Uncategorized

ಆಫ್ಘಾನಿಸ್ತಾನದ ನೋಟು ಮಾರುತಿದ್ದ ಇಬ್ಬರ ಬಂಧನ

Pinterest LinkedIn Tumblr

kota

ಬೆಂಗಳೂರು, ಜು.18: ವಿದೇಶಿ ನೋಟುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿ ಅವರಿಂದ 10 ಸಾವಿರ ರೂ. ಮೌಲ್ಯದ 41 ಆಫ್ಘಾನಿಸ್ತಾನದ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಲಗ್ಗೆರೆಯ ಮೊಹಮ್ಮದ್ ಮ್ರಾನ್(21), ಚೌಡೇಶ್ವರಿ ನಗರದ ಲಹುಮಾನ್ ಪಾಷ(22) ಬಂಧಿತ ಆರೋಪಿಗಳು. ವಿದೇಶಿ ಹಣವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಹಲಸೂರು ಗೇಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯನ್ನು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ಹಲಸೂರು ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಅಮರನಾಥ್ ರೆಡ್ಡಿ ನೇತೃತ್ವದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆನಂದ್ ಕುಮಾರ್ ಹಾಗೂ ಪಿಎಸ್‌ಐ ವಜ್ರಮುನಿ, ಸಿಬ್ಬಂದಿಗಳಾದ ಬಸವರಾಜು, ಗಂಗಾಧರ್, ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.

Write A Comment