Uncategorized

ನೇಪಾಳದಲ್ಲಿ ಸುಮಾರು 500ಕ್ಕೂ ಹೆಚ್ಚು ಕನ್ನಡಿಗರು ಅತಂತ್ರ

Pinterest LinkedIn Tumblr

Nempal-Kannada-1

ಕಠ್ಮಂಡು, ಏ.28-ಭೂಕಂಪ ಪೀಡಿತ ನೇಪಾಳದಲ್ಲಿ ಸುಮಾರು 500ಕ್ಕೂ ಹೆಚ್ಚು ಕನ್ನಡಿಗರು ಅತಂತ್ರರಾಗಿದ್ದಾರೆ. ಅತ್ತ ಅಲ್ಲಿಯೂ ನೆಲೆ ಕಾಣದೆ, ಇತ್ತ ನಾಡಿಗೂ ಬರಲಾಗದೆ ಅತಂತ್ರ ಪರಿಸ್ಥಿತಿಯಲ್ಲಿ  ದಿನದೂಡುತ್ತಿದ್ದಾರೆ.  ನಾಡಿನ ವಿವಿಧೆಡೆಯಿಂದ ಕುಟುಂಬ ಸಮೇತರಾಗಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ನೇಪಾಳಕ್ಕೆ ತೆರಳಿರುವುದು ತಿಳಿದುಬಂದಿದೆ. ಇದರಲ್ಲಿ 200 ಮಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ. 800 ಮಂದಿ ಭೂಕಂಪ ಪೀಡಿತ ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಅದರಲ್ಲಿ 300 ಜನರನ್ನು ಸುರಕ್ಷಿತವಾಗಿ ಕರೆತರಲಾಗಿದ್ದು,

ಇನ್ನೂ 500 ಮಂದಿಯ ಪರಿಸ್ಥಿತಿ ಅತಂತ್ರವಾಗಿದೆ. ಅವರನ್ನು ಸುರಕ್ಷಿತವಾಗಿ ಕರೆತರಲು ನಮ್ಮ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ವಿಮಾನದ ಮೂಲಕ ಕರೆತರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಮಾನ ನಿಲ್ದಾಣ ನಿರಾಶ್ರಿತರಿಂದ ಕಿಕ್ಕಿರಿದು ತುಂಬಿದೆ. ಯಾರನ್ನು ಯಾರು ಕರೆತರಬೇಕು, ಯಾವ ಅಧಿಕಾರಿಗಳು ಯಾವ ರಾಜ್ಯದವರನ್ನು ರೆಸ್ಕ್ಯೂ ಮಾಡಬೇಕೆಂಬ ಗೊಂದಲ ನಿರ್ಮಾಣವಾಗಿದೆ. ಹಾಗಾಗಿ ರಸ್ತೆಯ ಮೂಲಕ ಅಲ್ಲಿನ ಪ್ರವಾಸಿಗರನ್ನು ತಾಯ್ನಾಡಿಗೆ ಕರೆತರುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಅದಕ್ಕಾಗಿ ಕರ್ನಾಟಕದಿಂದ ಮತ್ತೆ ಇಬ್ಬರು ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

