ಕರಾವಳಿ

ಖಾಸಗಿ ಶಾಲೆಗೆ ಗುಡ್ ಬೈ ಹೇಳಿ ಅಮ್ಮ ಓದಿದ ಸಿದ್ದಾಪುರ ಸರಕಾರಿ ಶಾಲೆ ಸೇರಿದ ಮಗಳು ಎಸ್.ಎಸ್.ಎಲ್.ಸಿ ಟಾಪರ್

Pinterest LinkedIn Tumblr

(ವಿಶೇಷ ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಎಲ್.ಕೆ.ಜಿ. ಯಿಂದ 7 ನೇ ತರಗತಿಯವರೆಗೆ ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ವಿದ್ಯಾರ್ಥಿನಿ ಬಳಿಕ ತನ್ನ ಅಮ್ಮ ಓದಿದ ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಗೆ ಸೇರಿದ ವೈಷ್ಣವಿ ಶೆಟ್ಟಿ ಎಸ್.ಎಸ್.ಎಲ್‌.ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ಟಾಪರ್ ಆಗಿದ್ದಾರೆ.

ವೈಷ್ಣವಿ ತಂದೆ ವಸಂತ ಕುಮಾರ್ ಶೆಟ್ಟಿ, ತಾಯಿ ಸುಷ್ಮಾ ವಿ.ಶೆಟ್ಟಿ ಪ್ರೋತ್ಸಾಹ, ಸಿದ್ದಾಪುರ ಸರ್ಕಾರಿ ಶಾಲೆ ಶಿಕ್ಷಕರ ಕಾಳಜಿಯುತ ಶಿಕ್ಷಣಾ ಗುಣಮಟ್ಟ ವೈಷ್ಣವಿಗೆ ಟಾಪರ್ ಆಗಲು ಕಾರಣ.

ವೈಷ್ಣವಿಗೆ ಪಿಯುಸಿಯಲ್ಲಿ ಪಿಸಿಎಂಬಿ ತೆಗೆದುಕೊಂಡು ಮೆಡಿಕಲ್ ಓದುವ ಗುರಿ ಇಟ್ಟುಕೊಂಡಿದ್ದಾರೆ. ಎಲ್.ಕೆ.ಜಿ. ಯಿಂದ ಏಳನೇ ತರಗತಿವರೆಗಿನ
ಪ್ರಾಥಮಿಕ ಶಿಕ್ಷಣವನ್ನು ಶಂಕರನಾರಾಯಣ ಖಾಸಗಿ ಶಾಲೆಯಲ್ಲಿ ಪಡೆದಿದ್ದು ತಾಯಿ ಸಿದ್ದಾಪುರ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಸೇರಲು ಹೇಳಿದ್ದಕ್ಕೆ ಸಿದ್ದಾಪುರ ಸರ್ಕಾರಿ ಪ್ರೌಢ ಶಾಲೆಗೆ ದಾಖಲಾಗಿದ್ದರು.

(ಬೆಂಗಳೂರಿನಲ್ಲಿ ಕುಟುಂಬಿಕರ ಜೊತೆ ವೈಷ್ಣವಿ ಸಂಭ್ರಮ)

ಸದ್ಯ ಬೆಂಗಳೂರಿನಲ್ಲಿನರುವ ಸಂಬಂಧಿಕರ ಮನೆಯಲ್ಲಿರುವ ವೈಷ್ಣವಿ ಅವರು ರಿಸಲ್ಟ್ ನೋಡಿ ಫುಲ್ ಖುಷ್ ಆಗಿದ್ದಾರೆ. ಈ ವೇಳೆ ದೂರವಾಣಿ ಮೂಲಕ ಸಂಭ್ರಮ ಹಂಚಿಕೊಂಡ ಅವರು ಶಾಲೆಯಿಂದ ಮನೆಗೆ ಮರಳಿದ ನಂತರ ಆಯಾದಿನದ ನಿತ್ಯ ಪಠ್ಯ ಚಟುವಟಿಕೆಯನ್ನು ಆವತ್ತೇ ಮುಗಿಸುತ್ತಿದ್ದೆ, ಬೆಳಗ್ಗೆ 5ಕ್ಕೆ ಎದ್ದು ಅರ್ಧ ಗಂಟೆ ಧ್ಯಾನ ಮಾಡಿ, ಓದಲು ಕೂರುತ್ತಿದ್ದೆ. ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗೂ ಸರಿಯಾದ ಉತ್ತರ ಬರೆದಿದ್ದು, ಮೌಲ್ಯಮಾಪನ ಹೇಗೋ ಎನ್ನುವ ಭಯವಿತ್ತು. ನಿರೀಕ್ಷಿತವಾಗಿ 625 ಅಂಕ ಬಂದಿರುವುದು ಖುಷಿ ಕೊಟ್ಟಿದೆ. ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ನನಗೆ ಸಿಕ್ಕ ಉಪನ್ಯಾಸಕರು ಅತ್ಯುತ್ತಮ ಶಿಕ್ಷಕರಾಗಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದಿದ್ದಾರೆ.

Comments are closed.