ರಾಷ್ಟ್ರೀಯ

ಸ್ಮಾರ್ಟ್‌ಫೋನ್ ಆಧಾರಿತ “ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಸಿಸ್ಟಂ” ಶೀಘ್ರದಲ್ಲೇ ಆರಂಭ.

Pinterest LinkedIn Tumblr

ಮೈಕ್ರೋಸಾಫ್ಟ್ ರಿಸರ್ಚ್ ಭಾರತದಲ್ಲಿ ಡ್ರೈವರ್ ಲೈಸೆನ್ಸ್ ಟೆಸ್ಟುಗಳನ್ನು ಆಟೋಮ್ಯಾಟಿಕ್‍‍ಗೊಳಿಸುವ ಹಾರ್ನೆಸಿಂಗ್ ಆಟೋಮೊಬೈಲ್ಸ್ ಫಾರ್ ಸೇಫ್ಟಿ (ಹೆಚ್‍ಎ‍ಎಂ‍‍ಎಸ್) ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಿದೆ.

ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಿಸ್ಟಂ ಲೈಸೆನ್ಸ್ ಅನ್ನು ನೀಡುವ ಮೊದಲು ಚಾಲಕನ ಸಾಮರ್ಥ್ಯದ ಬಗ್ಗೆ ವಿಶ್ಲೇಷಣೆಯನ್ನು ಮಾಡುತ್ತದೆ. ಉತ್ತರಾಖಂಡದಲ್ಲಿರುವ ಡೆಹ್ರಾಡೂನ್ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ಸ್ಮಾರ್ಟ್‌ಫೋನ್ ಆಧಾರಿತ ಡ್ರೈವಿಂಗ್ ಟೆಸ್ಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಈ ಸಿಸ್ಟಂ ಅನ್ನು ದೇಶಾದ್ಯಂತ ಹಾಗೂ ಜಾಗತಿಕವಾಗಿ ಅಳವಡಿಸಿಕೊಳ್ಳ ಬಹುದೆಂದು ಕಂಪನಿ ತಿಳಿಸಿದೆ. ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ವೆಂಕಟ್ ಪದ್ಮನಾಭನ್‍‍ರವರು ಮಾತನಾಡಿ, ಸಾಂಪ್ರದಾಯಿಕ ಚಾಲಕ ಪರವಾನಗಿ ಪರೀಕ್ಷೆಯಲ್ಲಿರುವ ಮುಖ್ಯ ಸವಾಲೆಂದರೆ ಅಭ್ಯರ್ಥಿಗಳನ್ನು ಪರಿಣಾಮಕಾರಿಯಾಗಿ ಮೌಲ್ಯಮಾಪನ ಮಾಡುವುದು ಎಂದು ಹೇಳಿದರು.

ಅಂದ ಹಾಗೆ ಪದ್ಮನಾಭನ್‍‍ರವರು ಈ ಹೆಚ್‍ಎ‍ಎಂ‍‍ಎಸ್ ಯೋಜನೆಯನ್ನು 2016ರಲ್ಲಿ ಆರಂಭಿಸಿದರು. ಮೈಕ್ರೋಸಾಫ್ಟ್ ಹೆಚ್‍ಎ‍ಎಂ‍‍ಎಸ್ ತಂತ್ರಜ್ಞಾನವನ್ನು ಬಳಸುವ ಈ ಟೆಸ್ಟ್ ಮೌಲ್ಯಮಾಪಕರ ಮೇಲಿನ ಹೊರೆಯನ್ನು ನಿವಾರಿಸುವುದರ ಜೊತೆಗೆ, ಚಾಲಕರ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿಸುತ್ತದೆ.

ಹೆಚ್‍ಎ‍ಎಂ‍‍ಎಸ್ ಟೆಕ್ನಾಲಜಿಯು ಸ್ಮಾರ್ಟ್ ಫೋನಿನ ಮುಂಭಾಗ ಹಾಗೂ ಹಿಂಭಾಗದ ಕ್ಯಾಮರಾ ಹಾಗೂ ಇತರ ಸೆನ್ಸಾರ್‍‍ಗಳನ್ನು ಬಳಸಿ ಚಾಲಕನ ಚಾಲನಾ ಪ್ರತಿಕ್ರಿಯೆಯನ್ನು ಗಮನಿಸಲಿದೆ. ಅಂದರೆ ಮುಂದಿರುವ ವಾಹನವು ಎಷ್ಟು ದೂರದಲ್ಲಿದೆ ಎಂಬುದನ್ನು ಗಮನಿಸಲಿದೆ.

