Uncategorized

ಇನ್ನೂ ಮೂರು ದಿನ ಸುರಿಯಲಿದೆ ಮಳೆ

Pinterest LinkedIn Tumblr

rain-in-bangalore

ಬೆಂಗಳೂರು/ಚೆನ್ನೈ: ಪ್ರಸಕ್ತ ಸಾಲಿನ ದೀಪಾವಳಿಗೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಉಂಟಾಗಿ ಕರ್ನಾಟಕ, ತಮಿಳುನಾಡಿನಾದ್ಯಂತ ಧಾರಾಕಾರ ಮಳೆಯಾಗುತ್ತಿದೆ.

ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಮಿಳುನಾಡಿನಲ್ಲಿ ಇಬ್ಬರು ಅಸುನೀಗಿದ್ದಾ ರೆ. ಬೆಂಗಳೂರಿನಲ್ಲಿ ಸಂಜೆ 5 ಗಂಟೆ ಬಳಿಕ ಧಾರಾಕಾರ ಮಳೆಯಾಗಿದ್ದರಿಂದ ಹಬ್ಬಕಾಪ್ಸ್ ಸ್ಥಳಗಳಿಗೆ ತೆರಳುವವರಿಗೆ ಅಡ್ಡಿ ಉಂಟಾಯಿತು. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸೋಮವಾರ ಬೆಳಗ್ಗೆಯಿಂದಲೇ ಶುರುವಾದ ಜಿಟಿ ಜಿಟಿ ಮಳೆ ಇನ್ನೂ ಮೂರು ದಿನ ಮುಂದುವರಿಯಲಿದೆ. ರಾಜ್ಯದ ದಕ್ಷಿಣ ಒಳನಾಡು ಸೇರಿದಂತೆ ಕರಾವಳಿ ಕರ್ನಾಟಕ ದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ 3-4

ದಿನ ರಾಜ್ಯ ದಲ್ಲಿ ಮೋಡಕವಿದ ವಾತಾವರಣ ಹಾಗೂ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

ಆದರೆ ಉತ್ತರ ಕರ್ನಾಟಕದ ಒಂದೆರಡು ಪ್ರದೇಶಗಳನ್ನು ಹೊರತುಪಡಿಸಿದರೆ ಮಳೆಯಾಗುವ ಸಾಧ್ಯತೆ ವಿರಳವಾಗಿದೆ ಎಂದು ಮಾಹಿತಿ ನೀಡಿದೆ. ಜನರ ಪರದಾಟ: ರಾಜಧಾನಿಯಲ್ಲಿ ಬೆಳಗ್ಗೆಯಿಂದಲೇ ತುಂತುರು ಮಳೆ ಪ್ರಾರಂಭವಾದ್ದರಿಂದ ವಾಹನ ಸವಾರರಿಗೆ, ಜನ ಸಂಚಾರಕ್ಕೆ ಅಡ್ಡಿಯಾಗಿತ್ತು. ದೀಪಾವಳಿ ಹಬ್ಬದ ಅಂಗವಾಗಿ ಊರುಗಳತ್ತ ಪ್ರಯಾಣ ಬೆಳೆಸಿದ್ದ ಜನರು ಮಳೆಯನ್ನು ಶಪಿಸುತ್ತಲೇ ತೆರಳಿದರು. ಸಂಜೆ 5ರ ಸುಮಾರಿಗೆ ರಭಸವಾಗಿಯೇ ಮಳೆ ಸುರಿಯಲು ಆರಂಬಿsಸಿದ್ದರಿಂದ ನಗರದ ಪ್ರಮುಖ ರಸ್ತೆಗಳು ವಾಹನ ದಟ್ಟಣೆಯಿಂದ ಕೂಡಿದ್ದವು.

ಪಟಾಕಿ ವಹಿವಾಟು ಠುಸ್: ಮಳೆಯಿಂದಾಗಿ ಪಟಾಕಿ ವಹಿವಾಟು ಮೇಲೆ ನೇರ ಪರಿಣಾಮ ಬೀರಿದ್ದು, ಪಟಾಕಿ ವ್ಯಾಪಾರವನ್ನು ಠುಸ್ಸೆನಿಸಿದೆ. ಮಳೆಯಿಂದಾಗಿ ಸಾರ್ವಜನಿಕರು ಪಟಾಕಿ ಖರೀದಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂದು ವರ್ತಕರೊಬ್ಬರ ಅಭಿಪ್ರಾಯ.

Write A Comment