ಯುವಜನರ ವಿಭಾಗ

ಸೆ#ಕ್ಸ್’ನಲ್ಲಿ ಆಸಕ್ತಿ ಕಡಿಮೆಯಾಗಲು ಕಾರಣವಾಗುವ ಅಂಶಗಳೇನು ಗೊತ್ತೇ…?

Pinterest LinkedIn Tumblr

ಸಂ#ಭೋಗ ಎನ್ನುವುದು ನೈಸರ್ಗಿಕವಾದ ಕ್ರಿಯೆ. ಪ್ರಾಯಕ್ಕೆ ಬಂದ ಪ್ರತಿಯೊಬ್ಬರು ಲೈಂ#ಗಿಕತೆಯನ್ನು ಹೊಂದಲು ಬಯಸುತ್ತಾರೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲು ಬಯಸುತ್ತಾರೆ. ಲೈಂ#ಗಿಕ ಕ್ರಿಯೆಯಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಸಂತೋಷವನ್ನು ಪಡೆದುಕೊಳ್ಳಬೇಕು ಎಂದಾಗ ಮಾನಸಿಕವಾಗಿ ನಿರಾಳತೆ ಹಾಗೂ ಸಂತೋಷವಾಗಿ ಇರಬೇಕು. ಆಗ ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳಲು ಮನಸ್ಸು ಬಯಸುವುದು.

ಲೈಂ#ಗಿಕ ಅಪೇಕ್ಷೆಗಳು ಈಡೇರಲು ಸಂಗಾತಿಯ ಮಾನಸಿಕ ಸ್ಥಿತಿ ಹಾಗೂ ಆಸಕ್ತಿಯು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ವ್ಯಕ್ತಿಯ ಮಾನಸಿಕ ಸ್ಥಿತಿಯು ಲೈಂ#ಗಿಕ ಆಸಕ್ತಿಯನ್ನು ಕೆರಳಿಸುವುದು ಅಥವಾ ಪ್ರಚೋದಿಸುವ ಕೆಲಸ ಮಾಡುತ್ತದೆ. ವ್ಯಕ್ತಿಯಲ್ಲಿ ಭಯ, ದುಃಖ, ಹತಾಶೆ ಅಥವಾ ಯಾವುದೋ ವಿಷಯಗಳ ಬಗ್ಗೆ ಒತ್ತಡವನ್ನು ಅನುಭವಿಸುತ್ತಿರುವಾಗ ಲೈಂ#ಗಿಕ ಬಯಕೆಯಲ್ಲಿ ಕೊರತೆ ಉಂಟಾಗುವುದು.

​ಲೈಂ#ಗಿಕ ಆಸಕ್ತಿ ಹೆಚ್ಚಲು ನಾವು ಇರುವ ವಾತಾವರಣ ಹಾಗೂ ಸನ್ನಿವೇಶಗಳು ಅತ್ಯಗತ್ಯ. ಹೆಚ್ಚು ವಾತ್ಸಲ್ಯ, ಮಾನಸಿಕವಾಗಿ ಭರವಸೆ ನೀಡುವ ಮಾತುಗಳು ಹಾಗೂ ಸನ್ನಿವೇಶ, ಭದ್ರತೆ ಹೊಂದಿರುವ ಮನೋಭಾವ, ಪ್ರೀತಿಯನ್ನು ಬಿಂಬಿಸುವ ಮಧುರ ಸಂಗೀತ ಹಾಗೂ ಸಾಹಿತ್ಯಗಳು ಮನಸ್ಸಿನ ಮೇಲೆ ನೇರವಾಗಿ ಪ್ರಭಾವ ಬೀರುತ್ತವೆ. ಅವು ಮಾನಸಿಕವಾಗಿ ನಿರಾಳತೆ ಹಾಗೂ ಲೈಂ#ಗಿಕ ಆಸಕ್ತಿಯ ಬಗ್ಗೆ ಹೆಚ್ಚಿನ ಪ್ರಚೋದನೆ ನೀಡುವುದು.

ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಹಾಗೂ ಲೈಂ#ಗಿಕ ಕ್ರಿಯೆಯನ್ನು ಸಂತೋಷವಾಗಿ ಕಳೆಯಬೇಕು ಎಂದು ಕೊಂಡಿದ್ದರೆ ಅವರ ಮತ್ತು ನಿಮ್ಮ ಮಾನಸಿಕ ಸ್ಥಿತಿ ಹಿತವಾದ ಅನುಭವಕ್ಕೆ ಒಳಗಾಗುವಂತಹ ವಾತಾವರಣದಲ್ಲಿ ಇರಬೇಕು. ಇಲ್ಲವಾದರೆ ಅಂತಹ ವಾತಾವರಣವನ್ನು ನೀವೇ ಸೃಷ್ಟಿಸಬೇಕು. ಪ್ರೀತಿಯಿಂದ ಕೂಡಿರುವ ಮಾತು ಹಾಗೂ ಹಿತವಾದ ಸಂಗೀತವನ್ನು ಕೇಳುವುದರ ಮೂಲಕ ಲೈಂ#ಗಿಕತೆಗೆ ಪ್ರಚೋದನೆಯನ್ನು ಪಡೆದುಕೊಂಡು, ಸಂತೋಷದ ಜೀವನ ಕಳೆಯುತ್ತಾರೆ.

ಮಾನಸಿಕ ಚಿಂತನೆಗಳನ್ನು ಹೊರತು ಪಡಿಸಿದರೆ ವ್ಯಕ್ತಿಯ ಆರೋಗ್ಯದಲ್ಲಿ ಇರುವ ತೊಂದರೆ ಹಾಗೂ ಹಾರ್ಮೋನ್‍ಗಳ ಕಾರಣದಿಂದಲೂ ಲೈಂ#ಗಿಕ ಬಯಕೆಯಲ್ಲಿ ಆಸಕ್ತಿಯಲ್ಲಿ ಕಳೆದುಕೊಂಡಿರುತ್ತಾರೆ. ಮಾನಸಿಕ ಅಸ್ವಸ್ಥತೆ ಹಾಗೂ ಖಿನ್ನತೆಯ ಮನೋಭಾವವು ಲೈಂ#ಗಿಕ ಕ್ರಿಯೆಯಲ್ಲಿ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಅಂತಹ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂದಾದರೆ ವೈದ್ಯರಲ್ಲಿ ತಪಾಸಣೆಗೆ ಒಳಗಾಗುವುದು ಅಗತ್ಯ.

ದೈಹಿಕವಾಗಿ ಸದೃಢವಾಗಿದ್ದರೆ ಲೈಂ#ಗಿಕ ಆಸಕ್ತಿಯು ಪ್ರಚೋದನೆ ಪಡೆದುಕೊಳ್ಳುವುದು. ಹಾಗಾಗಿ ಧ್ಯಾನ, ಯೋಗ, ಸರಳ ತಾಲೀಮು ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಆಗ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಉತ್ತಮ ಗೊಳಿಸಿದರೆ ಲೈಂ#ಗಿಕ ಕ್ರಿಯೆ ಮತ್ತು ಆಸಕ್ತಿಯು ನೈಸರ್ಗಿಕವಾಗಿಯೇ ಪ್ರಚೋದನೆ ಪಡೆದುಕೊಳ್ಳುವುದು. ಸಮಸ್ಯೆಗಳನ್ನು ನೈಸರ್ಗಿಕವಾಗಿಯೇ ನಿಯಂತ್ರಣದಲ್ಲಿ ಇಡಬಹುದು.

Comments are closed.