ಹಿರಿಯ ಅಧಿಕಾರಿ ರಮಣ್‌ದೀಪ್ ಚೌಧರಿ ಲಕ್ನೋಗೆ ತೆರಳಿದ್ದು, ಗೋರಖ್‌ಪುರ ಮೂಲಕ ಸಂತ್ರಸ್ಥರಾಗಿರುವ ಕನ್ನಡಿಗರ ಸಂಪರ್ಕ ಸಾಧಿಸಿ ಮರಳಿ ನಾಡಿಗೆ ಕರೆತರುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಮತ್ತೊಬ್ಬ ಅಧಿಕಾರಿ ಪ್ರಶಾಂತ್‌ಕುಮಾರ್ ವಾರಣಾಸಿಯಲ್ಲಿದ್ದು, ಅಲ್ಲಿಂದ ನಿರಾಶ್ರಿತರಾಗಿರುವ ಕನ್ನಡಿಗರೊಂದಿಗೆ ಸಂಪರ್ಕ ಬೆಳೆಸಿ ಅಲ್ಲಿಗೆ ಕರೆತಂದು ಅಲ್ಲಿಂದ ರೈಲಿನ ಮೂಲಕ ರಾಜ್ಯಕ್ಕೆ ಕಳುಹಿಸಿಕೊಡುವ ಪ್ರಯತ್ನವನ್ನು ನಡೆಸಿದ್ದಾರೆ. ಈಗಾಗಲೇ ಅವರು ಸ್ಥಳದಲ್ಲಿದ್ದು ಎಲ್ಲರನ್ನೂ ವಾಪಸ್ ಕರೆತರುವ ಪ್ರಯತ್ನವನ್ನು ತೀವ್ರಗೊಳಿಸಿದ್ದಾರೆ.
ನಾವು ತವರಿಗೆ ಮರಳುತ್ತೇವೆಯೋ ಇಲ್ಲವೋ ಎಂಬ ಆತಂಕ ತೀವ್ರಗೊಳ್ಳುತ್ತಿದ್ದಂತೆ ಗಾಬರಿಗೊಂಡಿರುವ ಸಂತ್ರಸ್ತರು ವಾಪಸ್ ಬರಲು ನಾ ಮುಂದು, ತಾ ಮುಂದು ಎಂದು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.

ಸಂತ್ರಸ್ತರನ್ನು ವಾಹನಗಳ ಮೂಲಕ ಕರೆತರಲು ಉತ್ತರ ಪ್ರದೇಶದಿಂದ 200 ವಾಹನಗಳನ್ನು ಕಳುಹಿಸಲಾಗಿದೆ. ಸಾಧ್ಯವಾದಷ್ಟು ಸಂತ್ರಸ್ತರನ್ನು ದೇಶಕ್ಕೆ ಕರೆತರುವ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಸಹಾಯಕ್ಕಾಗಿ ಮೊರೆಯಿಡುವವರನ್ನು ಮೊದಲು ಕರೆತರುತ್ತಿದ್ದಾರೆ.  ದಾಖಲೆಗಳನ್ನು ಅಷ್ಟಾಗಿ ಪರಿಗಣಿಸುತ್ತಿಲ್ಲ. ಪ್ರಾಣ ಉಳಿಸುವುದು, ಸುರಕ್ಷಿತ ಸ್ಥಳಗಳಿಗೆ ತಲುಪಿಸುವುದು ಅಧಿಕಾರಿಗಳಿಗೆ ಸವಾಲಾಗಿದೆ.

ತುರ್ತು ನಿರ್ವಹಣಾ ಕೇಂದ್ರ
080-22340676
080-22032582

ರಿತೀಶ್‌ಕುಮಾರ್ ಸಿಂಗ್-ಸರ್ಕಾರದ ಕಾರ್ಯದರ್ಶಿ
22203299
22251958

ಕೆ.ಸರೋಜಮ್ಮ -ಸರ್ಕಾರದ ಉಪಕಾರ್ಯದರ್ಶಿ
22261314
22032426
ಮೊ.ಸಂ.9448351194

ವಿಪತ್ತಿನಲ್ಲಿ ಸಿಲುಕಿರುವ ಕರ್ನಾಟಕ ಜನರ ರಕ್ಷಣೆಗಾಗಿ ನೇಪಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು:
ಪಂಕಜ್‌ಕುಮಾರ್ ಪಾಂಡೆ-ಮೊ.09900095440
ಉಮೇಶ್‌ಕುಮಾರ್-09480800029

ಸುರಕ್ಷಿತವಾಗಿರುವ ಕನ್ನಡಿಗರನ್ನು ಮರಳಿ ರಾಜ್ಯಕ್ಕೆ ಕರೆತರಲು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳು:
ರಮಣ್‌ದೀಪ್ ಚೌಧರಿ – 9780864000
ಪ್ರಶಾಂತ್‌ಕುಮಾರ್-9448024073

-ಕೃಪೆ: ಈ ಸಂಜೆ

Write A Comment