Uncategorized

ಯಾಕುಬ್ ಕುರಿತು ವಿವಾದದ ಕಿಡಿ ಹತ್ತಿಸಿದ ನಿವೃತ್ತ ನ್ಯಾಯಮೂರ್ತಿ !

Pinterest LinkedIn Tumblr

katjuಸಲ್ಮಾನ್ ಖಾನ್ ಯಾಕುಬ್ ಪರ ಟ್ವಿಟ್ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಘಟನೆ ಎಲ್ಲರಿಗೂ ಗೊತ್ತು. ಈ ವಿವಾದ ತಣ್ಣಗಾಗುತ್ತಿದ್ದಂತೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕೆಂಡೇಯ ಕಾಟ್ಜು, ಅವರು ಯಾಕುಬ್ ಕುರಿತಾಗಿ ಹೇಳಿಕೆ ನೀಡುವ ಮೂಲಕ ವಿವಾದದ ಕಿಡಿ ಹತ್ತಿಸಿದ್ದಾರೆ.

ಹೌದು. ಮುಂಬೈ ಸರಣಿ ಸ್ಪೋಟಕ್ಕೆ ಸಂಬಂಧಿಸಿದಂತೆ ಯಾಕೂಬ್‌ಗೆ ಗಲ್ಲು ಶಿಕ್ಷೆ ವಿಧಿಸಿರುವ ಕುರಿತು ಮಾತನಾಡಿರುವ ಕಾಟ್ಜು, ಆತ ತಪ್ಪಿತಸ್ಥನೆಂದು ದೃಢೀಕರಿಸಲು ಪಡೆದ ಸಾಕ್ಷಿಗಳು ಬಲವಾಗಿರಲಿಲ್ಲ. ಅಲ್ಲದೇ ಭಾರತದಲ್ಲಿ ಪೊಲೀಸರು ಹೇಗೆ ತಪ್ಪೊಪ್ಪಿಗೆ ಪಡೆಯುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರು ನೀಡುವ ಕಿರುಕುಳಕ್ಕೆ ಎಂಥವರಾದರೂ ತಪ್ಪೊಪ್ಪಿಗೆ ನೀಡಲೇಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

ಯಾಕೂಬ್‌ಗೆ ಮರಣ ದಂಡನೆ ವಿಧಿಸಿರುವುದರಿಂದ ಅವನ ಸಹ ಸಂಚುಕೋರರು, ನೀಡಿದ ತಪ್ಪೊಪ್ಪಿಗೆಯನ್ನು ಹಿಂಪಡೆಯಬಹುದು ಎಂಬ ಉಚಿತ ಸಲಹೆಯನ್ನೂ ಕಾಟ್ಜು ನೀಡಿದ್ದಾರೆ.

Write A Comment