ಕರಾವಳಿ

ಬ್ಲಡ್ ಕ್ಯಾನ್ಸರ್‌ ಯುವಕನ ಚಿಕಿತ್ಸಾ ವೆಚ್ಚಕ್ಕೆ #Save #Sujan ಎಂದು ನೆಟ್ಟಿಗರ ಅಭಿಯಾನ

Pinterest LinkedIn Tumblr

ಕುಂದಾಪುರ: ಫೇಸ್ಬುಕ್ ಹಾಗೂ ವಾಟ್ಸಾಪ್ ಮೊದಲಾದ ಸಾಮಾಜಿಕ ಜಾಲತಾಣದಲ್ಲಿ ಬುಧವಾರದಿಂದ ಒಂದಷ್ಟು ಫೋಟೋಗಳು ವೈರಲ್ ಆಗುತ್ತಿದೆ. ಆ ಫೋಟೋಗಳನ್ನು ಕಂಡರೆ ಕಲ್ಲು ಹೃದಯವೂ ಮಿಡಿಯದೇ ಇರದು. ತಾಯಿ, ತಂದೆ ಕುಟುಂಬದವರ ಜೊತೆ ಖುಷಿ-ಖುಷಿಯಾಗಿರಬೇಕಿದ್ದ ಆ ಯುವಕನೀಗ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಮನೆ ಮಗನ ಪರಿಸ್ಥಿತಿ ಕಂಡು ಹೆತ್ತವರ ಕಣ್ಣು ಕಂಬನಿ ಮಿಡಿಯುತ್ತಿದೆ.

 

(ಫೋಟೋ ಕ್ರಪೆ: ವಾಟ್ಸಾಪ್)

ಬೈಂದೂರು ತಾಲೂಕಿನ ಯಡ್ತರೆ ಕಳವಾಡಿಯ ನಿವಾಸಿ ಸಂಜೀವ ದೇವಾಡಿಗರ ಪುತ್ರ ಸುಜನ್ ದೇವಾಡಿಗ ಇವರು ಕಳೆದ ಕೆಲ ಸಮಯಗಳಿಂದ ರಕ್ತದ ಕ್ಯಾನ್ಸರ್ ನಿಂದ ಬರಳುತ್ತಿದ್ದು,ಈ ಬಗ್ಗೆ ಸೂಕ್ತವಾದ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಅಗತ್ಯವಿದೆ. ಈಗಾಗಾಲೇ ಕಿಮೋಥೆರಫಿ ಸೇರಿದಂತೆ ವಿವಿಧ ರೀತಿಯ ಚಿಕಿತ್ಸೆಗಾಗಿ ಈ ಬಡ ಕುಟುಂಬ ಲಕ್ಷಾಂತರ ರೂ. ವೆಚ್ಚ ಭರಿಸಿದೆ.

ಬೆಂಗಳೂರಿಗೆ ವಿದ್ಯಾಭ್ಯಾಸಕ್ಕೆ ತೆರಳಿದ ಸುಜನ್ ಗೆ ಬ್ಲಡ್ ಕ್ಯಾನ್ಸರ್ ಇರುವುದು ತಿಳಿದುಬಂದಿತ್ತು. ಸಂಪೂರ್ಣ ಚೇತರಿಕೆಗೆ ಇನ್ನೂ ಮೂರರಿಂದ ನಾಲ್ಕು ತಿಂಗಳು ಬೇಕಿದ್ದು ಶೀಘ್ರವೇ (15 ದಿನಗಳೊಳಗೆ) ಅಸ್ತಿ ಮಜ್ಜೆ ಕಸಿ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಆಪರೇಷನ್ ವೆಚ್ಚ 17 ಲಕ್ಷ ಆಗಿದ್ದು, ಇನ್ನೂ ಸಂಪೂರ್ಣ ಚೇತರಿಕೆಗೆ ಮತ್ತಷ್ಟು ಹಣ ಬೇಕಾಗಿದೆ. ಕಳೆದ ವರ್ಷ ಸುಜನ್ ತಂದೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಹಾಸಿಗೆ ಹಿಡಿದಿದ್ದು ಅವರ ಸೇವೆಯನ್ನು ಸುಜನ್ ಮಾಡಿದ್ದ.

