ಯುವಜನರ ವಿಭಾಗ

ಸೆಕ್ಸ್ ಬಗ್ಗೆ ಇರುವ ಹಲವು ತಪ್ಪು ಕಲ್ಪನೆಗಳಿಗೆ ಇಲ್ಲಿದೆ ಉತ್ತರ ! ಲೈಂಗಿಕ ಜೀವನ ಸುಖವಾಗಿರಲು ಇಲ್ಲಿದೆ ಟಿಪ್ಸ್….

Pinterest LinkedIn Tumblr

ಲೈಂಗಿಕ ಜೀವನ ಸುಖವಾಗಿರಬೇಕು ಎಂದು ಎಲ್ಲರೂ ಅಪೇಕ್ಷೆ ಪಡುತ್ತಾರೆ. ಇದರ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದಿದ್ದರೆ ಆರಂಭದಲ್ಲೇ ದಾಂಪತ್ಯ ಜೀವನ ಹಳಿ ತಪ್ಪಬಹುದು. ಅನೇಕರಲ್ಲಿ ಸೆಕ್ಸ್​ ಕುರಿತಾಗಿ ಹಲವಾರು ರೀತಿಯ ಗೊಂದಲಗಳಿರುತ್ತವೆ. ಆದರೆ ಮಡಿವಂತಿಕೆಯು ಇಂತಹ ಪ್ರಶ್ನೆಗಳನ್ನು ಕಟ್ಟಿ ಹಾಕಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಮುಖ್ಯವಾಗಿ ಬ್ಯಾಚುಲರ್ಸ್​ಗಳಿಗೆ ಲೈಂಗಿಕ ಕ್ರಿಯೆಯ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ಇಂತಹ ಸಂಶಯಗಳಿಗೆ ಇಲ್ಲಿ ಉತ್ತರ ನೀಡಲಾಗಿದ್ದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವವರು ಮತ್ತು ಇದರ ಬಗ್ಗೆ ಹೆಚ್ಚಿನ ಶಿಕ್ಷಣದ ಬಗ್ಗೆ ಅಗತ್ಯತೆ ಇರುವವರು ಈ ಅಂಶಗಳನ್ನು ಪಾಲಿಸಿ ನಿಮ್ಮ ಲೈಂಗಿಕ ಜೀವನ ಆರೋಗ್ಯಕರವಾಗಿಸಿಕೊಳ್ಳಬಹುದು.

ನಿಮಿರುವಿಕೆ:
ಲೈಂಗಿಕ ಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುವುದು ನಿಮಿರುವಿಕೆ. ಸಾಮಾನ್ಯವಾಗಿ ಆರೋಗ್ಯವಂತನ ನಿಮಿರುವಿಕೆಯು 3-8 ನಿಮಿಷಗಳವರೆಗೆ ಮಾತ್ರ ಇರುತ್ತದೆ ಎನ್ನುತ್ತಾರೆ ಲೈಂಗಿಕ ತಜ್ಞರು. ಆದರೆ ಪೋರ್ನ್​​ ವಿಡಿಯೋಗಳಲ್ಲಿ ಹಲವು ನಿಮಿಷಗಳ ಕಾಲ ಸಮ್ಮಿಲನದಲ್ಲಿ ತೊಡಗಿಸಿಕೊಂಡಿರುವುದನ್ನು ತೋರಿಸುತ್ತಾರೆ. ಇಂತಹ ಪ್ರಯತ್ನಗಳು ನಿಜ ಜೀವನದಲ್ಲಿ ನಡೆಯುವುದಿಲ್ಲ. ಏಕೆಂದರೆ ಇಂತಹ ಸೆಕ್ಸ್​ ವಿಡಿಯೋಗಳನ್ನು ಹಲವು ದಿನಗಳನ್ನು ಚಿತ್ರೀಕರಿಸಲಾಗಿರುತ್ತದೆ. ಅಥವಾ ವಯಾಗ್ರದಂತಹ ಅಡ್ಡ ಪರಿಣಾಮ ಬೀರುವ ಮಾತ್ರೆಗಳನ್ನು ಸೇವಿಸಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿರುತ್ತಾರೆ. ಹಾಗಾಗಿ ಭಾರತೀಯನೊಬ್ಬ ಸುಖದ ಸುಪ್ಪೊತ್ತಿಗೆಯಲ್ಲಿ ಮಿಂದರೆ 3-8 ನಿಮಿಷಗಳಲ್ಲಿ ಸ್ಖಲನ ಉಂಟಾಗುತ್ತದೆ ಎಂಬುದು ನೆನಪಿರಲಿ.

