ಬೆಂಗಳೂರು: ಸೋಮವಾರ ಮಧ್ಯಾಹ್ನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶವನ್ನು ಘೋಷಿಸಲಾಗುತ್ತದೆ.

(ಸಾಂದರ್ಭಿಕ ಚಿತ್ರ)
ನೂತನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ನಾಳೆ (ಆಗಸ್ಟ್ 9) ಸೋಮವಾರ ಮಧ್ಯಾಹ್ನ 3: 30 ಕ್ಕೆ ಹತ್ತನೆ ತರಗತಿ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಲಿದ್ದಾರೆ ಎಂದು ಕರ್ನಾಟಕ ಮಾಧ್ಯಮಿಕ ಶಾಲಾ ಪರೀಕ್ಷಾ ಮಂಡಳಿಯ ಕೆ.ಎಸ್.ಇ.ಇ.ಬಿ ನಿರ್ದೇಶಕಿ ಸುಮಂಗಲಾ ವಿ ಅವರು ಹೇಳಿದ್ದಾರೆ. ನಗರದ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಚೇರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ. ಅನಂತರ ವಿದ್ಯಾರ್ಥಿಗಳಿಗೆ ಮೊಬೈಲ್ ಎಸ್ಎಂಎಸ್ ಮೂಲಕ ಫಲಿತಾಂಶ ತಲುಪಲಿದೆ.
ಫಲಿತಾಂಶವನ್ನು ಅಧಿಕೃತ KSEEB ವೆಬ್ಸೈಟ್ www.sslc.karnataka.gov.in ನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ವಿದ್ಯಾರ್ಥಿಗಳು ಒಟ್ಟು ಶೇ. 35 ಅಥವಾ 600 ರಲ್ಲಿ 210 ಅಂಕಗಳನ್ನು ಪಡೆಯಬೇಕು. ಪಾಸ್ ಸರ್ಟಿಫಿಕೇಟ್ ಪಡೆಯಲು, ಅವರು ಭಾಷಾ ಪರೀಕ್ಷೆಯಲ್ಲಿ ಕನಿಷ್ಠ 70 ಅಂಕಗಳನ್ನು ಪಡೆಯಬೇಕಿದೆ.
Comments are closed.