ರಾಷ್ಟ್ರೀಯ

ಗುಜರಾತ್: ಮೊದಲ ಹಂತದ ಸ್ಥಳೀಯ ಚುನಾವಣೆ

Pinterest LinkedIn Tumblr

14ಅಹಮದಾಬಾದ್: ಇಂದು ಗುಜರಾತ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ವರಿಷ್ಠ ಎಲ್‌.ಕೆ ಅಡ್ವಾಣಿ ಅಹಮದಾಬಾದ್‌ನಲ್ಲಿ ತಮ್ಮ ಮತ ಚಲಾವಣೆ ಮಾಡಿದರು.  ಆಡಳಿತಾರೂಡ ಭಾರತೀಯ ಜನತಾ ಪಕ್ಷದ ಸಿಎಂ ಆನಂದಿಬೆನ್ ಪಟೇಲ್‌ ಅವರ ಪಾಲಿಗೆ ಈ ಚುನಾವಣೆ ಅಗ್ನಿಪರೀಕ್ಷೆ ಎಂದೇ ಹೇಳಲಾಗುತ್ತಿದೆ.

ಆರು ನಗರಪಾಲಿಕೆಗಳ 143 ವಾರ್ಡ್ ಗಳ 568 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಸಾವಿರದ 856 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. 2 ಹಂತದಲ್ಲಿ ಚುನಾವಣೆ ನಡೆಯಲಿದ್ದು, 13 ಸಾವಿರ ಮತದಾನ ಕೇಂದ್ರಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಸುಮಾರು 95 ಲಕ್ಷಕ್ಕೂ ಅಧಿಕ ಮತದಾರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.

ಅಹಮದಾಬಾದ್, ಸೂರತ್, ರಾಜ್ ಕೋಟ್, ವಡೋದರ, ಜಮ್ ನಗರ್ ಮತ್ತು ಭಾವನಗರ ನಗರಪಾಲಿಕೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲೆಲ್ಲ ಸದ್ಯ ಬಿಜೆಪಿ ಹಿಡಿತದಲ್ಲಿವೆ.

ಮೀಸಲಾತಿಗೆ ಒತ್ತಾಯಿಸಿ ಪಟೇಲ್‌ ಸಮುದಾಯ ರಾಜ್ಯದಲ್ಲಿ ನಡೆಸುತ್ತಿರುವ ಹೋರಾಟ ಚುನಾವಣೆಯ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಮೊದಲು ಬಿಜೆಪಿಯ ಬೆಂಬಲಿಗರಾಗಿದ್ದ ಪಟೇಲ್ ಸಮುದಾಯ ಈಗ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದೆ. ಪಟೇಲ್ ಸಮುದಾಯದ ಒಬ್ಬನೇ ಒಬ್ಬ ಅಭ್ಯರ್ಥಿಯು ಕೂಡ ಕಮಲ ಪಕ್ಷದಿಂದ ಕಣಕ್ಕಳಿದಿಲ್ಲ.

ಮೋದಿಯವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ನಂತರ ಇದೇ ಪ್ರಥಮ ಬಾರಿಗೆ  ಗುಜರಾತ್‌ನಲ್ಲಿ ಸ್ಥಳೀಯ ಚುನಾವಣೆ ನಡೆಯುತ್ತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಗುಜರಾತ್‌ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದ್ದು, ಈ ಚುನಾವಣೆಯಲ್ಲಿ ಸೋತರೆ ಅವರ ಭವಿಷ್ಯಕ್ಕೂ ಇದು ಕಂಟಕವನ್ನು ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ­ದಾನ ಮಾಡುವುದನ್ನು ಗುಜರಾತ್‌­ನಲ್ಲಿ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಮತದಾನ ಮಾಡದೆ ಇದ್ದರೆ ಶಿಕ್ಷೆ ಅಥವಾ ದಂಡ ವಿಧಿಸಲು ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ಇದೆ. ದೇಶದಲ್ಲೇ ಮೊದಲ ಬಾರಿಗೆ ಮತದಾನ ಕಡ್ಡಾಯಗೊಳಿಸಿದ ಹೆಗ್ಗಳಿಕೆಗೆ ಗುಜರಾತ್‌‌ನದು.

Write A Comment