ರೋಮ್ಯಾನ್ಸ್:
ಸೆಕ್ಸ್ ಎಂಬುದು ಕೇವಲ ಪುರುಷಾಂಗದ ಸುಖವಲ್ಲ. ಲೈಂಗಿಕ ಕ್ರಿಯೆಯಲ್ಲಿ ಪುರುಷರಿಗೆ ಬೇಗನೆ ಸುಖ ಲಭಿಸುತ್ತದೆ. ಅದೇ ಮಹಿಳೆಯರು ಸಂತೃಪ್ತಿ ಹೊಂದಬೇಕಿದ್ದರೆ ಕೆಲ ಸಮಯ ತೆಗೆದುಕೊಳ್ಳುತ್ತದೆ. ಮಹಿಳೆಯರು ಸುಖದ ಪರಾಕಾಷ್ಠೆ ತಲುಪಿದರೆ ಮಾತ್ರ ಸಮ್ಮಿಲನದ ಅನುಭವವನ್ನು ಎಂಜಾಯ್ ಮಾಡುತ್ತಾರೆ. ಹೀಗಾಗಿ ಲೈಂಗಿಕ ಬಂಧದಲ್ಲಿ ತೊಡಗುವ ಮುನ್ನ ಹೆಚ್ಚು ರೋಮ್ಯಾನ್ಸ್ ಮಾಡಿ. ಮುಖ್ಯವಾಗಿ ನಿಮ್ಮ ಸಂಗಾತಿಯ ದೇಹ ಭಾಗವನ್ನು ಚುಂಬಿಸಿ. ಇದರಿಂದ ಮಹಿಳೆಯರು ಶೀಘ್ರ ಪರಾಕಾಷ್ಠೆ ತಲುಪುತ್ತಾರೆ.

ಹೊಸ ಅನುಭವ:
ಹೆಚ್ಚಿನವರು ಸೆಕ್ಸ್ ವಿಡಿಯೋಗಳನ್ನು ವೀಕ್ಷಿಸಿ ಅದೇ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಬೇಕೆಂದು ಬಯಸುತ್ತಾರೆ. ಆದರೆ ನಿಮ್ಮ ಮೊದಲ ಅನುಭವ ಖಂಡಿತ ನೀವು ಊಹಿಸಿದಂತೆ ಇರುವುದಿಲ್ಲ ಎಂಬುದು ನೆನಪಲ್ಲಿರಲಿ. ಏಕೆಂದರೆ ಮೊದಲ ಬಾರಿ ಸಂಭೋಗದಲ್ಲಿ ತೊಡಗಿಕೊಳ್ಳುವಾಗ ಒಂದಷ್ಟು ಸಮಸ್ಯೆಗಳು ಎದುರಾಗಬಹುದು. ಮುಖ್ಯವಾಗಿ ನಿಮ್ಮ ಸಂಗಾತಿ ನೀವು ಇಚ್ಛಿಸಿದಂತೆ ಸಂಭೋಗಿಸಲು ಒಪ್ಪುತ್ತಾಳೆ ಎನ್ನಲಾಗುವುದಿಲ್ಲ. ಹೀಗಾಗಿ ಆರಂಭದ ದಿನಗಳ ಲೈಂಗಿಕ ಕ್ರಿಯೆಯಿಂದ ನಿರಾಶೆಗೊಳಗಾಗಬೇಡಿ. ದಿನ ಕಳೆದಂತೆ ನಿಮ್ಮ ಅನುಭವಕ್ಕನುಗುಣವಾಗಿ ಲೈಂಗಿಕ ಸುಖ ಹೆಚ್ಚಾಗುತ್ತಾ ಹೋಗುತ್ತದೆ.

