ಯುವಜನರ ವಿಭಾಗ

ಅತಿಯಾದ ಸೆಕ್ಸ್ ದೇಹಕ್ಕೆ ಒಳ್ಳೆಯದಲ್ಲ ಎಂಬ ನಂಬಿಕೆ ಎಷ್ಟು ಸರಿ ?

Pinterest LinkedIn Tumblr

ಬೆಂಗಳೂರು: ಅತಿಯಾದರೆ ಯಾವುದೂ ಒಳ್ಳೆಯದಲ್ಲ ಎಂಬ ಮಾತಿದೆ. ಅದೇ ರೀತಿ ಅತಿಯಾದ ಸೆಕ್ಸ್ ದೇಹಕ್ಕೆ ಒಳ್ಳೆಯದಲ್ಲ ಎಂಬ ನಂಬಿಕೆಯಿದೆ. ಇದು ಎಷ್ಟು ಸರಿ?

ವಾರಕ್ಕೆ ಒಮ್ಮೆ ಸೆಕ್ಸ್ ಓಕೆ. ಆದರೆ ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಪುರುಷರಲ್ಲಿ ವೀರ್ಯಾಣು ನಷ್ಟವಾಗಿ ಪುರುಷತ್ವ ಕಳೆದುಕೊಳ್ಳುತ್ತಾರೆ ಎಂಬ ಕಲ್ಪನೆ ನಮ್ಮಲ್ಲಿದೆ. ಆದರೆ ಇದು ಸಂಪೂರ್ಣ ತಪ್ಪು.

ನಿಜ ಹೇಳಬೇಕೆಂದರೆ ಅಪರೂಪಕ್ಕೊಮ್ಮೆ ಸೆಕ್ಸ್ ಮಾಡುವುದರಿಂದ ಪುರುಷರಲ್ಲಿ ಫಲವಂತಿಕೆ ಕಳೆದುಕೊಳ್ಳು ಅಪಾಯ ಹೆಚ್ಚು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ದೇಹದೊಳಗೆ ತುಂಬಾ ಸಮಯದವರೆಗೆ ವೀರ್ಯಾಣು ಸಂಗ್ರಹವಿರುವುದರಿಂದ ಡಿಎನ್ ಎ ಮೇಲೆ ಪರಿಣಾಮ ಬೀರುತ್ತದೆ.

ಅಷ್ಟೇ ಅಲ್ಲ, ದೇಹದಲ್ಲಿ ವೀರ್ಯಾಣು ಉತ್ಪತ್ತಿಯಾಗಲು ಬೇಕಿರುವುದು 24-36 ಗಂಟೆಗಳು. ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಹೊಸ ವೀರ್ಯಾಣುಗಳು ಉತ್ಪತ್ತಿಯಾಗಿ ಫಲವಂತಿಕೆಯ ವೀರ್ಯಾಣು ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

Comments are closed.