ಕರಾವಳಿ

ಪ್ರವಾಹ ಪೀಡಿತ ಪ್ರದೇಶಕ್ಕೆ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಭೇಟಿ

Pinterest LinkedIn Tumblr

ಕುಂದಾಪುರ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನಾಡಾ ನಾವುಂದ ಗ್ರಾಮ ಪಂಚಾಯಿತಿ ಜಲಸ್ಥಂಭನವಾಗಿದ್ದು, ಸೋಮವಾರ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಭೇಟಿ ನೀಡಿ ಸಂತ್ರಸ್ಥರಿಗೆ ಧೈರ್ಯ ಹೇಳಿದರು. ಪಡುಕೋಣೆ, ಗರಡಿಬೆಟ್ಟು, ಚಿಕ್ಕಳ್ಳಿ, ನಾಡಾ ಕೋಣ್ಕಿ, ಬಡಾಕೆರೆ, ಕಿರಿಮಂಜೇಶ್ವರ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿ, ಬೈಂದೂರು ತಹಶಿಲ್ದಾರ್ ಬಿ.ಪಿ. ಪೂಜಾರಿ ಅವರಿಂದ ಮಾಹಿತಿ ಪಡೆದರು.

ಸುಕುಮಾರ್ ಶೆಟ್ಟಿ ಮಾಧ್ಯಮದ ಜೊತೆ ಮಾತನಾಡಿ, ಹೊಳೆ ಹೂಳು ಎತ್ತದಿರುವ ಕಾರಣಕ್ಕೆ ಪ್ರತಿ ವರ್ಷ ಈ ರೀತಿ ನೆರೆ ಸಮಸ್ಯೆ ಉಂಟಾಗುತ್ತದೆ. ಈ ಭಾಗದಲ್ಲಿ ಪುನರ್ವಸತಿ ಕೇಂದ್ರ ತೆರಯಲು ಸಚಿವರ ಬಳಿ ಮಾತನಾಡಲಾಗುತ್ತದೆ. ಅಲ್ಲದೆ ಹೂಳೆತ್ತುವ ಪ್ರಸ್ತಾವನೆಯನ್ನು ನೀಡಲಾಗುತ್ತದೆ. ನೆರೆ ಸಮಸ್ಯೆ ಹೆಚ್ಚಿರುವಡೆ ದೋಣಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ನೆರೆ ಪ್ರದೇಶಕ್ಕೆ ತುರ್ತು ಎರಡು ದೋಣಿ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ತಗ್ಗು ಪ್ರದೇಶದಲ್ಲಿ ವಾಸ ಮಾಡುತ್ತಿರುವ ನಾಗರಿಕರಿಗೆ ನೆರೆಯಿಂದ ಮುಕ್ತ ಕೊಡಿಸುವ ಸಲುವಾಗಿ ಎತ್ತರ ಪ್ರದೇಶದಲ್ಲಿ ಸರ್ಕಾರಿ ಜಾಗ ಗುರುತಿಸಿ, ಸೈಟ್ ನೀಡುವ ಪರಿಹಾರ ನೀಡುವ ಪ್ರಯತ್ನ ಕೂಡಾ ಸಾಗಿದ್ದು, ನೆರೆ ಪ್ರದೇಶದ ಜನರಿಗೆ ಮಳೆಗಾಲದಲ್ಲಿ ನೆರೆ ಬಂದಾಗ ಬೇರೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಸೆಲ್ಟರ್ ನಿರ್ಮಾಣ ಮಾಡಲಾಗುತ್ತದೆ. ಸರ್ಕಾರಿ ಜಾಗ ಹಾಗೂ ಹೊಳೆ ಹೂಳೆತ್ತುವ ಸಂಬಂಧ ತಕ್ಷಣ ವರದಿ ನೀಡುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.

ಬಿಜೆಪಿ ಮುಖಂಡರಾದ ಅಶೋಕ್ ಕುಮಾರ್ ಶೆಟ್ಟಿ, ಗೋಪಾಲ ನಾಡ, ನಾಗರಾಜ ಶೆಟ್ಟಿ ಹರ್ಕೂರು, ಚಂದ್ರಯ್ಯ ಆಚಾರ್ ಕಳಿ, ಶರತ್ ಕುಮಾರ್ ಶೆಟ್ಟಿ, ತಹಸೀಲ್ದಾರ್ ಬಿ.ಪಿ.ಪೂಜಾರ್, ಗಂಗೊಳ್ಳಿ ಪಿಎಸ್ಸೈ ಭೀಮಾಶಂಕರ್ ಮುಂತಾದವರು ಇದ್ದರು.

Comments are closed.