ಶಿಶ್ನನ ಗೊಂದಲ:
ಸಾಮಾನ್ಯವಾಗಿ ಪೋರ್ನ್​ ವಿಡಿಯೋಗಳಲ್ಲಿ ದೊಡ್ಡ ಗಾತ್ರ ಶಿಶ್ನಗಳನ್ನು ನೋಡಿರುತ್ತೀರಿ. ಇದರಿಂದ ನಿಮ್ಮ ಶಿಶ್ನದ ಬಗ್ಗೆ ಕೀಳರಿಮೆ ಮೂಡಿರಬಹುದು. ಆದರೆ ನೆನಪಿಟ್ಟುಕೊಳ್ಳಿ, ಲೈಂಗಿಕ ಕ್ರಿಯೆಯಲ್ಲಿ ಶಿಶ್ನ ಪಾತ್ರದ ಬಗ್ಗೆ ಚಿಂತಿಸಬೇಕಿಲ್ಲ. ಮಿಲನ ಕ್ರಿಯೆಯಲ್ಲಿ ನಾವು ಎಷ್ಟು ರೋಮ್ಯಾಂಟಿಕ್ ಆಗಿ ವರ್ತಿಸುತ್ತೇವೆ ಅದರಲ್ಲಿ ಲೈಂಗಿಕ ಸಂತೃಪ್ತಿ ಅಡಗಿರುತ್ತದೆ. ಲೈಂಗಿಕ ತಜ್ಞರ ಪ್ರಕಾರ ಲೈಂಗಿಕ ಕ್ರಿಯೆಯಲ್ಲಿ ಮಹಿಳೆಯರಿಗೆ ಸುಖ ಸಿಗುವುದು ಜಿ-ಸ್ಪಾಟ್​ ಮೂಲಕ. ಈ ಸ್ಪಾಟ್​ ಮಹಿಳೆಯರ ಜನನಾಂಗದ ಮುಂಭಾಗದಲ್ಲೇ ಇರುತ್ತದೆ. ಮಿಲನದಲ್ಲಿ ಏರ್ಪಡುವಾಗ ಸಾಮಾನ್ಯವಾಗಿ ಪುರುಷಾಂಗ ಈ ಸ್ಪಾಟ್​ ಅನ್ನು ಸ್ಪರ್ಶಿಸುತ್ತದೆ. ಈ ಭಾಗದಲ್ಲಿ ಜನನಾಂಗ ಹೆಚ್ಚು ತಾಗಿದರೆ ಮಹಿಳೆಯರು ಹೆಚ್ಚು ಸುಖ ಪಡೆಯುತ್ತಾರೆ. ಹೀಗಾಗಿ ಇಲ್ಲಿ ಶಿಶ್ನವಿನ ಗಾತ್ರಕ್ಕಿಂತ ಲೈಂಗಿಕ ಸಾಮರ್ಥ್ಯ ಮುಖ್ಯವಾಗಿರುತ್ತದೆ.

ಕಾಂಡೋಮ್ ಬಳಕೆ:
ಸುರಕ್ಷಿತ ಲೈಂಗಿಕ ಕ್ರಿಯೆ ಹಾಗೂ ಗರ್ಭಧಾರಣೆ ತಡೆಯಲು ಕಾಂಡೋಮ್ ಅತ್ಯಗತ್ಯ. ಆದರೆ ಹೆಚ್ಚಿನ ಸುರಕ್ಷತೆಗಾಗಿ ಎರಡೆರಡು ಕಾಂಡೋಮ್​ಗಳನ್ನು ಬಳಸಬೇಡಿ. ಇದರಿಂದ ಲೈಂಗಿಕ ಸಂತೃಪ್ತಿಯು ಕಡಿಮೆಯಾಗುತ್ತದೆ. ಹಾಗೆಯೇ ಕಾಂಡೋಮ್ ಜಾರಿಕೊಳ್ಳಬಹುದು. ನೀವು ಈ ಹಿಂದೆ ಕಾಂಡೋಮ್ ಬಳಸದೇ ಸಂಭೋಗ ನಡೆಸಿದ್ದರೆ, ಈ ಬಾರಿ ಸುಖದಲ್ಲಿ ವ್ಯತ್ಯಾಸಗಳು ಕಂಡು ಬರುತ್ತದೆ.