ಈ ಸಾಫ್ಟ್ ವೇರ್ ಸುಧಾರಿತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಪರಿಣಾಮಕಾರಿಯಾದ ಕಾರ್ಯಾಚರಣೆಗೆ ಬಳಸುತ್ತದೆ. ಮೈಕ್ರೋಸಾಫ್ಟ್ ನ ಹೆಚ್‍ಎ‍ಎಂ‍‍ಎಸ್ ಟೆಕ್ನಾಲಜಿಯು ಟೆಸ್ಟ್ ನಡೆಸುವ ಸಮಯದಲ್ಲಿ ವಾಹನಗಳ ಪಥವನ್ನು ಟ್ರ್ಯಾಕಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಟ್ರ್ಯಾಕಿಂಗ್‍‍ನಿಂದಾಗಿ ಟೆಸ್ಟ್ ಮಧ್ಯದಲ್ಲಿ ಅನುಮತಿಸಿದ್ದಕ್ಕಿಂತ ಹೆಚ್ಚಿನ ಅವಧಿಯವರೆಗೆ ಚಾಲಕನು ನಿಲ್ಲಿಸಿದ್ದನೇ ಅಥವಾ ವಾಹನವನ್ನು ಹೆಚ್ಚು ಬಾರಿ ಮುಂದಕ್ಕೆ ಹಾಗೂ ಹಿಂದಕ್ಕೆ ತಿರುಗಿಸುವ ಮೂಲಕ ಸರಿಪಡಿಸಲು ಪ್ರಯತ್ನಿಸಲಾಗಿದೆಯೆ ಎಂಬುದನ್ನು ಹೆಚ್‍ಎ‍ಎಂ‍‍ಎಸ್ ನಿರ್ಧರಿಸುತ್ತದೆ.

ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಹಿರಿಯ ಸಂಶೋಧಕರಾದ ಅಕ್ಷಯ್ ನಂಬಿರವರು ಮಾತನಾಡಿ, ಸರಾಸರಿ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರತಿದಿನ ಡೆಹ್ರಾಡೂನ್‍‍ನಲ್ಲಿರುವ ಆರ್.ಟಿ.ಓನಲ್ಲಿ ಹೆಚ್‍ಎ‍ಎಂ‍‍ಎಸ್ ಹೊಂದಿರುವ ಆಟೋಮ್ಯಾಟೆಡ್ ಲೈಸೆನ್ಸ್ ಟೆಸ್ಟ್ ತೆಗೆದುಕೊಳ್ಳಬಹುದು.

ಈ ಟೆಸ್ಟ್ ಕಠಿಣವಾಗಿರುವ ಕಾರಣಕ್ಕೆ ಟೆಸ್ಟ್ ತೆಗೆದುಕೊಳ್ಳುವವರಲ್ಲಿ ಕೇವಲ 50%ನಷ್ಟು ಜನರು ಮಾತ್ರ ಉತ್ತೀರ್ಣರಾಗುತ್ತಿದ್ದಾರೆ. ಈ ಮೂಲಕ ಅರ್ಹ ಚಾಲಕರಿಗೆ ಮಾತ್ರ ಚಾಲನಾ ಪರವಾನಗಿ ನೀಡಲಾಗುತ್ತದೆ ಎಂದು ಹೇಳಿದರು.

ಡ್ರೈವರ್ ಲೈಸೆನ್ಸ್ ಟೆಸ್ಟ್ ಭಾರತದಲ್ಲಿರುವ ಒಂದು ದೊಡ್ಡ ಸಮಸ್ಯೆಯಾಗಿದೆ. ಸೇವ್ ಲೈಫ್ ಫೌಂಡೇಶನ್ ಭಾರತದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ 59% ಚಾಲಕರು ಟೆಸ್ಟ್ ಎದುರಿಸದೇ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾರೆ.

Comments are closed.