ಕ್ರೀಡೆ

ಐಸಿಸಿ ಏಕದಿನ ಬ್ಯಾಟ್ಸ್ ಮನ್ – ಬೌಲರ್ ಗಳ ಶ್ರೇಯಾಂಕಿತ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದ ಕೊಹ್ಲಿ, ಬೂಮ್ರಾ

Pinterest LinkedIn Tumblr

ಲಂಡನ್ : ವಿಶ್ವಕಪ್ ಮುಕ್ತಾಯಗೊಂಡ ನಂತರವೂ ಐಸಿಸಿ ಏಕದಿನ ಬ್ಯಾಟ್ಸ್ ಮನ್ ಹಾಗೂ ಬೌಲರ್ ಗಳ ಶ್ರೇಯಾಂಕಿತ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬೌಲರ್ ಜಸ್ಪ್ರೀತ್ ಬೂಮ್ರಾ ಅಗ್ರ ಶ್ರೇಯಾಂಕದಲ್ಲಿಯೇ ಮುಂದುವರಿದಿದ್ದಾರೆ.

ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಭಾರತ ಸೋಲಿಗೆ ಶರಣಾಗಿತ್ತು. ರೋಚಕ ಫೈನಲ್ ಪಂದ್ಯದಲ್ಲಿ ಚಾಂಫಿಯನ್ ಆದ ಇಂಗ್ಲೆಂಡ್ ಹಾಗೂ ರನ್ನರ್ ಆಫ್ ನ್ಯೂಜಿಲೆಂಡ್ ತಂಡದ ಶ್ರೇಯಾಂಕದಲ್ಲಿ ಏರಿಕೆಯಾಗಿದೆ.

ವಿಶ್ವಕಪ್ ಟೂರ್ನಿಯ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯದಲ್ಲಿ ನೀಡಿದ ಕಾರ್ಯಕ್ಷಮತೆ ಆಧಾರದ ಮೇಲೆ ಐಸಿಸಿ ಶ್ರೇಯಾಂಕವನ್ನು ಆಪ್ ಡೇಟ್ ಮಾಡಲಾಗಿದೆ. ಟೂರ್ನಮೆಂಟ್ ಪ್ಲೆಯರ್ ಕೇನ್ ವಿಲಿಯಮ್ಸ್ ವೃತ್ತಿ ಜೀವನದಲ್ಲಿ ಅತಿ ಹೆಚ್ಚು 799 ಅಂಕಗಳೊಂದಿಗೆ ಆರನೇ ಸ್ಥಾನಪಡೆದುಕೊಂಡಿದ್ದಾರೆ. ರಾಸ್ ಟೇಲರ್ ಐದನೇ ಸ್ಥಾನದಲ್ಲಿದ್ದು, ಟೀಂ ಇಂಡಿಯಾದ ಆಟಗಾರ ರೋಹಿತ್ ಶರ್ಮಾ 2, ಬಾಬಾರ್ ಅಜಾಮ್ 3, ಪಾಪ್ ಡು ಫ್ಲೇಸಿಸ್ 4ನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ವೃತ್ತಿಜೀವನದ ಅತ್ಯುತ್ತಮ 694 ಪಾಯಿಂಟ್ಸ್ ಗಳೊಂದಿಗೆ ಐದನೇ ಸ್ಥಾನದಲ್ಲಿದ್ದು, ಟಾಪ್ 20ರಲ್ಲಿ ಮುಂದುವರೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 65 ಎಸೆತಗಳಲ್ಲಿ 85 ರನ್ ಗಳಿಸಿದ ಜಾಸನ್ ರಾಯ್ ಮೊದಲ ಬಾರಿಗೆ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ಕಿವೀಸ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಭರ್ಜರಿ 77 ರನ್ ಗಳಿಸಿದ ಟೀಂ ಇಂಡಿಯಾ ಆಟಗಾರ ರವೀಂದ್ರ ಜಡೇಜಾ 108ನೇ ಸ್ಥಾನದಿಂದ 24 ನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾದ ಕ್ಯಾಪ್ಟನ್ ಸ್ಟೀವ್ ಸ್ಮೀತ್ ಮತ್ತು ವಿಕೀಟ್ ಕೀಪರ್ ಕ್ರಮವಾಗಿ 29 ಹಾಗೂ 32 ನೇ ಸ್ಥಾನಕ್ಕೇರಿದ್ದಾರೆ.

ಇನ್ನೂ ಬೌಲರ್ ಗಳ ಪಟ್ಟಿಯಲ್ಲಿ ಸೆಮಿಫೈನಲ್ ನಲ್ಲಿ 20ಕ್ಕೆ ಮೂರು ವಿಕೆಟ್ ಹಾಗೂ ಫೈನಲ್ ನಲ್ಲಿ 37ಕ್ಕೆ ಮೂರು ವಿಕೆಟ್ ಪಡೆದುಕೊಂಡಿದ್ದ ಕ್ರಿಸ್ ವೊಕ್ಸ್ ವೃತ್ತಿ ಜೀವನದ ಅತ್ಯುತ್ತಮ 676 ಪಾಯಿಂಟ್ಸ್ ಪಡೆದುಕೊಂಡಿದ್ದು, ಏಳನೇ ಸ್ಥಾನದಲ್ಲಿದ್ದಾರೆ. ಜೊಪ್ರಾ ಅರ್ಚೇರ್ ಮೊದಲ ಬಾರಿಗೆ ಟಾಪ್ 30ರಲ್ಲಿ ಸ್ಥಾನಪಡೆದುಕೊಂಡಿದ್ದಾರೆ. ಕಿವೀಸ್ ಬೌಲರ್ ಮ್ಯಾಟ್ ಹೆನ್ರಿ ಟಾಪ್ 10 ನೇ ಸ್ಥಾನದಲ್ಲಿದ್ದಾರೆ.

ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ವೃತ್ತಿಜೀವನದ ಅತ್ಯುತ್ತಮ 319 ಪಾಯಿಂಟ್ ಗಳೊಂದಿಗೆ 2 ನೇ ಸ್ಥಾನದಲ್ಲಿದ್ದರೆ ಟೀಂ ಇಂಡಿಯಾದ ಬೌಲರ್ ಜಸ್ಪ್ರೀತ್ ಬೂಮ್ರಾ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.

Comments are closed.