ಋತುಚಕ್ರದ ವೇಳೆ ಲೈಂಗಿಕ ಕ್ರಿಯೆ:
ಮಹಿಳೆಯರಿಗೆ ಋತುಚಕ್ರವಾಗಿರುವ ವೇಳೆ ಲೈಂಗಿಕ ಕ್ರಿಯೆ ನಡೆಸುವುದು ಉತ್ತಮವಲ್ಲ. ಇಂತಹ ವೇಳೆ ಸಂಭೋಗದಲ್ಲಿ ತೊಡಗುವುದರಿಂದ ಸೋಂಕುಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆಯೇ ಪಿರಿಯಡ್ಸ್ ವೇಳೆ ಸೆಕ್ಸ್ ಮಾಡಿದರೆ ಗರ್ಭಧಾರಣೆ ಸಾಧ್ಯತೆ ಕಡಿಮೆ ಇರುತ್ತದೆ. ಹೀಗಾಗಿ ಸಾಧ್ಯವಾದಷ್ಟು ಋತುಚಕ್ರ(ಪಿರಿಯಡ್ಸ್) ಸಮಯದಲ್ಲಿ ಲೈಂಗಿಕ ಬಂಧದಿಂದ ದೂರವಿರಿ.

ಆತಂಕಕ್ಕೆ ಕಾರಣವಾಗಬಹುದು:
ಮೊದಲ ಬಾರಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಾಗ ಆತಂಕಕ್ಕೆ ಒಳಗಾಗಬಹುದು. ಅದರಲ್ಲೂ ಮುಖ್ಯವಾಗಿ ಸಂಭೋಗದ ಸಮಯದಲ್ಲಿ ನಿಮ್ಮ ಜನನೇಂದ್ರಿಯ ಒಳಗೆ ಹೋಗದಿರಬಹುದು. ಇದರಿಂದ ಚಿಂತಿತರಾಗದಿರಿ. ಇಂತಹ ಸಮಸ್ಯೆ ಸಾಮಾನ್ಯವಾಗಿ ಆರಂಭದಲ್ಲಿ ಎಲ್ಲರಲ್ಲೂ ಕಾಣಿಸಿರುತ್ತದೆ. ಹೀಗಾಗಿ ಮೊದಲ ಸಂಭೋಗದ ಭೀತಿಯನ್ನು ಬಿಟ್ಟು ಆರಾಮಾಗಿರಿ. ಏಕೆಂದರೆ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಇಲ್ಲಿ ಯಾರಿಗೂ ಸಾಬೀತು ಮಾಡುವ ಅಗತ್ಯವಿರುವುದಿಲ್ಲ. ನಿರಂತರ ಲೈಂಗಿಕ ಕ್ರಿಯೆಯಲ್ಲಿ ನಿರಂತರ ತೊಡಗಿದಂತೆ ನಿಮ್ಮ ಅನುಭವ ಸಹ ಹೆಚ್ಚಾಗುತ್ತದೆ.

ಎರಡು ದೇಹಗಳ ಮಿಲನ ಎಂಬುದು ಮನುಷ್ಯನ ಜೀವನದ ಅದ್ಭುತ ಅನುಭವ. ಈ ಬಗ್ಗೆ ಹೆಚ್ಚಿನ ಶಿಕ್ಷಣ ಪಡೆಯುವ ಮೂಲಕ ನಿಮ್ಮ ವೈವಾಹಿಕ ಜೀವನವನ್ನು ಸುಖಕರವನ್ನಾಗಿಸಬಹುದು. ಇತ್ತೀಚಿನ ದಿನಗಳಲ್ಲಿ ದಾಂಪತ್ಯ ವಿರಸಕ್ಕೆ ಲೈಂಗಿಕ ಅಸಂತೃಪ್ತಿ ಸಹ ಕಾರಣವಾಗುತ್ತಿದೆ ಎಂಬುದು ನೆನಪಿನಲ್ಲಿರಲಿ.

Comments are closed.