರೆ. ಹಿಂದೂಸ್ಥಾನ ಇರುವುದು ಹಿಂದುಗಳಿಗಾಗಿ ಎಂಬ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಪಿಬಿ ಆಚಾರ್ಯ,  “ಕಿರುಕುಳಕ್ಕೊಳಗಾದ ಹಿಂದೂಗಳಿಗೆ ಆಶ್ರಯ ಬಯಸುವುದಕ್ಕೆ ಭಾರತವಲ್ಲದೆ ಮತ್ತೆ ಯಾವ ದೇಶವಿದೆ ಎಂಬ ಅರ್ಥದಲ್ಲಿ ಹಿಂದೂಸ್ಥಾನ ಹಿಂದೂಗಳಿಗೆ ಎಂದು ಹೇಳಿದ್ದೇನೆ. ನನ್ನ ಅರ್ಧದಷ್ಟು ಹೇಳಿಕೆಯನ್ನು ಮಾತ್ರ  ಮಾಧ್ಯಮಗಳು ಪ್ರಕಟಿಸಿದ್ದು ವಿವಾದಕ್ಕೆ ಕಾರಣವಾಗಿದೆ ಎಂದಿದ್ದಾರೆ ಪಿಬಿ ಆಚಾರ್ಯ.

“ಭಾರತೀಯ ಮುಸ್ಲಿಮರು ಎಲ್ಲಿಗೆ ಬೇಕಾದರೂ ಹೋಗಲು ಮುಕ್ತರಾಗಿದ್ದಾರೆ. ಅವರಲ್ಲಿ ಬಹುತೇಕರು ಪಾಕಿಸ್ತಾನಕ್ಕೆ ಹೋಗಿದ್ದಾರೆ. ಯಾರಾದರೂ ಪಾಕಿಸ್ತಾನ ಅಥವಾ ಬಾಂಗ್ಲಾ ದೇಶಕ್ಕೆ ಹೋಗಲು ಬಯಸುವುದಾದರೆ, ಅವರು ಧಾರಾಳವಾಗಿ ಹೋಗಬಹುದು. ಅಲ್ಲಿ ತಸ್ಲಿಮಾ ನಸ್ರೀನ್ ರಂತೆ ಹಿಂಸೆಯೆನಿಸಿದರೆ, ಅವರು ಇಲ್ಲಿಗೆ ಬರಬಹುದು” ಎಂದು ಆಚಾರ್ಯ ಪತ್ರಿಕಾ ಗೋಷ್ಠಿಯೊಂದರಲ್ಲಿ ಹೇಳಿದ್ದರು.

Write A Comment