ಸುಜನ್ ಬಗ್ಗೆ ಒಂದಿಷ್ಟು…
ಸುಜನ್ ಯಾರನ್ನೂ ಅವಲಂಭಿಸಿದೇ ತನ್ನ ಕೈಯಲ್ಲಾದ ಉಪಕಾರ ಮಾಡುವ ಸರಳ ಹಾಗೂ ಪರೋಪಕಾರಿ ಹುಡುಗ. ಕಾಲೇಜಿಗೆ ಸೇರುವ ಮೊದಲು ಆತ ಮೊಬೈಲ್ ಫೋನ್ ಖರೀದಿಸಲು ಬಯಸಿದ್ದ. ಆದರೆ ಕೊಡಿಸಲು ತಂದೆ ಬಳಿ ಬಳಿ ಹಣವಿರಲಿಲ್ಲ ಎಂಬುದನ್ನು ತಿಳಿದು ಚಿತ್ರಕಲೆ ಕೆಲಸವನ್ನು ಕೈಗೆತ್ತಿಕೊಂಡು ಅದರಿಂದ ಬಂದ ಹಣದಿಂದ ಸ್ವತಃ ಫೋನ್ ಖರೀದಿಸಿದ್ದ. ಏನು ಉಳಿದಿದ್ದರೂ ಅವನು ನನಗೆ ಕೊಟ್ಟನು. ಸುಜನ್ ಯಾವಾಗಲೂ ಈ ರೀತಿ ಇದ್ದಾನೆ. ಅವನು ಕೆಲಸ ಪಡೆಯಲು ಬಯಸುತ್ತಾನೆ, ಅವನು ಉತ್ತಮ ಜೀವನವನ್ನು ಹೊಂದಬೇಕೆಂದು ಬಯಸುತ್ತಾನೆ… ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಹೋಗುವ ಮೊದಲು ‘ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ, ಅಪ್ಪ’ ಎಂದು ಹೇಳಿದ್ದ ಎಂದು ಭಾವುಕರಾಗಿ ತಂದೆ-ತಾಯಿ ಹೇಳುತ್ತಾರೆ.

#Save #Sujan ಹೆಸರಿನಲ್ಲಿ ಸುಜನ್ ಅವರ ಸ್ನೇಹಿತರು ಹಾಗೂ ಬೈಂದೂರಿನ ಬಹಳಷ್ಟು ಜನರು ಚಿಕಿತ್ಸೆ ವೆಚ್ಚಕ್ಕೆ ದಾನಿಗಳ ಸಹಕಾರವನ್ನು ಸೋಶಿಯಲ್ ಮೆಡಿಯಾ ಮೂಲಕ ಕೇಳುತ್ತಿದ್ದಾರೆ.

ಕಳಿಸಬೇಕಾದ ಖಾತೆ ವಿವರ-
Name (ಹೆಸರು) : Sujan S Devadiga (ಸುಜನ್ ಎಸ್ ದೇವಾಡಿಗ)
Account number (ಖಾತೆ ಸಂಖ್ಯೆ): 520101261710699
Ifsc (ಐ.ಎಫ್.ಎಸ್.ಸಿ ಕೋಡ್) : CORP0001973
Corporation Bank Byndur Branc (ಕಾರ್ಪೋರೇಶನ್ ಬ್ಯಾಂಕ್ ಬೈಂದೂರು ಶಾಖೆ)

(ವರದಿ- ಯೋಗೀಶ್ ಕುಂಭಾಸಿ)

Comments are closed.