ಮಾನಸಿಕ ಅಸ್ವಸ್ಥೆಯೊಬ್ಬಳು ಆತ್ಮಾಹುತಿ ಬಾಂಬ್ ದಾಳಿ ನಡೆಸಿ 15 ಜನರನ್ನು ಬಲಿ ತೆಗೆದುಕೊಂಡ ಆಘಾತಕಾರಿ ಘಟನೆ ಉತ್ತರ ನೈಜೇರಿಯಾದಲ್ಲಿ ನಡೆದಿದೆ.
ಇಲ್ಲಿನ ಡಮಾಟೂರ್‌ನ ಜನದಟ್ಟನೆಯಿಂದ ಕೂದಿರುವ ಮಾರುಕಟ್ಟೆಯಲ್ಲಿ ಸಾಕಷ್ಟು ಜನರು ಸೇರಿದ್ದರು. ಈ ಸಮಯದಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡ ಮಹಿಳೆಯೊಬ್ಬಳು ತನ್ನನ್ನು ತಾನೇ ಸ್ಪೋಟಗೊಳಿಸಿಕೊಂಡಳು ಎನ್ನಲಾಗಿದೆ. ಅಚ್ಚರಿಯೆಂದರೆ ಈಕೆ ಆ ಪ್ರದೇಶದಲ್ಲಿ ಬಹಳ ವರ್ಷಗಳಿಂದಲೂ ಪರಿಚಿತಳೇ ಆಗಿದ್ದು ಬುದ್ಧಿ ಸೀಮಿತ ಕಳೆದುಕೊಂಡು ತಿರುಗಾಡುತ್ತಿದ್ದಳು.
ಈ ಸ್ಫೋಟದಿಂದ ಸ್ಥಳದಲ್ಲಿಯೇ 15 ಜನರು ಸಾವನ್ನಪ್ಪಿದ್ದು 47 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.