ಅಂತರಾಷ್ಟ್ರೀಯ

ಇಸ್ರೇಲ್​ನಲ್ಲಿ ಫೈಜರ್ ಲಸಿಕೆ ಪಡೆದ ನಂತರವೂ 12,400 ಜನರಿಗೆ ಕೊರೊನಾ !

Pinterest LinkedIn Tumblr

ಇಸ್ರೇಲ್​: ಇಸ್ರೇಲ್​ನಲ್ಲಿ ಫೈಜರ್ ಲಸಿಕೆ ಪಡೆದ ನಂತರವೂ 12,400 ಜನರಿಗೆ ಕೊರೊನಾ ವೈರಸ್​ ಸೋಂಕು ಕಾಣಿಸಿಕೊಂಡಿದೆ ಎಂದು ಸರ್ಕಾರ ಹೇಳಿದೆ.

ವಿಚಿತ್ರ ಎಂದರೆ, 12,400 ಜನರ ಪೈಕಿ 69 ಮಂದಿ ಎರಡನೇ ಬಾರಿಗೆ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು.

ಇಸ್ರೇಲ್​ ಆರೋಗ್ಯ ಸಚಿವಾಲಯ ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿದೆ. ಇಸ್ರೇಲ್​ನಲ್ಲಿ ಈವರೆಗೆ ಒಟ್ಟು 1,89,000 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಇದರಲ್ಲಿ ಶೇ 6.6 ಜನರಿಗೆ ಕೊರೊನಾ ಲಸಿಕೆ ನೀಡಲಾಗಿತ್ತು.

ಕೊರೊನಾ ಲಸಿಕೆ ನಾವು ಅಂದುಕೊಂಡಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ಡಿಸೆಂಬರ್​ 19ರಿಂದ ಇಸ್ರೇಲ್​ ಕೊರೊನಾ ಲಸಿಕೆ ನೀಡಲು ಆರಂಭಿಸಿತ್ತು. ವಯಸ್ಸಾದವರಿಗೆ ಮೊದಲ ಆದ್ಯತೆ ನೀಡುವ ಗುರಿ ಸರ್ಕಾರದ್ದಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 25ರಷ್ಟು ಅಂದರೆ ಕಾಲು ಭಾಗದಷ್ಟು ಜನರಿಗೆ ಔಷಧ ನೀಡಲಾಗಿದೆ. ಈ ಪೈಕಿ ಶೇ 3.5 ಜನರಿಗೆ ಎರಡನೇ ಬಾರಿ ಕೊರೊನಾ ಔಷಧ ನೀಡಲಾಗಿದೆ.

ದೇಶದಲ್ಲಿ ಮೂರನೇ ಬಾರಿಗೆ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಆದಾಗ್ಯೂ ಕೊರೊನಾ ವೈರಸ್​ ಪ್ರಕರಣ ಹೆಚ್ಚುತ್ತಲೇ ಇದೆ. ಈವರೆಗೆ ಕೊರೊನಾದಿಂದ 4,005 ಜನರು ಮೃತಪಟ್ಟಿದ್ದಾರೆ.

Comments are closed.