Uncategorized

ತಸ್ಲಿಮಾ ಲೇಖನ ಸೃಷ್ಟಿಸಿದ ಗಲಭೆ: 135 ಕೇಸು ವಾಪಸ್

Pinterest LinkedIn Tumblr

tas

ಬೆಂಗಳೂರು: ಮುಸ್ಲಿಂ ಲೇಖಕಿ ತಸ್ಲಿಮಾ ನಸ್ರೀನ್ ಅವರ ‘ಪರ್ದಾ ಹೈ ಪರ್ದಾ’ ಕೃತಿಯ ಅನುವಾದಿತ ಲೇಖನವು ಪತ್ರಿಕೆಯಲ್ಲಿ ಪ್ರಕಟವಾದ ಬಳಿಕ ಶಿವಮೊಗ್ಗ, ಹಾಸನದಲ್ಲಿ ನಡೆದ ಗಲಭೆಗಳು ಹಾಗೂ ಮೈಸೂರಿನ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಒಟ್ಟು 175 ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ರಾಜ್ಯ ಸಚಿವ ಸಂಪುಟ ನಿರ್ಣಯಿಸಿದೆ.

ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

2010ರಲ್ತಲಿ ಸ್ಲೀಮಾ ನಸ್ರೀನ್ ಅವರ ಅನುವಾದಿತ ಲೇಖನವು ಪ್ರಕಟಗೊಂಡ ಹಿನ್ನೆಲೆಯಲ್ಲಿ ಮುಸ್ಲಿಂ ಜನಾಂಗವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಲ್ಲಿ ಗಲಭೆ ನಡೆದಿತ್ತು ಉಂಟಾಗಿತ್ತು. ಪೊಲೀಸ್ ಗೋಲೀಬಾರ್ ನಡೆದು ಸಾದಿಕ್ ಮತ್ತು ಲತೀಫ್ ಎಂಬಿಬ್ಬರು ಯುವಕರು ಸಾವನ್ನಪ್ಪಿದ್ದರು. ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಪರಿಸ್ಥಿತಿ ನಿಯಂತ್ರಣಕ್ಕಾಗಿ ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿತ್ತು ಮತ್ತು ಕರ್ಫ್ಯೂ ವಿಧಿಸಲಾಗಿತ್ತು. ಉಭಯ ಕೋಮುಗಳ ಅಂಗಡಿ ಮುಗ್ಗಟ್ಟುಗಳಿಗೆ ಹಾನಿ ಸಂಭವಿಸಿತ್ತು.

ಗಲಭೆ ಸಂಬಂಧ ಶಿವಮೊಗ್ಗದಲ್ಲಿ ದಾಖಲಾಗಿದ್ದ 114 ಕೇಸುಗಳು ಹಾಗೂ ಹಾಸನ ಜಿಲ್ಲೆಯಲ್ಲಿ ದಾಖಲಾಗಿದ್ದ 21 ಸೇರಿದಂತೆ 135 ಕೇಸುಗಳನ್ನು ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ.

ಇದೇ ವೇಳೆ, ಮೈಸೂರಿನಲ್ಲಿ ನಡೆದ ಮತ್ತೊಂದು ಕೋಮು ಸಂಬಂಧಿತ ಗಲಭೆಯಲ್ಲಿ ದಾಖಲಾಗಿದ್ದ 40 ಕೇಸುಗಳನ್ನೂ ವಾಪಸ್ ಪಡೆಯಲು ನಿರ್ಧರಿಸಲಾಗಿದೆ.

ಕಡತ ವಿಲೇವಾರಿಗೆ ಸೂಚನೆ

ಇದೇ ಸಂದರ್ಭದಲ್ಲಿ, ರಾಜ್ಯದ ಹಲವು ಇಲಾಖೆಗಳಲ್ಲಿ ರಾಶಿ ಬಿದ್ದಿರುವ ಸಾವಿರಾರು ಫೈಲುಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸಚಿವರು ಹಾಗೂ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಕೂಡ ನಿರ್ಧರಿಸಲಾಗಿದೆ.

Write A Comment