ರಾಷ್ಟ್ರೀಯ

ಆಸ್ತಿ ತೆರಿಗೆ ಪರಿಷ್ಕರಣೆ; ಆಕ್ಷೇಪಣೆ ಇದ್ದರೆ ಈಗಲೇ ಸಲ್ಲಿಸಿ

Pinterest LinkedIn Tumblr

bbmp-taxಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆಗೆ ಅರ್ಜಿ ಆಹ್ವಾನಿಸಲಾಗಿದೆ.

8 ವರ್ಷಗಳ ಬಳಿಕ  ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲಾಗಿದೆ. ವಸತಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ.20ರಿಂದ ಶೇ.25 ರಷ್ಟು ತೆರಿಗೆ ಪರಿಷ್ಕರಣೆ ಮಾಡಿರುವುದರ ಜೊತೆಗೆ ತೆರಿಗೆ ವಲಯಗಳನ್ನೂ  ರ್‍ವರ್ಗೀಕರಣ ಮಾಡಲಾಗಿದೆ. ಇದರಿಂದಾಗಿ ಆಸ್ತಿ ತೆರಿಗೆ ಮತ್ತಷ್ಟು ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ. ಅಧಿಸೂಚನೆಯ ಪ್ರತಿಯನ್ನು http://bbmp.gov.in ನಲ್ಲಿ  ಹಾಕಲಾಗಿದೆ.ಸಾರ್ವಜನಿಕರು ಆಕ್ಷೇಪಣೆಗಳನ್ನು ಲಿಖಿತ ರೂಪದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯ ಆಯುಕ್ತರ ವಿಳಾಸಕ್ಕೆ ಕಳುಹಿಸಬಹುದು.

ತೆರಿಗೆ ಸಂಗ್ರಹ ಹೆಚ್ಚಳ ನಿರೀಕ್ಷೆ: ಕೆಎಂಸಿ ಕಾಯ್ದೆ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಿಸಬಹುದು. ತೆರಿಗೆ ಪರಿಷ್ಕರಿಸುವ ಬಗ್ಗೆ 2013ರಲ್ಲಿ ಕೌನ್ಸಿಲ್‍ನಲ್ಲಿ ನಿರ್ಣಯ ಕೈಗೊಂಡಿದ್ದರೂ, ಹಲವು ಕಾರಣಗಳಿಂದ ಜಾರಿಯಾಗಿರಲಿಲ್ಲ.ನಂತರದ ಆರ್ಥಿಕ ವರ್ಷಗಳಲ್ಲೂ ಇದು ಜಾರಿಗೆ ಬಂದಿರಲಿಲ್ಲ. ಹೀಗಾಗಿ ಈ ವರ್ಷ ಒಂದೇ ಹಂತದಲ್ಲಿ ಆಸ್ತಿ ತೆರಿಗೆಯನ್ನು ಶೇ. 20ರಿಂದ 25ರಷ್ಟು ಹೆಚ್ಚಳ ಮಾಡಲು ತೀರ್ಮಾ ನಿಸಲಾಗಿದೆ ಎಂದು  ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಇದರ ಪ್ರಕಾರ ತೆರಿಗೆ ಜಾರಿಯಾದರೆ ವಸತಿ ಪ್ರದೇಶಗಳಿಗೆ ಶೇ.20.96-ಶೇ. 45.15, ವಸತಿಯೇತರ ವಾಣಿಜ್ಯ ಆಸ್ತಿಗಳಿಗೆ ಶೇ.41.75 – ಶೇ.128.80 ಹೆಚ್ಚಳವಾಗಲಿದೆ. 64 ಕಂದಾಯ ವಲಯ ವ್ಯಾಪ್ತಿಯ ಪ್ರದೇಶಗಳನ್ನು `ಎ’, `ಬಿ’, `ಸಿ’, `ಡಿ’, `ಇ’, `ಎಫ್ ವಲಯಗಳೆಂದು ವಿಂಗಡಿಸಲಾಗಿದೆ. ಇಲ್ಲಿ ಜಾಹೀರಾತು ವಲಯಗಳನ್ನೂ ಗುರುತಿಸಲಾಗಿದೆ.

Write A Comment