ರಾಷ್ಟ್ರೀಯ

ರಂಜಾನ್‌ : ಮುಸ್ಲಿಂ ಬಾಂಧವರಿಗೆ ಶುಭ ಕೋರಿದ ಮೋದಿ

Pinterest LinkedIn Tumblr

PM-Modi

ನವದೆಹಲಿ,ಜು.18: ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ದೇಶದಾದ್ಯಂತ ರಂಜಾನ್ ಅಚರಣೆ ಮಾಡುತ್ತಿರುವ ಮುಸ್ಲಿಂ ಸಹೋದದರಿಗೆ ನನ್ನ ಶುಭಾಶಯಗಳೆಂದು ಟ್ವಿಟ್ ಮಾಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಉಪವಾಸ ಅಚರಣೆ ಮಾಡಿ ಇಂದು ಹಬ್ಬದಲ್ಲಿ ತೊಡಗಿಸಿಕೊಂಡಿರುವ ಎಲ್ಲರಿಗೂ ಅಭಿನಂದನೆಗಳು. ನೀವು ನಂಬಿರುವ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಆಶಿಸಿದ್ದಾರೆ. ಇದೇ ವೇಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸೇರಿದಂತೆ ಅನೇಕ ನಾಯಕರು ಶುಭ ಕೋರಿದ್ದಾರೆ. ಮುಸ್ಲಿಂ ಸಹೋದರ ಮತ್ತು ಸಹೋದರಿಯರಿಗೆ ನನ್ನ ಶುಭಾಶಯಗಳು. ನಮ್ಮಲ್ಲಿರುವ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಈ ಶುಭ ಸಂದರ್ಭದಲ್ಲಿ ಸಾಮರಸ್ಯದಿಂದ ಬಾಳೋಣವೆಂದು ಶುಭ ಸಂದೇಶದಲ್ಲಿ ಹಾರೈಸಿದ್ದಾರೆ.

ಶಾಂತಿ, ಸಹೋದರತೆ, ಸಹಬಾಳ್ವೆಯ ಪ್ರತೀಕದಂತಿರುವ ರಂಜಾನ್ ಹಬ್ಬ ಅಚರಣೆ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಉಪರಾಷ್ಟ್ರಪತಿ ಹಮೀದ್ ಅನ್ಸರಿ ಹೇಳಿದ್ದಾರೆ.

Write A Comment