ಕರಾವಳಿ

SSLCಯಲ್ಲಿ 624 ಅಂಕ ಪಡೆದ ಉಪ್ಪುಂದದ ಸುರಭಿ ಎಸ್. ಶೆಟ್ಟಿ ಉಡುಪಿಗೆ ಟಾಪರ್, ರಾಜ್ಯಕ್ಕೆ ಸೆಕೆಂಡ್ (Video)

Pinterest LinkedIn Tumblr

ಕುಂದಾಪುರ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕಂಬದಕೋಣೆ ನಾಗೂರಿನ ಸಂದೀಪನ್ ಪ್ರೌಢಶಾಲೆಯ ವಿದ್ಯಾರ್ಥಿನಿ ಸುರಭಿ ಎಸ್.ಶೆಟ್ಟಿ 624 ಅಂಕ ಪಡೆದು ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.

 

ಉಪ್ಪುಂದ ಚಮ್ಟೆಹರ್ಲು ನಿವಾಸಿ ಉದ್ಯಮಿಯಾದ ಸುರೇಶ ಎಚ್. ಶೆಟ್ಟಿ ಮತ್ತು ಸೀಮಾ ಸುರೇಶ್ ಶೆಟ್ಟಿ ದಂಪತಿಗಳ ಪುತ್ರಿಯಾಗಿರುವ ಸುರಭಿ ಎಸ್.ಶೆಟ್ಟಿ ಎಲ್.ಕೆ.ಜಿ.ಯಿಂದಲೂ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದವರು. 624 ಅಂಕ ಪಡೆದ ಬಗ್ಗೆ ಪ್ರತಿಕ್ರಿಯಿಸಿದ ಸುರಭಿ ಶೆಟ್ಟಿ, ಪ್ರತಿದಿನ ಆರರಿಂದ ಎಂಟು ಗಂಟೆ ಅಭ್ಯಾಸ ಮಾಡುತ್ತಿದ್ದೆ. ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪೋಷಕರು ಹಾಗೂ ಸಹೋದರಿ, ಸ್ನೇಹಿತರು ಉತ್ತಮ ಪ್ರೋತ್ಸಾಹ ನೀಡಿದ್ದಾರೆ. ಕೊರೋನಾ ಭಯವಿದ್ದರೂ ಕೂಡ ನನಗೆ ಎಲ್ಲಾ ಪರೀಕ್ಷೆಗಳು ಸುಲಭವಾಗಿತ್ತು. ತಾನು 625 ಅಂಕಗಳ ನಿರೀಕ್ಷೆಯಲ್ಲಿದ್ದೆ. ಆದರೆ ಸಮಾಜ ವಿಜ್ಞಾನದಲ್ಲಿ ಒಂದು ಅಂಕ ಕಡಿಮೆಯಾಗಿದೆ. ಮರು ಮೌಲ್ಯಮಾಪನಕ್ಕೆ ಹಾಕಲಿದ್ದೇನೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಶಿಕ್ಷಣ ಪಡೆದು ವೈದ್ಯಕೀಯ ಶಿಕ್ಷಣ ಪಡೆಯುತ್ತೇನೆ ಎಂದಿದ್ದಾರೆ.

ಮನೆಮಗಳ ಸಾಧನೆಯಿಂದಾಗಿ ಅವರ ನಿವಾಸದಲ್ಲಿ ಸಂಭ್ರಮದ ವಾತಾವರಣವಿದ್ದು ಮಗಳಿಗೆ ಸಿಹಿ ತಿನಿಸಿ ಪೋಷಕರು ಖುಷಿಪಟ್ಟರು.

(ವರದಿ- ಯೋಗೀಶ್ ಕುಂಭಾಸಿ)

Comments are closed.